ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss Kannada 10 | ಮೊದಲ ವಾರ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಬಹುದು?

Published 14 ಅಕ್ಟೋಬರ್ 2023, 6:38 IST
Last Updated 14 ಅಕ್ಟೋಬರ್ 2023, 6:41 IST
ಅಕ್ಷರ ಗಾತ್ರ

ಬಿಗ್‌ ಬಾಸ್‌ ಸೀಸನ್ 10ರ ಮೊದಲ ಪಂಚಾಯತಿ ಇಂದು ನಡೆಯಲಿದ್ದು, 17 ಸ್ಪರ್ಧಿಗಳಲ್ಲಿ ಕಿಚ್ಚನ ಮೆಚ್ಚುಗೆಗೆ ಯಾರು ಪಾತ್ರರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಕಾಡುತ್ತಿದೆ.

‘ವಾರದ ಕತೆ ಕಿಚ್ಚನ ಜೊತೆ’ ಕಂತಿನಲ್ಲಿ ಇಡೀ ವಾರದ ಆಗುಹೋಗುಗಳ ಬಗ್ಗೆ ಸುದೀಪ್‌ ಚರ್ಚಿಸಲಿದ್ದಾರೆ. ಒಬ್ಬ ವ್ಯಕ್ತಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದರೆ, ಇನ್ನೊಬ್ಬ ಸ್ಪರ್ಧಿಗೆ ಪಾಠ ಸಿಗುವುದಂತು ಗ್ಯಾರಂಟಿ.

ವಾರದ ಎರಡು ದಿನ ಸಪ್ಪೆಯಾಗಿದ್ದ ಶೋ, ಬರಬರುತ್ತಾ ತನ್ನ ಲಯ ಕಂಡುಕೊಂಡಿದೆ. ಈ ವಾರ ಹೆಚ್ಚು ಸುದ್ದಿಯಾಗಿದ್ದು, ಡ್ರೋನ್‌ ಪ್ರತಾಪ್‌, ತುಕಾಲಿ ಸಂತೋಷ್‌, ವಿನಯ್‌ ಎನ್ನಬಹುದು.

ಇನ್ನು... ಸಿರಿ, ಡ್ರೋನ್‌ ಪ್ರತಾಪ್‌, ತನಿಶಾ, ಕಾರ್ತಿಕ್‌, ಮೈಖಲ್‌ ಅಜಯ್‌, ಸ್ನೇಕ್‌ ಶ್ಯಾಮ್‌, ನೀತು ವನಜಾಕ್ಷಿ ಈ ವಾರ ನಾಮೀನೇಟ್‌ ಆಗಿದ್ದಾರೆ. ಈ ಸೀಸನ್‌ನಲ್ಲಿ ಮೊದಲು ಯಾರು ಹೊರಹೋಗುತ್ತಾರೆ ಎಂಬ ಪ್ರಶ್ನೆಯೂ ಎಲ್ಲರಲ್ಲಿಯೂ ಮನೆಮಾಡಿದೆ.

ಓದಿ: Bigg Boss Kannada 10 | ಎಲ್ಲರ ಕಣ್ಣು ಡ್ರೋನ್‌ ಪ್ರತಾಪ್‌ ಮ್ಯಾಲೆ

ಈ ವಾರದ ಉತ್ತಮ ಆಟಗಾರ್ತಿಯಾಗಿ ತನಿಶಾ ಸ್ಥಾನ ಪಡೆದುಕೊಂಡರೆ, ಕಳಪೆ ಆಟಗಾರ್ತಿಯಾಗಿ ಭಾಗ್ಯಶ್ರೀ ಆಯ್ಕೆಯಾಗಿದ್ದಾರೆ.

ಡ್ರೋನ್‌ ಪ್ರತಾಪ್‌, ತನಿಶಾ, ಕಾರ್ತಿಕ್‌ ಆಟದಲ್ಲಿ ಸಕ್ರಿಯ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದು, ಈ ವಾರ ಹೊರಹೋಗುವ ಸಾಧ್ಯತೆ ಕಡಿಮೆಯಿದೆ.

ತುಕಾಲಿ ಸಂತೋಷ್‌ ಅವರು ಹೆಚ್ಚು ನೆಗಟಿವ್‌ ಆಗಿ ಕಾಣಿಸಿಕೊಂಡಿದ್ದು, ಕಿಚ್ಚನ ಪಾಠ ಅವರಿಗೆ ಸಿಗಬೇಕು ಎಂಬ ವಾದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಹಾಗಾದರೆ ಮೊದಲ ವಾರ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸ್ಪರ್ಧಿ ಯಾರಾಗಬಹುದು........?

ಬಿಗ್ ಬಾಸ್ ಕನ್ನಡ JioCinemaದಲ್ಲಿ 24ಗಂಟೆ ಉಚಿತವಾಗಿ ಪ್ರಸಾರವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT