ಕನ್ನಡದ ಬಿಗ್‌ಬಾಸ್ 12ನೇ ಆವೃತ್ತಿ ನಾಳೆಯಿಂದ ಆರಂಭಗೊಳ್ಳಲಿದೆ. ಈಗಾಗಲೇ ಕಿಚ್ಚ ಸುದೀಪ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಚಿತ್ರ: colorskannadaofficial
ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಬಿಗ್‌ಬಾಸ್ ಮೊದಲ ಪ್ರೊಮೋ ಹಂಚಿಕೊಂಡಿದೆ.
ಚಿತ್ರ: colorskannadaofficial
ಈ ಬಾರಿಯ ಬಿಗ್‌ಬಾಸ್ ಮನೆಯನ್ನು ಯಾವ ರೀತಿ ನಿರ್ಮಿಸಲಾಗುತ್ತದೆ ಎಂದು ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿತ್ತು.
ಚಿತ್ರ: colorskannadaofficial
ಆದರೆ, ಎಲ್ಲ ಸೀಸನ್‌ಗಳಿಗಿಂತ ಈ ಬಾರಿಯ ಬಿಗ್‌ಬಾಸ್ ಸೀಸನ್ 12 ವಿಭಿನ್ನತೆ ಹಾಗೂ ವಿಶೇಷತೆಯಿಂದ ಕೂಡಿದೆ.
ಚಿತ್ರ: colorskannadaofficial
ಅದರಲ್ಲೂ ಈ ಬಾರಿ ದಸರಾ ಹಬ್ಬದ ಸಂದರ್ಭದಲ್ಲಿ ಬಿಗ್‌ಬಾಸ್ ಸೀಸನ್ 12 ಆರಂಭಗೊಳ್ಳುತ್ತಿದೆ.
ಈಗ ಸಾಮಾಜಿಕ ಜಾಲತಾಣದಲ್ಲಿ ಬಿಗ್‌ಬಾಸ್ ಅರಮನೆಯ ಹೊಸ ಪ್ರೊಮೋ ಹೆಚ್ಚು ಸದ್ದು ಮಾಡುತ್ತಿದೆ.
ಚಿತ್ರ: colorskannadaofficial
ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಕನ್ನಡ ಸಾಂಸ್ಕೃತಿಕ ಪರಂಪರೆಗಳು, ಕರ್ನಾಟಕದ ಇತಿಹಾಸ ಮತ್ತು ಐತಿಹಾಸಿಕ ಲಾಂಛನಗಳನ್ನು ಅಳವಡಿಸಲಾಗಿದೆ.
ಚಿತ್ರ: colorskannadaofficial
ಬಿಗ್‌ಬಾಸ್ ಅರಮನೆಯಲ್ಲಿ ದಸರಾ ಆನೆ, ಹಂಪಿ ಕಲ್ಲಿನ ರಥ, ರಾಜರ ಯುದ್ಧಗಳ ಚಿತ್ರಣಗಳು, ಯಕ್ಷಗಾನ, ಡೊಳ್ಳು ಕುಣಿತ, ದೇವಸ್ಥಾನ, ಐತಿಹಾಸಿಕ ಅಂಶಗಳನ್ನು ಒಳಗೊಂಡಿವೆ.
ಚಿತ್ರ: colorskannadaofficial
ಬಿಡುಗಡೆಯಾದ ಹೊಸ ಪ್ರೊಮೋದಲ್ಲಿ ಕಿಚ್ಚ ಸುದೀಪ್, ‘ನಮ್ಮ ರಿಚ್ ಆಗಿರುವ ಕರ್ನಾಟಕ ಒಂದೇ ಜಾಗದಲ್ಲಿ ಸ್ಕೆಚ್ ಮಾಡಿದರೇ ನೋಡೋದಕ್ಕೆ ಹೇಗಿರುತ್ತದೆ ಎಂದು ನೀವೇನಾದ್ರೂ ನೋಡಬೇಕು ಅಂದರೆ.. ಹೀಗೆ ಇರುತ್ತದೆ ಎಂದಿದ್ದಾರೆ.
ಚಿತ್ರ: colorskannadaofficial
ಮತ್ತೆ ಮಾತನ್ನು ಮುಂದುವರೆಸಿದ ಅವರು, ‘ಒಂದು ಅರಮನೆಯನ್ನು ಉಳಿಸಿಕೊಳ್ಳುವುದಕ್ಕೆ ಎಷ್ಟೋ ಯುದ್ಧಗಳು ನಡೆದು ಹೋಗಿವೆ. ಈ ಅರಮನೆಯಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳುವುದಕ್ಕೆ ಬಹಳ ಯುದ್ಧಗಳು ನಡೆಯೋದಿದೆ. ನಮ್ಮ ನಾಡಿಗೆ ದಸರಾ ಹಬ್ಬ ಶುರುವಾಗಿ ಒಂದು ವಾರ ಆಯ್ತು. ನಮ್ಮ ಬಿಗ್‌ಬಾಸ್ ಮನೆಯಲ್ಲಿ ಅಸಲಿ ಹಬ್ಬ ಈಗ ಶುರು’ ಎಂದು ಹೇಳಿದ್ದಾರೆ.
ಚಿತ್ರ: colorskannadaofficial
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.