ಬೆಂಗಳೂರು: ವೀಕೆಂಡ್ ಬಂತೆಂದರೆ ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ನ ಬಿಸಿ ಏರಲು ಶುರುವಾಗುತ್ತದೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಯಾರು ಭಾಗವಹಿಸಬೇಕು? ಯಾರು ಯಾರನ್ನು ಸಪೋರ್ಟ್ ಮಾಡಬೇಕು? ಲೆಕ್ಕಾಚಾರ ಹೇಗಿರಬೇಕು ಇವೆಲ್ಲ ಚರ್ಚೆಗಳಲ್ಲಿಯೇ ಸ್ಫರ್ಧಿಗಳು ತಲ್ಲೀನರಾಗುತ್ತಿದ್ದರು.
ಆದರೆ ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಬಿಗ್‌ಬಾಸ್ ಒಂದು ಸಣ್ಣ ಟ್ವಿಸ್ಟ್ ಕೊಟ್ಟಿದ್ದಾರೆ. ಟಾಸ್ಕ್ ಅನ್ನು ಯಾವ 5 ಸ್ಪರ್ಧಿಗಳು ಆಡಬೇಕು ಎಂದು ನೀವೇ ನಿರ್ಧರಿಸಿಕೊಳ್ಳಿ ಎಂದು ಹೇಳಿದ್ದಾರೆ.
ನಮ್ರತಾ, ಸಿರಿ, ಕಾರ್ತಿಕ್, ಪ್ರತಾಪ್, ವರ್ತೂರು ಈ ಐವರು ಕ್ಯಾಪ್ಟನ್ಸಿ ಟಾಸ್ಕ್ ಆಡಬೇಕು ಎಂದು ಮನೆಯ ಸದಸ್ಯರು ವೋಟಿಂಗ್ ಮೂಲಕ ಆರಿಸಿದ್ದಾರೆ. ಆದರೆ ತುಕಾಲಿ ಸಂತೋಷ್ ಅವರಿಗೆ ಈ ವೋಟಿಂಗ್ ಬಗ್ಗೆ ಆಕ್ಷೇಪವಿದೆ.