ಸೋಮವಾರ, ಜುಲೈ 26, 2021
20 °C

Bigg Boss 8:‘ಕಬ್ಬನ್ ಪಾರ್ಕ್‌ನಲ್ಲಿ ನೋಡಿದ್ದೆ’: ದಿವ್ಯಾ ಬಗ್ಗೆ ಚಂದ್ರಚೂಡ್ !

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಹೆಚ್ಚಳವಾಗಿದ್ದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಪುನರಾರಂಭಗೊಂಡ ಮೊದಲ ದಿನದ ಶೋನಲ್ಲೇ ನಾಮಿನೇಶನ್ ಪ್ರಕ್ರಿಯೆ ನಡೆದಿದ್ದು, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಮಂಜು ಪಾವಗಡ, ದಿವ್ಯಾ ಸುರೇಶ್, ರಘು, ನಿಧಿ ಸುಬ್ಬಯ್ಯ, ಪ್ರಿಯಾಂಕಾ ತಿಮ್ಮೇಶ್ ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.

ಮಂಜು ಟಫ್ ಕಾಂಪಿಟೇಟರ್ ಎಂಬ ಕಾರಣಕ್ಕೆ ದಿವ್ಯಾ ಉರುಡುಗ, ಅರವಿಂದ್, ವೈಷ್ಣವಿ ನಾಮಿನೇಟ್ ಮಾಡಿದರು. ಎರಡು ವಾರಕ್ಕೆ ಎಗರಿಕೊಳ್ಳಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆಂದು ಶಮಂತ್ ಮಂಜು ಹೆಸರು ಸೂಚಿಸಿದ್ದಾರೆ.

ನನ್ನದು ಫೇಕ್ ಸ್ಮೈಲ್ ಎಂದಿದ್ದಾಳೆಂದು ದಿವ್ಯಾ ಸುರೇಶ್ ಅವರನ್ನು ದಿವ್ಯಾ ಉರುಡುಗ, ಅರವಿಂದ್ ಮತ್ತಿತರರು ಸೂಚಿಸಿದರು. ಬಹುತೇಕರು ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ ಹೆಸರನ್ನು ಸೂಚಿಸಿದರು.

ಕಬ್ಬನ್ ಪಾರ್ಕ್‌ನಲ್ಲಿದ್ದಳೆಂದು ಕಾಮೆಂಟ್: ದಿವ್ಯಾ ಸುರೇಶ್ ಅವರು ಕಬ್ಬನ್ ಪಾರ್ಕ್‌ನಲ್ಲಿದ್ದರು ಎಂದು ಹೊರಗಡೆ ಚಕ್ರವರ್ತಿ ಚಂದ್ರಚೂಡ್ ಕಾಮೆಂಟ್ ಮಾಡಿರುವುದಾಗಿ ನೊಂದುಕೊಂಡ ಮಂಜು ಪಾವಗಡ ಚಕ್ರವರ್ತಿ ಹೆಸರು ಸೂಚಿಸಿದರು. ದಿವ್ಯಾ ಸುರೇಶ್ ಸಹ ಇದೇ ಕಾರಣಕ್ಕೆ ಅವರ ಹೆಸರು ಸೂಚಿಸಿದರು. ಪ್ರಶಾಂತ್ ಸಂಬರಗಿ ನಡವಳಿಕೆ ಬಗ್ಗೆ ಬೇಸರಗೊಂಡಿದ್ದ ಮಂಜು ಪಾವಗಡ, ದಿವ್ಯಾ ಸುರೇಶ್ ಮತ್ತು ಸಿಧಿ ಮತ್ತಿತರರು ಅವರ ಹೆಸರು ಸೂಚಿಸಿದರು.

ಕಾರ್ಯಕ್ರಮ ಸ್ಥಗಿತಗೊಂಡಿದ್ದರಿಂದ ಮನೆಗೆ ತೆರಳಿದ್ದ ಸ್ಪರ್ಧಿಗಳು ಎಪಿಸೋಡ್‌ಗಳನ್ನು ವೀಕ್ಷಿಸಿ ತಮ್ಮ ಬಗ್ಗೆ ಇತರರು ತಪ್ಪಾಗಿ ಮಾತನಾಡಿರುವುದನ್ನು ಗಮನಿಸಿ ಮೊದಲ ದಿನವೇ ಗರಂ ಆಗಿದ್ದರು.

ಒಬ್ಬೊಬ್ಬರಾಗಿ ಮನೆಗೆ: ಇದಕ್ಕೂ ಮುನ್ನ, ನಿರೂಪಕ ನಟ ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ಒಬ್ಬೊಬ್ಬರಾಗಿ ಮನೆಗೆ ಕಳುಹಿಸಿದರು. ಲಾಕ್‌ಡೌನ್ ಅನುಭವ, ಹೊರಗಡೆ ಕೇಳಿಬಂದ ಅಭಿಪ್ರಾಯ. ಗುಡ್ ಅಂಡ್ ಬ್ಯಾಡ್ ಬಗ್ಗೆ ವಿಚಾರಿಸಿದರು. ಪ್ರತಿಯೊಬ್ಬರಿಗೂ ಒಂದೊಂದು ಟಾಸ್ಕ್ ಕೊಟ್ಟು ಲಕ್ಸುರಿ ಐಟಂ ಕೂಪನ್ ಗೆಲ್ಲುವ ಅವಕಾಶ ಕೊಟ್ಟರು. ಜೊತೆಗೆ ಮನೆಯಲ್ಲಿ ಎರಡು ಟೀಮ್ ರಚಿಸಿ ಮುಂಬರುವ ಗ್ರೂಪ್ ಟಾಸ್ಕ್‌ಗಳಿಗೆ ಮುನ್ನುಡಿ ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು