ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎದೆ ತುಂಬಿ ಹಾಡುವೆನು ಸೀಸನ್ 1: ಗಾಯಕ ಚಿನ್ಮಯ್ ವಿನ್ನರ್‌

Last Updated 20 ಡಿಸೆಂಬರ್ 2021, 8:35 IST
ಅಕ್ಷರ ಗಾತ್ರ

ಬೆಂಗಳೂರು: ಹಲವಾರು ವರ್ಷಗಳಿಂದ ಈಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಜನಪ್ರಿಯ ಸಂಗೀತ ಸ್ಪರ್ಧಾ ಸರಣಿ ‘ಎದೆತುಂಬಿ ಹಾಡುವೆನು’ ಕಲರ್ಸ್ ಕನ್ನಡದಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದ ಪ್ರಸಾರವಾಗಿದ್ದು ಗಾಯಕ ಚಿನ್ಮಯ್‌ ಜೋಶಿ ಈ ಕಾರ್ಯಕ್ರಮದ ವಿನ್ನರ್‌ ಆಗಿದ್ದಾರೆ.

ಅಂತಿಮ ಹಂತ ತಲುಪಿದ 6 ಸ್ಪರ್ಧಿಗಳಪೈಕಿ ನಾಲ್ವರು ಗಾಯಕರು ಫೈನಲ್ ಪ್ರವೇಶ ಪಡೆದರು. ಕಷ್ಟದ ಹಾಡುಗಳನ್ನು ಹಾಡಿದ ಈ ಸ್ಪರ್ಧಿಗಳ ಪೈಕಿ ಚಿನ್ಮಯ್‌ಹಾಗೂ ಸಂದೇಶ್‌ ಮಾತ್ರ ಉಳಿದುಕೊಂಡರು.

ಅಂತಿಮವಾಗಿ ಚಿನ್ಮಯ್‌ಜೋಶಿ2021ರ ಎದೆ ತುಂಬಿ ಹಾಡುವೇನು ಸರಣಿಯವಿನ್ನರ್‌ ಆದರು. ಅವರು ₹ 10 ಲಕ್ಷ ರೂಪಾಯಿ ನಗದು ಬಹುಮಾನ ಪಡೆದರು. ಎರಡನೇ ಸ್ಥಾನ ಪಡೆದಸಂದೇಶ್‌ ಅವರಿಗೆ ₹ 5 ಲಕ್ಷ ರೂಪಾಯಿ ಬಹುಮಾನ ದೊರೆಯಿತು.

ಈಟಿವಿಯಲ್ಲಿ ಅಂದು ಎಸ್.ಪಿ. ಬಾಲಸುಬ್ರಮಣ್ಯಂ ಅವರು ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ದಿವಂಗತ ಎಸ್.ಪಿ.ಬಿ. ಅವರ ಜಾಗದಲ್ಲಿ ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ ಹಾಗೂ ರಘು ದೀಕ್ಷಿತ್ ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ವಿಶೇಷ ತೀರ್ಪುಗಾರರಾಗಿ ಎಸ್‌ಪಿಬಿ ಅವರ ಪುತ್ರ ಎಸ್.ಪಿ. ಚರಣ್ ಇದ್ದರು.

ಇಡೀ ಸರಣಿಯಲ್ಲಿ ಗಾಯಕ ಸೂರ್ಯಕಾಂತ್‌ಕೂಡ ಗಮನ ಸೆಳೆದಿದ್ದರು. ಇವರು ಅಂತಿಮ ಹಂತಕ್ಕೆ ಪ್ರವೇಶ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT