ಬೆಂಗಳೂರು: ಕನ್ನಡದ ಬಿಗ್ಬಾಸ್ 12ನೇ ಆವೃತ್ತಿ ಸೆಪ್ಟೆಂಬರ್ 28ರಿಂದ ಆರಂಭಗೊಳ್ಳುತ್ತಿದೆ. ನಾಳೆ (ಭಾನುವಾರ) ಬಿಗ್ಬಾಸ್ ಮನೆಗೆ ಹೋಗುವ ಸ್ಪರ್ಧಿಗಳು ಯಾರೆಂದು ಅಧಿಕೃತವಾಗಿ ತಿಳಿಯಲಿದೆ.

ಆದರೆ ಬಿಗ್ಬಾಸ್ ಆರಂಭಕ್ಕೂ ಮುನ್ನವೇ ಮನೆಗೆ ಎಂಟ್ರಿ ಕೊಡುತ್ತಿರೋ ಮೊದಲ ಸ್ಪರ್ಧಿಯ ಹೆಸರನ್ನು ಹಾಗೂ ಪ್ರೊಮೋವನ್ನು ಕಲರ್ಸ್ ಕನ್ನಡ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ.

ಇಷ್ಟು ದಿನ ಬಿಗ್ಬಾಸ್ ಮನೆಗೆ ಯಾರೆಲ್ಲ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎಂದು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದರು. ಆದರೆ ಈಗ ಬಿಗ್ ಬಾಸ್ ಆರಂಭಕ್ಕೂ ಮುನ್ನವೇ ಮೊದಲ ಕಂಟೆಸ್ಟೆಂಟ್ ಯಾರೆಂದು ಗೊತ್ತಾಗಿದೆ.

ಯಾರು ಈ ಕಾಕ್ರೋಚ್ ಸುಧಿ?

ಕನ್ನಡದ ಹಲವು ಸಿನಿಮಾಗಳಲ್ಲಿ ಸುಧೀರ್ ಬಾಲರಾಜ್ ಖಳನಾಯಕನಾಗಿ ನಟಿಸಿದ್ದಾರೆ. ಖಡಕ್ ಡೈಲಾಗ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದ ನಟ ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೊದಲ ಸ್ಪರ್ಧಿಯಾಗಿದ್ದಾರೆ.

ನಟ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾದಲ್ಲಿ ಕಾಕ್ರೋಚ್ ಪಾತ್ರದಲ್ಲಿ ನಟ ಸುಧೀರ್ ಬಾಲರಾಜ್ ಅವರು ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದರು.

ಅಲ್ಲದೆ ಕನ್ನಡದ ಸೂಪರ್ ‘ಸಲಗ’, ‘ಭೀಮ’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಸುಧಿ ಅವರು ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಜೊತೆಗೆ ಹೀರೋ ಆಗಿಯೂ ಮಿಂಚಿದ್ದಾರೆ. ಇತ್ತೀಚಿಗಷ್ಟೇ ಕಾಕ್ರೋಚ್ ಸುಧಿ ಅವರು ಹೀರೋ ಆಗಿ ನಟಿಸುತ್ತಿರುವ ಹೊಸ ಸಿನಿಮಾ ಸೆಟ್ಟೇರಿತ್ತು . ಆ ಸಿನಿಮಾಗೆ ‘ಚೈಲ್ಡು’ ಎಂದು ಶೀರ್ಷಿಕೆ ಇಡಲಾಗಿತ್ತು. ಸದ್ಯ ಕನ್ನಡದ ಬಿಗ್ ಬಾಸ್ 12ಕ್ಕೆ ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ.
.ಬಿಗ್ಬಾಸ್ಗೆ ಬಾಂಬ್ ಇಡ್ತೀನಿ ಎಂದು ರೀಲ್ಸ್: ಬಿಸಿ ಮುಟ್ಟಿಸಿದ ಪೊಲೀಸರು.BBK12 | ಒಂದೇ ಶೋನಲ್ಲಿ ಕರ್ನಾಟಕದ ಸಂಸ್ಕೃತಿ: ಹೇಗಿದೆ ಗೊತ್ತಾ ಬಿಗ್ಬಾಸ್ ಮನೆ?.BBK12: ಬಿಗ್ಬಾಸ್ ಮನೆಗೆ ಕಿಚ್ಚನ ಆಗಮನ: ಪ್ರೊಮೋದಲ್ಲಿ ಸುದೀಪ್ ಹೇಳಿದ್ದೇನು?.BBK12 | ಬಿಗ್ಬಾಸ್ ಪ್ರೋಮೊದಲ್ಲಿ ಮಾಸ್ಕ್ ಮ್ಯಾನ್: ಯಾರು ಈ ನಿಗೂಢ ವ್ಯಕ್ತಿ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.