ಶುಕ್ರವಾರ, ಏಪ್ರಿಲ್ 16, 2021
32 °C

Bigg Boss 8| 'ಬ್ರಹ್ಮಗಂಟು' ಗೀತಾ ಬಿಗ್‌ ಬಾಸ್‌ ಮನೆಗೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಧಾರಾವಾಹಿ 'ಬ್ರಹ್ಮಗಂಟು'ನ ಗುಂಡಮ್ಮ ಖ್ಯಾತಿಯ ಗೀತಾ ಅವರು ಈ ಬಾರಿಯ ಬಿಗ್‌ ಬಾಸ್‌ ಮನೆ ಸೇರಿಕೊಂಡರು. 

ಮೂಲತಃ ಕಾರ್ಕಳದವರಾದ ಗೀತಾ ಭಾರತಿ ಭಟ್‌ ತಾವು ಸ್ಥೂಲಕಾಯದವರಾಗಿದ್ದರ ಹಿಂದಿನ ಕತೆಯನ್ನು ಬಿಗ್‌ಬಾಸ್‌ ವೇದಿಕೆಯಲ್ಲಿ ಹೇಳಿಕೊಂಡರು. ತಮ್ಮನ್ನು ಜನ ಆಡಿಕೊಳ್ಳುತ್ತಿದ್ದರು ಎಂದು ತಿಳಿಸಿದರು. ತಾವು ದಪ್ಪಗಿರುವುದೇ ತಮಗೆ ಪೂರಕವಾಗಿದೆ ಎಂದೂ ಅವರು ಹೇಳಿದ್ದಾರೆ.  

ನಾನು ತೀರ ಭಾವುಕಳು. ಅತ್ತರೆ ಜಾಸ್ತಿ ಅಳುತ್ತೇನೆ, ನಕ್ಕರೆ ಜಾಸ್ತಿ ಅಳುತ್ತೇನೆ ಎಂದು ತಮ್ಮ ವಿವರವುಳ್ಳ ವಿಡಿಯೊದಲ್ಲಿ ಹೇಳಿಕೊಂಡರು. 

ಗಟ್ಟಿಯಾಗಿ ಉಳಿಯಲು ಹೋಗುತ್ತಿದ್ದೇನೆ. ಗಟ್ಟಿಯಾಗಿ ಉಳಿಯುತ್ತೇನೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು