ಶನಿವಾರ, ಸೆಪ್ಟೆಂಬರ್ 18, 2021
29 °C
ಕಿಚ್ಚನಿಗೆ ಬಂದ ಸಂದೇಹ

Bigg Boss 8: ಬಿಗ್‌ ಬಾಸ್‌ ಮನೆಯಲ್ಲಿ ಡಬಲ್‌ ರೈಡಿಂಗ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಗ್‌ ಬಾಸ್‌ ಮನೆಯಲ್ಲಿ ನಿಮ್ಮದು ಡಬಲ್‌ ರೈಡಿಂಗೋ, ಸಿಂಗಲ್‌ ರೈಡಿಂಗೋ?

– ಇದು ದಿವ್ಯಾ ಉರುಡಗ ಅವರಿಗೆ ಕಿಚ್ಚ ಸುದೀಪ್‌ ಅವರ ಪ್ರಶ್ನೆ. ಕೊಂಚ ನಾಚಿ, ಸಣ್ಣ ಗಾಂಭೀರ್ಯದಲ್ಲಿ ಪ್ರತಿಕ್ರಿಯಿಸಿದ ದಿವ್ಯಾ ನಾನು ಬದಲಾಗಿದ್ದೇನೆ. ಮೊದಲಿನಂತೆ ಬಿಗ್‌ ಬಾಸ್‌ ಮನೆಯಲ್ಲಿ ಇರುವುದಿಲ್ಲ ಎಂದರು.

ದಿವ್ಯಾ ಪದೇ ಪದೇ ಅರವಿಂದ್‌ ಕೆ.ಪಿ. ಪರ ವಹಿಸಿಕೊಂಡು ಬರುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಸುದೀಪ್‌ ಅವರಿಗೆ ಸಣ್ಣಗೆ ತಿವಿದ ಪರಿ ಇದು. ಜೂನ್‌ 26ರ ಸಂಚಿಕೆಯಲ್ಲಿ ಇಂಥದ್ದೊಂದು ಸನ್ನಿವೇಶ ವೀಕ್ಷಕರ ಗಮನಕ್ಕೂ ಬಂತು. ಯಾಕೋ ದಿವ್ಯಾ ಅವರು ಅರವಿಂದ್‌ ಅವರ ಮೇಲೆ ಅವಲಂಬಿತರಾದಂತೆ ಅನಿಸತೊಡಗಿತ್ತು.

ಬಿಗ್‌ ಬಾಸ್‌ ಮನೆಯಲ್ಲಿ ಅದೃಷ್ಟದ ಮೇಲೆ ನಿಂತವರು ಯಾರು ಎಂಬ ಪ್ರಶ್ನೆಗೆ ಬಹುತೇಕರಿಂದ ಶಮಂತ್‌ ಅವರ ಹೆಸರು ಬಂದಿತು. ಇನ್ನು ಕಠಿಣ ಪರಿಶ್ರಮದಿಂದ ಉಳಿದವರು ಯಾರು? ಎಂಬ ಪ್ರಶ್ನೆಗೆ ಎಲ್ಲರೂ ಅವರವರ ಹೆಸರನ್ನೇ ಹೇಳಿಕೊಂಡರು. ಆಗ ಸುದೀಪ್‌ ಬೇರೆಯವರ ಹೆಸರನ್ನು ಹೇಳುವಂತೆ ಸ್ಪರ್ಧಿಗಳಿಗೆ ಸೂಚಿಸಿದರು. ಇದೇ ಪ್ರಶ್ನೆ ದಿವ್ಯಾ ಅವರಿಗೂ ಕೇಳಿದಾಗ ಅರವಿಂದ್‌ ಹೆಸರು ಹೇಳಿದರು. ಆಗ ಪ್ರತಿಕ್ರಿಯಿಸಿದ ಸುದೀಪ್‌ ಅರವಿಂದ್‌ ಬಿಟ್ಟು ಬೇರೆಯವರ ಹೆಸರನ್ನೂ ಹೇಳಿ ಎಂದು ಸಣ್ಣಗೆ ಚುಚ್ಚಿದರು.

ಮಂಜು ಮತ್ತು ದಿವ್ಯಾ ಸುರೇಶ್‌ ಅವರ ವರ್ತನೆಯೂ ಕೊಂಚ ಬದಲಾಗಿದೆ. ಅಗತ್ಯಕ್ಕೆ ತಕ್ಕಷ್ಟು ಎಂಬಂತೆ ಮನೆಯಲ್ಲಿ ಬೆರೆಯುತ್ತಿದ್ದಾರೆ. ಮಂಜುವಿನ ನಗೆಬುಗ್ಗೆ ಮುಂದುವರಿದಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು