ರಿಯಲ್ ಎಸ್ಟೇಟ್ ವಂಚನೆ ಆರೋಪದ ಮೇಲೆ ರಿಯಾಲಿಟಿ ಶೋ ನಿರೂಪಕ ಜಯ್ ದುಧಾನೆ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿವೃತ್ತ ಎಂಜಿನಿಯರ್ ಒಬ್ಬರು ಸಲ್ಲಿಸಿದ ದೂರಿನಡಿ ನಿರೂಪಕನನ್ನು ಬಂಧಿಸಲಾಗಿದೆ. ದುಧಾನೆ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರು ಠಾಣೆಯಲ್ಲಿ ಈಗಾಗಲೇ ಬ್ಯಾಂಕಿಗೆ ಅಡಮಾನ ಇಡಲಾದ ಐದು ವಾಣಿಜ್ಯ ಅಂಗಡಿಗಳನ್ನು ಖರೀದಿಸಲು ಮನವೊಲಿಸಿ ₹4.61 ಕೋಟಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
.BBK12: ಫಿನಾಲೆ ಹೊತ್ತಲ್ಲೇ 5 ಮಂದಿ ನಾಮಿನೇಟ್; ಬಿಗ್ಬಾಸ್ನಿಂದ ಯಾರು ಹೊರಕ್ಕೆ? .ಬಿಗ್ಬಾಸ್ ಇತಿಹಾಸದಲ್ಲೇ ಮೊದಲು ರೆಡ್ ಕಾರ್ಡ್ ಕೊಟ್ಟು ಕಿಕ್ ಔಟ್ ಮಾಡಿದ ಸೇತುಪತಿ.
ಫಿಟ್ನೆಸ್ ತರಬೇತುದಾರ, ಮಾಡೆಲ್, ಬಿಗ್ಬಾಸ್ ಮರಾಠಿ ಸೀಸನ್ 3ರ ಸ್ಪರ್ಧಿ ಹಾಗೂ ಸ್ಪ್ಲಿಟ್ಸ್ವಿಲ್ಲಾ 13ನೇ ಸೀಸನ್ ವಿಜೇತರಾಗಿದ್ದ ಜಯ್ ದುಧಾನೆ ಅವರನ್ನು ಭಾನುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ ಮಾನೆ ತಿಳಿಸಿದ್ದಾರೆ.

ದೂರಿನ ಪ್ರಕಾರ ದುಧಾನೆ, ಸಂತ್ರಸ್ತೆಗೆ ನಕಲಿ ಬ್ಯಾಂಕ್ ಕ್ಲಿಯರೆನ್ಸ್ ಪ್ರಮಾಣಪತ್ರ ಮತ್ತು ₹4.95 ಕೋಟಿ ಮೌಲ್ಯದ ನಕಲಿ ಡಿಮಾಂಡ್ ಡ್ರಾಫ್ಟ್ ಸೇರಿದಂತೆ ಕೆಲ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬ್ಯಾಂಕ್ ಆಸ್ತಿಯನ್ನು ವಶಪಡಿಸಿಕೊಳ್ಳಲು ನೋಟಿಸ್ ನೀಡಿದ ನಂತರ ಹಗರಣ ಬೆಳಕಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.