ಕಳೆದ ಸಂಚಿಕೆಯಲ್ಲಿ ಬಿಗ್ಬಾಸ್ ಮನೆಯಲ್ಲಿ ನಿಗೂಢವಾದ ಶಬ್ದವೊಂದು ಕೇಳಿ ಬಂದಿತ್ತು. ಆ ಶಬ್ದಕ್ಕೆ ಸ್ಪರ್ಧಿಗಳು ಕೂಡ ಬೆಚ್ಚಿ ಬಿದ್ದಿದ್ದರು. ಆ ನಿಗೂಢ ಶಬ್ದದ ಹಿಂದೆ ಇಬ್ಬರ ಕೈವಾಡ ಇರುವುದು ನಿನ್ನೆಯ ಸಂಚಿಕೆಯಲ್ಲಿ ಗೊತ್ತಾಗಿದೆ.
.ಬಿಗ್ಬಾಸ್ ಮನೆಯಲ್ಲಿ ಗೆಜ್ಜೆ ಸದ್ದು: ದಿಢೀರ್ ಎದ್ದು ಕುಳಿತ ಸ್ಪರ್ಧಿಗಳು.
ನಿನ್ನೆ (ಬುಧವಾರ) ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಎಲ್ಲಾ ಸ್ಪರ್ಧಿಗಳು ಮಂಚದ ಮೇಲೆ ಮಲಗಿಕೊಂಡಿದ್ದರು. ಆಗ ದಿಢೀರನೆ ಗೆಜ್ಜೆ ಶಬ್ದ ಕೇಳಿಸಿತ್ತು. ಗೆಜ್ಜೆ ಶಬ್ದ ಕೇಳುತ್ತಿದ್ದಂತೆ ಕೂಡಲೇ ಸ್ಪರ್ಧಿಗಳು ಒಬ್ಬೊಬ್ಬರಾಗಿ ಆಚೆ ಬಂದಿದ್ದಾರೆ. ಬಳಿಕ ಬಿಗ್ಬಾಸ್ ಆವರಣಕ್ಕೆ ಬಂದು ನಮಗೆ ಭಯ ಆಗುತ್ತಿದೆ ಬಿಗ್ಬಾಸ್ ಬಾಗಿಲನ್ನು ಮುಚ್ಚಿ ಎಂದು ಜಾಹ್ನವಿ ಕೇಳಿಕೊಂಡಿದ್ದರು.

ಆದರೆ, ಕಳೆದ ಸಂಚಿಕೆಯಲ್ಲಿ ಆ ಗೆಜ್ಜೆ ಶಬ್ದ ಮಾಡಿದ್ದು ಯಾರು ಎಂದು ಗೊತ್ತಾಗಿದೆ. ಇದಕ್ಕೂ ಮೊದಲು ರಕ್ಷಿತಾ ಶೆಟ್ಟಿ ‘ಶೌಚಾಲಯದಲ್ಲಿ ರಾತ್ರಿ 1 ಗಂಟೆಗೆ ಆಪ್ತಮಿತ್ರ ಸಿನಿಮಾದ ರಾರಾ ಸಾಂಗ್ಗೆ ರಕ್ಷಿತಾ ಡ್ಯಾನ್ಸ್ ಮಾಡುತ್ತಿದ್ದಳು. ಲವ್ ಅಂತೆಲ್ಲ ಏನೇನೋ ಮಾತನಾಡುತ್ತಾ ಇದ್ದಳು’ ಎಂದು ಅಶ್ವಿನಿ ಮತ್ತು ಜಾಹ್ನವಿ ಮನೆಮಂದಿಗೆ ಸುಳ್ಳು ಸುದ್ದಿ ಹರಡಿಸಿದ್ದಾರೆ. ಇವರಿಬ್ಬರು ಆಡಿದ ಮಾತು ರಕ್ಷಿತಾಗೆ ಗೊತ್ತಾಗಿದೆ.

ಆ ಕೂಡಲೇ ರಕ್ಷಿತಾ ಮಂಜು ಭಾಷಿಣಿ ಹಾಗೂ ಇನ್ನುಳಿದ ಸ್ಪರ್ಧಿಗಳ ಬಳಿ ‘ನಾನು ಡ್ಯಾನ್ಸ್ ಮಾಡಿಲ್ಲ. ನನಗೆ ರಾರಾ ಸಾಂಗ್ ಗೊತ್ತೇ ಇಲ್ಲ. ಇವರೆಲ್ಲ ಯಾಕೆ ಹೀಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ಭೂತ ಬರುತ್ತಾ ಅಂತ ಜನರು ಅಂದುಕೊಳ್ಳುವುದು ಇಲ್ಲವಾ? ಇವರ ಮಾತುಗಳಿಂದ ನನಗೆ ನೋವಾಗುವುದಿಲ್ವಾ? ಎಂದು ಘಟನೆ ಬಗ್ಗೆ ವಿವರಿಸುತ್ತಾ ಅತ್ತಿದ್ದಾರೆ. ಇದಾದ ಬಳಿಕ ಗಿಲ್ಲಿ ಜೊತೆಗೆ ಕುಳಿತುಕೊಂಡಾಗ ರಕ್ಷಿತಾ ಜಾಹ್ನವಿ ಅವರನ್ನ ನೋಡಿ, ಭಯ ಇದ್ದರೆ ಅಲ್ಲೇ ಇರಬೇಕು. ಅಷ್ಟು ರಾತ್ರಿ ಯಾಕೆ ಶೌಚಾಲಯಕ್ಕೆ ಬರಬೇಕು ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ ಶಬ್ದ ಮಾಡಿದ್ದ ಜಾಹ್ನವಿ ಅವರ ಮಂಚದ ಮೇಲೆ ಗೆಜ್ಜೆ ರಕ್ಷಿತಾ ಕೈಗೆ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.