ಕನ್ನಡದ ಬಿಗ್ಬಾಸ್ ಮನೆಯಲ್ಲಿ ಯಾವಾಗ ಏನೆಲ್ಲಾ ಆಗುತ್ತದೆ ಎಂದು ಹೇಳೋದು ಬಲು ಕಷ್ಟ. ಕಳೆದ ಸೀಸನ್ಗಳಲ್ಲಿ ಗೆಳೆಯರಾಗಿ, ಆತ್ಮೀಯರಾಗಿ ಇದ್ದವರು ನಾಳೆ ಶತ್ರುಗಳಾಗಬಹುದು. ಇಂದು ಶತ್ರುಗಳ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದವರು ಮುಂದೆ ಮಿತ್ರರಾಗಿ ಬದಲಾಗಬಹುದು.

ಆದರೆ, ಈ ಸೀಸನ್ನಲ್ಲಿ ಕಳೆದ ವಾರ ನನಗೆ ಒಳ್ಳೆಯ ಜಂಟಿ ಸಿಕ್ಕಿದ್ದಾರೆ. ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದ ಜೋಡಿಯೇ ಎಲ್ಲರ ಮುಂದೆ ಕಿತ್ತಾಡಿಕೊಂಡಿದೆ.
.ಬಿಗ್ಬಾಸ್ ಷೋ ಬಂದ್ | ನಟ್ಟು ಬೋಲ್ಟ್ ಮಿನಿಸ್ಟರ್ ಸೇಡು ತೀರಿಸಿಕೊಂಡಿದ್ದಾರೆ: JDS.
ಹೌದು, ಮಂಜು ಭಾಷಿಣಿ ಹಾಗೂ ರಾಶಿಕಾ ವೀಕ್ಷಕರಿಂದ ಕಡಿಮೆ ವೋಟ್ ಪಡೆದು ಜಂಟಿಗಳಾಗಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಜಂಟಿಗಳಾಗಿದ್ದ ಮಂಜು ಭಾಷಿಣಿ ಹಾಗೂ ರಾಶಿಕಾ ಒಬ್ಬರಿಗೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಆದರೆ ಈಗ ಈ ಇಬ್ಬರು ಬಿಗ್ಬಾಸ್ ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ.

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪ್ರೊಮೋದಲ್ಲಿ ಮಂಜು ಭಾಷಿಣಿ ಹಾಗೂ ರಾಶಿಕಾ ಜಗಳವಾಡಿದ್ದಾರೆ. ಪ್ರೊಮೋದಲ್ಲಿ, ‘ಮಂಜು ಭಾಷಿಣಿ ಈ ಬಾಲಕಿ ಆವಾಗವಾಗ ವಾಶ್ ರೂ.. ವಾಶ್ ರೂ (ಶೌಚಾಲಯ) ಎನ್ನುತ್ತ ನನ್ನ ಪ್ರಾಣ ತಿನ್ನುತ್ತಾಳೆ’ ಎನ್ನುತ್ತಾರೆ. ಆಗ ಕಾಕ್ರೋಜ್ ಸುಧಿ ‘ನಾನು ಹೇಳಿದಾಗಲೇ ಹೋಗಬೇಕು’ ಎಂದು ಹೇಳಿದ್ದಾರೆ. ಅದಕ್ಕೆ ಕೋಪಗೊಂಡ ರಾಶಿಕಾ 'ವೈಯಕ್ತಿಕ ವಿಚಾರಕ್ಕೆ ಹೋಗಬೇಡ ಕಾಯಬೇಕು ಅಂದರೆ ಹೇಗಾಗುತ್ತೆ’ ಎಂದು ಸಿಟ್ಟಾಗಿದ್ದಾರೆ.

ಇದಾದ ಬಳಿಕ ರಾಶಿಕಾ ಮಂಜು ಭಾಷಿಣಿ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾರೆ. ಈ ಇಬ್ಬರ ಜಗಳ ನೋಡಿ ಅಶ್ವಿನಿ ಹಾಗೂ ಜಾಹ್ನವಿ ಚೆನ್ನಾಗಿದೆ.. ಚೆನ್ನಾಗಿದೆ.. ಎಂದು ಕೂಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.