ಬೆಂಗಳೂರು, 25 ಜುಲೈ 2025: ಕರುನಾಡಿನ ಎಲ್ಲರ ನೆಚ್ಚಿನ ವಾಹಿನಿ ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸ ರಿ ಗ ಮ ಪ, ವೀಕೆಂಡ್ ವಿತ್ ರಮೇಶ್, ಡ್ರಾಮಾ ಜೂನಿಯರ್ಸ್ ಮತ್ತು ಕಾಮಿಡಿ ಕಿಲಾಡಿಗಳು ಸೇರಿ ಹಲವಾರು ಶೋಗಳ ಮೂಲಕ ವೀಕ್ಷಕರನ್ನು ಮನರಂಜಿಸುತ್ತಾ ಬಂದಿದೆ. ಈ ಪಟ್ಟಿಗೆ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಸೇರ್ಪಡೆಯಾಗಿದ್ದು, ಇದು ಜೀವನದ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದಾದ ಮದುವೆಗೆ ತಯಾರಿ ನಡೆಸುತ್ತಿರುವ ಯುವ ಬ್ಯಾಚುಲರ್ಗಳ ಜೀವನ ಮತ್ತು ವ್ಯಕ್ತಿತ್ವಗಳ ಮೇಲೆ ಕೇಂದ್ರೀಕರಿಸುವ ರಿಯಾಲಿಟಿ ಶೋ ಆಗಿದೆ.

ಭರ್ಜರಿ ಬ್ಯಾಚುಲರ್ಸ್ ಮೊದಲ ಸೀಸನ್ ನ ಯಶಸ್ಸಿನ ಬಳಿಕ ಎರಡನೇ ಸೀಸನ್ ಕೂಡ ಕರ್ನಾಟಕದಾದ್ಯಂತ ಪ್ರೇಕ್ಷಕರ ಹೃದಯ ಗೆದ್ದಿದೆ. ಈ ಸೀಸನ್ನಲ್ಲಿ ಹೊಸ ಬ್ಯಾಚುಲರ್ಗಳನ್ನು ಪರಿಚಯಿಸಲಾಯಿತು, ಅವರು ತಮ್ಮ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಸ್ವಾಭಾವಿಕತೆ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಪರೀಕ್ಷಿಸಲು ಮಾಡಲಾಗಿದ್ದ ಅನೇಕ ಸುತ್ತುಗಳಲ್ಲಿ ಭಾಗವಹಿಸಿ ಎಲ್ಲರ ಮನಗೆದ್ದಿದ್ದಾರೆ. ಇನ್ನು ಈ ಸೀಸನ್ ನಲ್ಲಿ ಬ್ರಹ್ಮಚಾರಿ vs ಸಂಸಾರಿ, ಡೆಡಿಕೇಶನ್ ರೌಂಡ್, ಕಂಪ್ಯಾಟಿಬಿಲಿಟಿ ರೌಂಡ್, ಪ್ರೊಪೋಸ್ ರೌಂಡ್, ಸೀನಿಯರ್ಸ್ vs ಜೂನಿಯರ್ಸ್ ಹೀಗೆ ವಿಭಿನ್ನ ಸುತ್ತುಗಳು ಇದ್ದು ಇದರಲ್ಲಿ ಏಂಜೆಲ್ಸ್ ಮತ್ತು ಬ್ಯಾಚುಲರ್ಸ್ ಸಕ್ಕತಾಗಿ ಭಾಗವಹಿಸಿ ಎಲ್ಲರನ್ನೂ ಮನರಂಜಿಸಿದ್ದಾರೆ. ಅಷ್ಟೇ ಅಲ್ಲದೇ ಈ ಶೋ ಭಾವನಾತ್ಮಕವಾಗಿ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಅದ್ಬುತ ನಿರೂಪಣೆಯ ಮೂಲಕ ನಿರಂಜನ್ ದೇಶಪಾಂಡೆ ಈ ಶೋನ ನಡೆಸಿಕೊಟ್ಟಿದ್ದು, ಜಡ್ಜ್ಗಳಾದ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಶೋನ ಮತ್ತೊಂದು ಕೇಂದ್ರ ಬಿಂದುವಾಗಿದ್ದರು. ಹಾಗೆಯೇ ಶೋನಲ್ಲಿ ಭಾಗವಹಿಸಿದ ಬ್ಯಾಚುಲರ್ಸ್ ಹಾಗೂ ಏಂಜೆಲ್ಸ್ ಗಳು ತಮ್ಮದೇ ಆದ ಶೈಲಿಯಲ್ಲಿ ವೀಕ್ಷಕರನ್ನು ಮನರಂಜಿಸಿದ್ದಾರೆ. ಅಂತಿಮ ಸುತ್ತಿನಲ್ಲಿ ಸುನೀಲಾ-ಅಮೃತಾ, ದರ್ಶನ್-ಅಪೇಕ್ಷಾ, ರಕ್ಷಕ್ ಬುಲೆಟ್- ರಮೋಲ, ಹುಲಿ ಕಾರ್ತಿಕ್- ಧನ್ಯ, ಗಾಬ್ರಿ -ಅನನ್ಯಾ, ಉಲ್ಲಾಸ್-ಪವಿ, ಪ್ರವೀಣ್ ಜೈನ್- ಸುಕೃತಾ, ಪ್ರೇಮ್ ಥಾಪಾ-ವಿಜಯಲಕ್ಷ್ಮಿ, ಡ್ರೋನ್ ಪ್ರತಾಪ್-ಗಗನಾ, ಮತ್ತು ಸೂರ್ಯಾ- ಅಭಿಜ್ಞಾ ಭಾಗವಹಿಸಲಿದ್ದಾರೆ. ಹಾಗೆಯೇ ಭರ್ಜರಿ ಬ್ಯಾಚುಲರ್ ಸೀಸನ್ 2 ನ ವಿಜೇತರು ಯಾರಾಗುತ್ತಾರೆ ಅನ್ನುವುದಕ್ಕೆ ಈ ವಾರಾಂತ್ಯದಲ್ಲಿ ಸಿಗಲಿದೆ ಉತ್ತರ.

ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನ ವಿಜೇತರು ಯಾರಾಗ್ತಾರೆ? ತಿಳ್ಕೊಳೋಕೆ ಮಿಸ್ ಮಾಡದೇ ನೋಡಿ ಜೀ಼ ಕನ್ನಡ ಇದೇ ಭಾನುವಾರ ಸಂಜೆ 6 ಗಂಟೆಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.