ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರು ಕಾಶ್ಮೀರ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ADVERTISEMENT
ನಟಿ ಶ್ವೇತಾ ಚಂಗಪ್ಪ ಅವರ ಚಿತ್ರಗಳಿಗೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಕಾಶ್ಮೀರವನ್ನು ಕಣ್ತುಂಬಿಕೊಂಡು ಒಂದು ವರ್ಷ ಕಳೆದಿದೆ. ಆದರೆ ಅಲ್ಲಿನ ನೆನಪು ಶಾಶ್ವತ. ಏನೇ ಹೇಳಿ, ಎಷ್ಟೇ ಪ್ರಪಂಚಸುತ್ತಿದರೂ, ನಮ್ಮ ಭಾರತದ ಕಾಶ್ಮೀರದ ಪ್ರಕೃತಿ ಸೌಂದರ್ಯವನ್ನ ಯಾವ ಜಾಗವೂ ಮೀರಿಸೋದಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಶ್ವೇತಾ ಚಂಗಪ್ಪ ಅವರು ಶಿವರಾಜ್ ಕುಮಾರ್ ಜತೆ ‘ವೇದ’ ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡದ ಖಾಸಗಿ ವಾಹಿನಿಯ ರಿಯಾಲಿಟಿ ಶೋಗಳ ನಿರೂಪಣೆ ಜತೆ, ಚಿತ್ರಗಳಲ್ಲೂ ನಟಿಸುತ್ತಿರುತ್ತಾರೆ.