ಬುಧವಾರ, ಜೂನ್ 3, 2020
27 °C

ಕಲರ್‌ ಸೂಪರ್‌ನಲ್ಲಿ ಸೂಪರ್ ಮನರಂಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಕ್‌ಡೌನ್‌ ಅವಧಿಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಕಲರ್ಸ್‌ ಕನ್ನಡ ವಾಹಿನಿ ಈ ಹಿಂದೆ ಪ್ರಸಾರವಾಗಿ ಜನಪ್ರಿಯತೆ ಗಳಿಸಿದ್ದ ರಿಯಾಲಿಟಿ ಶೋ, ಧಾರವಾಹಿಗಳನ್ನು ಇದೇ ಏಪ್ರಿಲ್‌ 20 ರಿಂದ ಮರುಪ್ರಸಾರ ಮಾಡುತ್ತಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಬೆಳಿಗ್ಗೆ 7.30ರಿಂದ ಆರಂಭವಾಗಿ, ರಾತ್ರಿ 10ರವರೆಗೆ ಈ ಧಾರಾವಾಹಿ, ರಿಯಾಲಿಟಿ ಶೋಗಳು ಮರುಪ್ರಸಾರವಾಗುತ್ತವೆ. ಬೆಳಿಗ್ಗೆ 7.30ಕ್ಕೆ ಖ್ಯಾಥ ನಿರೂಪಕ ಅಕುಲ್‌ ಬಾಲಾಜಿ ನಡೆಸಿಕೊಡುವ ‘ಸೂಪರ್‌ ಟಾಕ್‌ಟೈಮ್‌‘, 9 ಗಂಟೆಗೆ ಸೆಲೆಬ್ರಟಿಗಳ ಡಾನ್ಸ್‌ ಶೋ ‘ಥಕಧಿಮಿತ‘, 10.30ಕ್ಕೆ ನಟ ಪುನೀತ್ ರಾಜ್‌ಕುಮಾರ್ ನಡೆಸಿಕೊಡುವ ಫ್ಯಾಮಿಲಿ ಗೇಮ್‌ ಶೋ ‘ಫ್ಯಾಮಿಲಿ ಪವರ್‌‘ ಪ್ರಸಾರವಾಗಲಿದೆ. ಕಲರ್ಸ್ ಸೂಪರ್‌ನ ಸುಪ್ರಸಿದ್ಧ ಹಾಡಿನ ಶೋ ‘ಕನ್ನಡ ಕೋಗಿಲೆ‘ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾದರೆ, ಮಧ್ಯಾಹ್ನ 3 ಗಂಟೆಗೆ ಸೂಪರ್ ಹಿಟ್ ಚಲನಚಿತ್ರಗಳು ಪ್ರಸಾರವಾಗುತ್ತವೆ.

ಜಯರಾಮ್ ಕಾರ್ತಿಕ್, ಮಯೂರಿ ನಟನೆಯ ‘ಅಶ್ವಿನಿ ನಕ್ಷತ್ರ‘ ಧಾರಾವಾಹಿ ಪ್ರತಿ ದಿನ ಸಂಜೆ 6 ಗಂಟೆಗೆ ಪ್ರಸಾರವಾಗುತ್ತದೆ. ರಾತ್ರಿ 8ಕ್ಕೆ ‘ರಾಧಾ ರಮಣ‘, ರಾತ್ರಿ 9ಕ್ಕೆ ‘ಮಾಂಗಲ್ಯಂ ತಂತುನಾನೇನಾ‘, ಮತ್ತು ರಾತ್ರಿ 10ಕ್ಕೆ ‘ಅರುಂಧತಿ‘ ಪ್ರಸಾರವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.