ಕನ್ನಡದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ನ 12ನೇ ಆವೃತ್ತಿಯು ಸೆ. 28ರಿಂದ ಆರಂಭವಾಗುತ್ತಿದೆ. ಈ ಕುರಿತು ಒಂದೊಂದೇ ಅಪ್ಡೇಟ್ಗಳನ್ನು ಬಿಗ್ಬಾಸ್ ತಂಡ ಬಿಡುಗಡೆ ಮಾಡುತ್ತಿದೆ. ಪ್ರೋಮೊ ನೋಡಿದ ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
.ಸುದೀಪ್ ಹುಟ್ಟುಹಬ್ಬದಂದೇ ಬಿಗ್ಬಾಸ್ ತಂಡದಿಂದ ಬಿಗ್ ಅಪ್ಡೇಟ್; ನಿರೀಕ್ಷಿಸಿ..!.
ಇದೇ ಮೊಟ್ಟ ಮೊದಲ ಬಾರಿಗೆ ಬಿಗ್ಬಾಸ್ ತಂಡ ಹೊಸ ಸಾಹಸಕ್ಕೆ ಮುಂದಾಗಿದೆ. ಬಿಗ್ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಡಲು ಅದ್ಭುತ ಅವಕಾಶ ಕಲ್ಪಿಸಲಾಗಿದೆ. ಕಲರ್ಸ್ ಕನ್ನಡ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಪ್ರೋಮೊವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ‘ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ, ಬಿಗ್ಬಾಸ್ ಮನೆಗೆ ಸ್ವಾಗತ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

‘ಪ್ರೀತಿಯ ಕನ್ನಡಿಗರಿಗೆ ಒಂದು ಅತಿ ದೊಡ್ಡ ಅವಕಾಶ. ಸೋಮವಾರದಿಂದ ಶುಕ್ರವಾರ ಸಂಜೆ 6ರಿಂದ 10.30ರ ತನಕ ಕಲರ್ಸ್ ಕನ್ನಡ ನೋಡಿ, ಪ್ರತಿ ಧಾರಾವಾಹಿ ಕೊನೆಯಲ್ಲಿ ಕೇಳೋ ಎಲ್ಲ ಪ್ರಶ್ನೆಗೂ ಜಿಯೊ ಹಾಟ್ ಸ್ಟಾರ್ನಲ್ಲಿ ಸರಿಯಾಗಿ ಉತ್ತರಿಸಿ. ಲಕ್ಕಿ ವಿಜೇತರಿಗೆ ಬಿಗ್ಬಾಸ್ ಮನೆಗೆ ಅತಿಥಿಗಳಾಗಿ ಹೋಗುವ ಸೂಪರ್ ಡೂಪರ್ ಚಾನ್ಸ್’ ಎಂದು ಹೇಳಲಾಗಿದೆ.

ಸೋಮವಾರದಿಂದ ಶುಕ್ರವಾರ ಸಂಜೆ 6 ರಿಂದ 10.30ರ ತನಕ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುವ ಸೀರಿಯಲ್ ಕೊನೆಯಲ್ಲಿ ಕೇಳುವ ಪ್ರಶ್ನೆಗೆ ಯಾರು ಬೇಗ ಉತ್ತರಿಸುತ್ತಾರೋ ಅವರಗೆ ಈ ಅವಕಾಶ ಸಿಗಲಿದೆ. ಸೆ. 28ರಿಂದ ಬಿಗ್ಬಾಸ್ ಶುರುವಾಗಲಿದ್ದು, ಈ ಬಾರಿಯ ಆವೃತ್ತಿಗೆ ಯಾರೆಲ್ಲಾ ಬರಲಿದ್ದಾರೆ ಅಂತ ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.