ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Bigg Boss | ಮೊದಲ ನಾಯಕತ್ವದಲ್ಲೇ ಮುಗ್ಗರಿಸಿದ ಸ್ನೇಹಿತ್‌ಗೆ ಸ್ಪರ್ಧಿಗಳ ಶಿಕ್ಷೆ

Published : 20 ಅಕ್ಟೋಬರ್ 2023, 7:38 IST
Last Updated : 20 ಅಕ್ಟೋಬರ್ 2023, 7:38 IST
ಫಾಲೋ ಮಾಡಿ
Comments

ಬೆಂಗಳೂರು: ಇನ್ನೇನು ಬಿಗ್‌ ಬಾಸ್‌ ಆರಂಭವಾಗಿ ಎರಡನೇ ವಾರ ಕಳೆಯುತ್ತಿದೆ. ಈ ನಡುವೆ ಸ್ನೇಹಿತ್‌ ನಾಯಕತ್ವ ಮುಗಿದಿದೆ.10ನೇ ಸೀಸನ್‌ನ ಮೊದಲ ನಾಯಕನಾಗಿ ಆಯ್ಕೆಯಾಗಿದ್ದ ಸ್ನೇಹಿತ್‌ ಆರಂಭದಲ್ಲಿ ಮುಗ್ಗರಿಸಿದಾದರೂ ನಂತರದ ದಿನಗಳಲ್ಲಿ ಟಾಸ್ಕ್‌, ಮನೆ ನಿರ್ವಹಣೆ ವಿಚಾರದಲ್ಲಿ ಒಂದು ಹಂತಕ್ಕೆ ಉತ್ತಮ ನಿರ್ಧಾರವನ್ನೇ ತೆಗೆದುಕೊಂಡರು. ಆದರೂ ಇತರ ಸ್ಪರ್ಧಿಗಳು ಅವರ ನಾಯಕತ್ವದ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಶಿಕ್ಷೆ ನೀಡಿದ್ದಾರೆ.

ನಾಯಕನಾದ ಮೇಲೆ ಸ್ನೇಹಿತ್‌ ವರ್ತನೆಯೇ ಬದಲಾಗಿದೆ ಎಂದು ಆರಂಭದಲ್ಲಿ ಉಳಿದ ಸ್ಪರ್ಧಿಗಳು ಮಾತಾಡಿಕೊಂಡಿದ್ದರು. ನಂತರ ಅವರು ತಮ್ಮ ವರ್ತನೆಯನ್ನು ತಿದ್ದಿಕೊಂಡಿದ್ದಾರೆ ಎಂಬ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ವಾರವಿಡೀ ಹಲವು ಸಂದರ್ಭಗಳಲ್ಲಿ ಅವರು ಕ್ಯಾಪ್ಟನ್‌ ಪಾತ್ರವನ್ನು ನಿರ್ವಹಿಸಿದ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಈಗ ಮನೆಮಂದಿಯೆಲ್ಲ ಸೇರಿ ಸ್ನೇಹಿತ್‌ ನಾಯಕತ್ವಕ್ಕೆ ಅಂಕಗಳನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಸಕಾರಣ ನೀಡಿ ಅವರನ್ನು ಬಿಗ್‌ಬಾಸ್‌ ಮನೆಯ ಈಜುಕೊಳದಲ್ಲಿ ನೂಕಿದ್ದಾರೆ. ಪ್ರತಿಯೊಬ್ಬರು ನೂಕಿದಾಗಲೂ ನೀರೊಳಗೆ ಬಿದ್ದ ಸ್ನೇಹಿತ್, ಮತ್ತೆ ಎದ್ದು ಬಂದು ನಡುಗುತ್ತ ನಿಂತಿದ್ದರು. 

ಸಂಗೀತಾ-ಕಾರ್ತಿಕ್ ಫೈಟ್‌!

JioCinemaದಲ್ಲಿ ಉಚಿತವಾಗಿ 24 ಗಂಟೆ ನೇರಪ್ರಸಾರವಾಗುವ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ವಿನಯ್ ಮತ್ತು ಸಂಗೀತಾ ನಡುವಿನ ಫೈಟ್‌ ಈ ಸಲದ ಬಿಗ್‌ಬಾಸ್‌ ಮನೆಯಲ್ಲಿ ಸಾಕಷ್ಟು ಏರುಪೇರುಗಳನ್ನು ಸೃಷ್ಟಿಸುತ್ತಿದೆ. ಪ್ರತಿಯೊಂದು ಹಂತದಲ್ಲಿಯೂ ಒಬ್ಬರು ಇನ್ನೊಬ್ಬರನ್ನು ಕೆಣಕುವುದು, ಮಾತಿನ ಚಕಮಕಿ ಮೊದಲಿನಿಂದಲೂ ನಡೆದೇ ಇತ್ತು. ಆಗೆಲ್ಲ ಸಂಗಿತಾಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬೆಂಬಲಕ್ಕೆ ನಿಂತವರು ಕಾರ್ತಿಕ್. ಆದರೆ ಈಗ ವಿನಯ್‌ ಮತ್ತು ಸಂಗೀತಾ ರಾಜಿಯಾಗಿದ್ದಾರೆ.

ಸಂಗೀತಾ ತಾವು ಆಡಿದ ‘ಥ್ರೆಟನಿಂಗ್’ ಎಂಬ ಪದವನ್ನು ಹಿಂಪಡೆದು ಕ್ಷಮೆ ಕೇಳಿದ್ದಾರೆ. ಹಾಗೆಯೇ ವಿನಯ್ ಕೂಡ, ತಮಗೆ ನಿಮ್ಮನ್ನು ಹರ್ಟ್‌ ಮಾಡುವ ಉದ್ದೇಶ ಇಲ್ಲ. ನಿಮ್ಮ ಬಗ್ಗೆ ಇನ್ನು ಎಂದಿಗೂ ಕೆಟ್ಟದಾಗಿ ಮಾತಾಡಲ್ಲ. ಹರ್ಟ್‌ ಮಾಡಲ್ಲ ಎಂದು ಹೇಳಿ ಕ್ಷಮೆ ಕೋರಿದ್ದಾರೆ. ಅಲ್ಲಿಗೆ ಅವರಿಬ್ಬರೂ ಹಗ್‌ ಮಾಡಿಕೊಳ್ಳುವುದರ ಮೂಲಕ, ಬಿಗ್‌ಬಾಸ್‌ ಮನೆಯೊಳಗಿನ ಬಹುದೊಡ್ಡ ಜಗಳವೊಂದು ಸುಖಾಂತ್ಯ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT