ಎಲ್‌ಇಡಿ ಪರದೆಯಲ್ಲಿ ನೇರಪ್ರಸಾರ
ದಡದಪುರದ ಬಸ್‌ಸ್ಟ್ಯಾಂಡ್ ಬಳಿ ಇರುವ ಬಸವೇಶ್ವರ ದೇವಾಲಯದ ಆವರಣದಲ್ಲಿ ದೊಡ್ಡ ಎಲ್‌ಇಡಿ ಪರದೆ ಅಳವಡಿಸಿ, ಬಿಗ್ ಬಾಸ್ ಫಿನಾಲೆಯ ನೇರಪ್ರಸಾರ ಮಾಡಿಸಲಾಗಿದೆ. ಮಧ್ಯರಾತ್ರಿಯವರೆಗೆ ನೂರಾರು ಮಂದಿ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಿರುವುದು, ಇಡೀ ಊರಿನವರು ಗಿಲ್ಲಿ ಮೇಲೆ ಇಟ್ಟಿರುವ ಅಭಿಮಾನ ಹಾಗೂ ತೋರಿಸುತ್ತಿರುವ ಪ್ರೀತಿಗೆ ಸಾಕ್ಷಿ.