ಬಿಗ್ಬಾಸ್ ಸೀಸನ್ 12ರ ಮೊದಲ ಮಿಡ್ ಸೀಸನ್ ಫಿನಾಲೆ ಇದೇ ಶನಿವಾರ ಹಾಗೂ ಭಾನುವಾರ ನಡೆಯಲಿದೆ. ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ರಾಶಿಕಾ, ಮಾಳು ನಿಪನಾಳ ಮೊದಲ ಮಿಡ್ ಸೀಸನ್ ಫಿನಾಲೆಯ ಫೈನಲಿಸ್ಟ್ ಅಭ್ಯರ್ಥಿಗಳಾಗಿದ್ದಾರೆ. ಇದರ ಮಧ್ಯೆ ಬಿಗ್ಬಾಸ್ ಚಟುವಟಿಕೆ ಒಂದನ್ನು ನೀಡಿದ್ದು, ಇದೇ ವೇಳೆ ರಕ್ಷಿತಾ ಮೇಲೆ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಬಿಗ್ಬಾಸ್ ಪತ್ರಿಕಾಗೋಷ್ಠಿ ಎಂಬ ಟಾಸ್ಕ್ ಕೊಟ್ಟಿದ್ದಾರೆ. ಅದರಲ್ಲಿ ರಕ್ಷಿತಾಳನ್ನೇ ಗುರಿಯಾಗಿಸಿಕೊಂಡು ‘ನೀವು ಯಾಕೆ ಈ ಮನೆಯಲ್ಲಿ ಮುಂದುವರಿಯಬೇಕು’ ಎಂದು ಫೈನಲಿಸ್ಟ್ಗಳು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
.ಬಿಗ್ಬಾಸ್ ಮೊದಲ ಫಿನಾಲೆಗೆ ಅಖಾಡ ಸಿದ್ಧ: ಅಳಿವು-ಉಳಿವಿನ ಹೋರಾಟದಲ್ಲಿ ಸ್ಪರ್ಧಿಗಳು.ದೊಡ್ಡ ನಾಗವಲ್ಲಿ ನೀವೇ: ಜಾಹ್ನವಿ, ಅಶ್ವಿನಿ ಮೇಲೆ ತಿರುಗಿಬಿದ್ದ ರಕ್ಷಿತಾ ಶೆಟ್ಟಿ.
ರಕ್ಷಿತಾ ಕುರ್ಚಿ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ರಾಶಿಕಾ ಅವರು ಯಾಕಷ್ಟು ಮುಗ್ಧ ಮುಖ ಮಾಡಿಕೊಂಡು ಕುಳಿತುಕೊಂಡಿದ್ದೀಯಾ? ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಅಶ್ವಿನಿ ಗೌಡ ‘ಅದು ನಿಮ್ಮ ಸ್ಟ್ರಾಟಜೀನಾ’ ಎಂದು ಕೇಳಿದ್ದಾರೆ. ಇದಕ್ಕೆ ರಕ್ಷಿತಾ, ‘ನನ್ನ ಫೇಸ್ ಇರೋದೆ ಮುಗ್ಧ ಏನು ಮಾಡೋದು’ ಎಂದಿದ್ದಾರೆ. ಆಗ ಮತ್ತೆ ಕಾಕ್ರೋಚ್ ಸುಧಿ ‘ನೀವು ಡೇ ಶಿಫ್ಟ್ ಮಾಡಿದ್ದಕ್ಕಿಂತ ನೈಟ್ ಶಿಫ್ಟ್ ಮಾಡಿದ್ದೇ ಜಾಸ್ತಿ’ ಅಂತ ಕೇಳಿದ್ದಾರೆ. ಮತ್ತೆ ’ಇನ್ನೊಬ್ಬರಿಗೆ ಗೌರವ ಕೊಡಬೇಕು ಅನ್ನೋದು ಇಲ್ವಾ’ ಅಂತ ಅಶ್ವಿನಿ ಗೌಡ ಪ್ರಶ್ನಿಸುತ್ತಾರೆ. ಮತ್ತೆ ಕೊನೆಯದಾಗಿ ‘ನೀವು ಯಾಕೆ ಈ ಮನೆಯಲ್ಲಿ ಮುಂದುವರಿಯಬೇಕು’ ಎಂದು ಪ್ರಶ್ನೆ ಮಾಡಿ ಸುದ್ದಿಗೋಷ್ಠಿ ಟಾಸ್ಕ್ನಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ಸಮರ ಸಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.