ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK 10: ಮನಸ್ತಾಪ ಕರಗಿ ಒಂದಾದ್ರಾ ಕಾರ್ತಿಕ್‌–ಸಂಗೀತಾ?

Published 25 ಜನವರಿ 2024, 3:26 IST
Last Updated 25 ಜನವರಿ 2024, 3:26 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ಬಾಸ್‌ ಈಗ ರೇಡಿಯೊ ಮನೆಯಾಗಿದೆ. ತುಕಾಲಿ ಸಂತೋಷ್‌ ನಿರೂಪಕ. ಬಿಗ್‌ಬಾಸ್‌  ಕನ್ನಡದ ಸೀಸನ್‌10 ಮುಗಿಯಲು ಇನ್ನೊಂದೇ ದಿನ ಬಾಕಿಯಿದೆ. ಈ ನಡುವೆ ಬಿಗ್‌ ಬಾಸ್‌ ಮನೆಯಲ್ಲಿ ಬಿಗ್‌ ಬಾಸ್‌ ರೇಡಿಯೊ ಕಾರ್ಯಕ್ರಮ ಆಯೋಜಿಸಲಾಗಿದೆ. 

ಕಾರ್ತಿಕ್‌ ಮತ್ತು ತುಕಾಲಿ ಸಂತೋಷ್‌ ನಿರೂಪಣೆ ಮಾಡಿರುವ ಪ್ರೊಮೋವನ್ನು ಬಿಡುಗಡೆ ಮಾಡಲಾಗಿದೆ. 

ತುಕಾಲಿ ಸಂತೋಷ್‌ ಹಾಯ್‌ ಎಂದು ವರ್ತೂರು ಸಂತೋಷ್‌ ಅವರನ್ನು ಮಾತನಾಡಿಸಿದ್ದಾರೆ. ಇತ್ತ ಸಂಗೀತಾ, ಅವರನ್ನು ಮಾತ್ರ ಮಾತನಾಡಿಸಬೇಕಾ ಎಂದು ಕಾಲೆಳೆದಿದ್ದಾರೆ. ಕಾರ್ತಿಕ್‌ ಬಳಿ ತಲೆನೋವು ಯಾರು ಎಂದು ಕೇಳಿದಾಗ ಸಂಗೀತಾ ಹೆಸರು ಹೇಳಿದ್ದಾರೆ. ಇದರಿಂದಾಗಿ ಸಂಗೀತಾ ಮತ್ತು ಕಾರ್ತಿಕ್‌ ನಡುವಿನ ಮುನಿಸು ಕಡಿಮೆಯಾಗಿದೆ ಎಂದೆನ್ನಬಹುದು.

ಹಳೆಯ ನೆನಪುಗಳ ನೆನೆದ ಸ್ಪರ್ಧಿಗಳು

ನಿನ್ನೆ ನಡೆದ ಎಪಿಸೋಡ್‌ನಲ್ಲಿ ಮನೆಯ ಸದಸ್ಯರು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಇಂಡಸ್ಟ್ರಿಗೆ ಬಂದಾಗ ಕೈಯಲ್ಲಿ ದುಡ್ಡಿರಲಿಲ್ಲ, ಆಗ ಮನೆಗೆ ಕರೆದು ಊಟ ಹಾಕಿದ್ದಾರೆ ಎಂದು ವಿನಯ್‌ ಕುರಿತು ಕಾರ್ತಿಕ್‌ ಮಾತಾನಾಡಿದ್ದಾರೆ. 

ಇತ್ತ ಸಂಗೀತಾ, ಬಿಗ್ ಬಾಸ್‌ ಮನೆಯಲ್ಲಿ ನನ್ನ ಬೆಂಬಲವಾಗಿ ನಿಂತಿದ್ದಕ್ಕೆ ಕಾರ್ತಿಕ್‌ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಮೂಲಕ ಕಾರ್ತಿಕ್‌ ಸಂಗೀತಾ ನಡುವಿನ ಮನಸ್ಥಾಪ ಕರಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT