ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss Kannada: ವಿನಯ್ - ಸಂಗೀತಾ ಮಧ್ಯೆ ಮತ್ತೆ ಹೊತ್ತಿಕೊಂಡ ಜಗಳದ ಕಿಡಿ!

Published 5 ಡಿಸೆಂಬರ್ 2023, 6:29 IST
Last Updated 5 ಡಿಸೆಂಬರ್ 2023, 6:29 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ಬಾಸ್‌ ಮನೆಯಲ್ಲಿ ಹೀಗೊಂದು ಫ್ಲವರ್ ವರ್ಸಸ್ ಫೈಯರ್ ಟೆಸ್ಟ್ ನಡೆದಿದೆ. ಇದರ ಪರಿಣಾಮವಾಗಿ ವಿನಯ್ -ಸಂಗೀತಾ ಮಧ್ಯ ಮತ್ತೆ ಹಳೆಯ ಕಿಡಿ ಹೊತ್ತಿಕೊಂಡಿದೆ.

ಮನೆಯ ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಒಂದು ಚಟುವಟಿಕೆ ನೀಡಿದ್ದಾರೆ. ಒಂದಿಷ್ಟು ಬಿಳಿ ಮತ್ತೊಂದಿಷ್ಟು ಕಪ್ಪು ಹೂಗಳನ್ನು ಇಡಲಾಗಿದೆ. ಒಬ್ಬೊಬ್ಬ ಸದಸ್ಯನೂ, ಮನೆಯೊಳಗೆ ತಮ್ಮ ದೃಷ್ಟಿಯಲ್ಲಿ ಅತ್ಯಂತ ಧನಾತ್ಮಕ ವ್ಯಕ್ತಿ ಯಾರು ಎಂದು ಆರಿಸಿ ಅವರಿಗೆ ಬಿಳಿ ಹೂವು ನೀಡಬೇಕು. ಹಾಗೆಯೇ ಯಾರು ಅತ್ಯಂತ ಋಣಾತ್ಮಕ ವ್ಯಕ್ತಿ ಎಂಬುದನ್ನೂ ಆರಿಸಿ ಅವರಿಗೆ ಕಪ್ಪು ಹೂವು ನೀಡಬೇಕು.

ಈ ಟಾಸ್ಕ್‌ನಲ್ಲಿ ಬೆಳ್ಳಗಿನ ಹೂಗಳನ್ನು ಪಡೆದುಕೊಂಡವರ ಮುಖದಲ್ಲಿ ನಗು ಅರಳಿದರೆ, ಕಪ್ಪು ಹೂವು ಪಡೆದವರಲ್ಲಿ ಅಸಮಾಧಾನದ ಮೂಡಿಸಿದೆ. ಅದರಲ್ಲಿಯೂ ವಿಶೇಷವಾಗಿ ಸಂಗೀತಾ, ವಿನಯ್ ಅವರಿಗೆ ಕಪ್ಪುಹೂವು ನೀಡಿ, ‘ನೀವು ಮೊದಲಿನಿಂದಲೂ ನೆಗೆಟಿವ್’ ಎಂದು ಆರೋಪಿಸಿದ್ದಾರೆ. ಅದಕ್ಕೆ ಠಕ್ಕರ್ ನೀಡಿದ ವಿನಯ್, ‘ನಾನು ನೆಗೆಟಿವ್‌ಗೆ ಬೇರು. ಆದರೆ, ಬೇರು ಬಿಡಬೇಕು ಅಂದ್ರೆ ಅದಕ್ಕೊಂದು ಬೀಜ ನೆಡಬೇಕಲ್ವಾ? ಆ ಬೀಜವೇ ಸಂಗೀತಾ. ಇಲ್ಲದಿರೋ ಕಾರಣಕ್ಕೆ ಅವರು ಮೂಗು ತೂರಿಸಿ ಅದನ್ನೊಂದು ಮೊಮೆಂಟ್ ಮಾಡಿದವರು ಅವರು’ ಎಂದಿದ್ದಾರೆ.

ಇದಕ್ಕೆ ಉತ್ತರಿಸಿದ ಸಂಗೀತಾ, ‘ಇವತ್ತಿಗೂ ನಾನದಕ್ಕೆ ಸ್ಟ್ಯಾಂಡ್ ತಗೊತೀನಿ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಿನಯ್, ‘ಯು ಪ್ಲೀಸ್ ಶಟ್ಅಪ್‌’ ಎಂದು ಕೋಪದಿಂದ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಸಂಗೀತಾ, ‘ಮೈಂಡ್ ಯುವರ್ ಲ್ಯಾಂಗ್ವೇಜ್’ ಎಂದು ತಿರುಗೇಟು ಕೊಟ್ಟಿದ್ದಾರೆ.

ಆರಂಭದ ದಿನಗಳಲ್ಲಿ ಬೆಂಕಿಯಾಗಿ ಹೊತ್ತಿಕೊಂಡಿದ್ದ ವಿನಯ್-ಸಂಗೀತಾ ಮನಸ್ತಾಪ ನಂತರ ತಣ್ಣಗಾಗಿತ್ತು. ವಿನಯ್ ತಂಡವನ್ನು ಸೇರಿಕೊಂಡಿದ್ದ ಸಂಗೀತಾ ಅವರನ್ನು ಹೊಗಳಿದ್ದರು ಕೂಡ. ಆದರೆ, ಮತ್ತೆ ಈಗ ಅವರ ಮಧ್ಯೆ ಕಿಡಿ ಹೊತ್ತಿಕೊಂಡಿದ್ದು, ಏನು ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT