ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ 12ನೇ ಆವೃತ್ತಿ ಆರಂಭವಾಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಸದ್ಯ ಬಿಗ್ಬಾಸ್ ಮನೆಯ ಮೊದಲ ಕ್ಯಾಪ್ಟನ್ ಯಾರಾಗಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ.
.BBK12: ತಂಡಕ್ಕಾಗಿ ಕ್ಯಾಪ್ಟನ್ಸಿ ಓಟದಿಂದ ಹಿಂದೆ ಸರಿದು ಹೀರೊ ಆದ ಸೂರಜ್ ಸಿಂಗ್.ನನ್ನ ಗುಂಡಿನಾ ನಾನೇ ತೋಡಿಕೊಂಡೆನಾ? ಬಿಗ್ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಜಾಹ್ನವಿ.
ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ರಘು, ರಿಷಾ ಹಾಗೂ ಸೂರಜ್ ಸಿಂಗ್ ಆಗಮಿಸಿದ್ದಾರೆ. ಮನೆಗೆ ಕಾಲಿಟ್ಟ ಎರಡನೇ ದಿನಕ್ಕೆ ಬಿಗ್ಬಾಸ್ ಮೂರು ತಂಡಗಳಾಗಿ ವಿಂಗಡಣೆ ಮಾಡಿದ್ದರು. ಇದಾದ ಬಳಿಕ ಬಿಗ್ಬಾಸ್ ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಪವರ್ ಕಾರ್ಡ್ ನೀಡಿದರು.

ಕಳೆದ ಸಂಚಿಕೆಯಲ್ಲಿ ಬಿಗ್ಬಾಸ್, ‘ಈ ಪವರ್ ಕಾರ್ಡ್ ಅನ್ನು ನೀವು ತೆಗೆದುಕೊಂಡರೆ ನೇರವಾಗಿ ಕ್ಯಾಪ್ಟನ್ಸಿ ಅಭ್ಯರ್ಥಿ ಆಗುತ್ತೀರಿ. ಆದರೆ ನಿಮ್ಮ ತಂಡ ಕ್ಯಾಪ್ಟನ್ಸಿ ಓಟದಿಂದ ಹೊರಗೆ ಉಳಿಯುತ್ತದೆ’ ಎಂದಿದ್ದರು. ಹೀಗಾಗಿ ಕೊಂಚ ಸಮಯದ ಬಳಿಕ ರಘು ಹಾಗೂ ರಿಷಾ ಪವರ್ ಕಾರ್ಡ್ ತೆಗೆದುಕೊಂಡರು. ಆದರೆ ಸೂರಜ್, ‘ನಾನು ಇದನ್ನು ತೆಗೆದುಕೊಳ್ಳುವುದಿಲ್ಲ. ನನ್ನ ತಂಡ ಗೆದ್ದರೆ ನಾನು ಮುಂದುವರೆಯುತ್ತೇನೆ’ ಎಂದಿದ್ದರು.

ಹೀಗಾಗಿ ಪವರ್ ಕಾರ್ಡ್ ಪಡೆದುಕೊಂಡ ರಘು ಹಾಗೂ ರಿಷಾಗೆ ಬಿಗ್ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ನೀಡಿದ್ದಾರೆ. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ರಘು ಹಾಗೂ ರಿಷಾ ಅವರಿಗೆ ಬಿಗ್ಬಾಸ್ ಕತ್ತಲ ಕೋಣೆಯಲ್ಲಿ ತಮ್ಮ ಹೆಸರನ್ನು ಜೋಡಿಸುವ ಕಠಿಣ ಟಾಸ್ಕ್ ನೀಡಿದ್ದಾರೆ. ಬಿಗ್ಬಾಸ್ ನೀಡಿದ್ದ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಯಾರು ಪೂರ್ಣಗೊಳಿಸಲಿದ್ದಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.