ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 8ರ ಫಿನಾಲೆಗೆ 10 ದಿನ ಮಾತ್ರ ಬಾಕಿ ಉಳಿದಿದೆ. ಹೀಗಾಗಿ, ಈ ವಾರಾಂತ್ಯದ ಎಲಿಮಿನೇಶನ್ ಅತ್ಯಂತ ಮಹತ್ವ ಪಡೆದುಕೊಂಡಿದೆ. ಕ್ಯಾಪ್ಟನ್ ದಿವ್ಯಾ ಉರುಡುಗಒಬ್ಬರನ್ನು ಬಿಟ್ಟು ಮನೆಯ ಎಲ್ಲ ಸದಸ್ಯರು ನಾಮಿನೇಟ್ ಆಗಿದ್ದು, ಈ ವಾರ ಯಾರು ಹೊರ ಹೋಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಹೌದು, ಕೊರೊನಾದಿಂದ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್, ಬಳಿಕ ಎರಡನೇ ಇನಿಂಗ್ಸ್ ಮೂಲಕ ರಂಜಿಸುತ್ತಿದೆ. ನೂರು ದಿನಕ್ಕೆ ಮುಗಿಯುತ್ತಿದ್ದ ಶೋ ಅನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಇದೀಗ,ಫೈನಲ್ ಹಂತಕ್ಕೆ ಬಂದು ನಿಂತಿದೆ.

ಸದ್ಯ, ಮನೆಯ ಸದಸ್ಯರಿಗೆ ಸಿಂಪಲ್ ಲಕ್ಸುರಿ ಟಾಸ್ಕ್ ಕೊಟ್ಟಿರುವ ಬಿಗ್ ಬಾಸ್,ಗೆದ್ದವರಿಗೆ ಇಷ್ಟದ ತಿಂಡಿ ಕೊಟ್ಟು ಖುಷಿಪಡಿಸುತ್ತಿದ್ದಾರೆ. ಆದರೆ, ಆ ಖುಷಿ ಹಿಂದೆಯೇ ಶಾಕ್ ಸಿಗುವ ಎಲ್ಲ ಸಾಧ್ಯತೆ ಇದೆ.

ಮುಂದಿನ ವಾರಾಂತ್ಯಕ್ಕೆ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಆ ಹೊತ್ತಿಗೆ ಮನೆಯಲ್ಲಿ 5 ಸದಸ್ಯರು ಮಾತ್ರ ಇರಬೇಕು. ಹಾಗಾಗಿ, ಈ ವಾರ ಮನೆಯ 8 ಸದಸ್ಯರ ಪೈಕಿ ಮೂವರು ಹೊರಬೀಳಬಹುದೇ? ಎಂಬ ಕುತೂಹಲ ಮನೆ ಮಾಡಿದೆ. ಅಥವಾ ಕಳೆದ ವಾರದಂತೆ ವಾರದ ದಿನಗಳಲ್ಲಿ ಎಲಿಮಿನೇಟ್ ಮಾಡುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.

ಯಾರೆಲ್ಲ ಇದ್ದಾರೆ?: ಈ ವಾರ ಮನೆಯಿಂದ ಹೊರಹೋಗಲು ಮಂಜು ಪಾವಗಡ, ಅರವಿಂದ್, ದಿವ್ಯಾ ಸುರೇಶ್, ವೈಷ್ಣವಿ, ಶುಭಾ ಪೂಂಜಾ, ಪ್ರಶಾಂತ್ ಸಂಬರಗಿ ಮತ್ತು ಶಮಂತ್ ಸೇರಿ 7 ಮಂದಿ ನಾಮಿನೇಟ್ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.