ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಹಾನಟಿ ಸೀಸನ್ 2' ಮುಕ್ತಾಯದ ಹಂತದಲ್ಲಿದೆ. ಈಗಾಗಲೇ ಮಹಾನಟಿ ಸೀಸನ್ 2 ಫಿನಾಲೆಗೆ ವೇದಿಕೆ ಸಜ್ಜಾಗಿದ್ದು, ಐವರು ಫೈನಲಿಸ್ಟ್ಗಳು ಯಾರೆಂಬುದು ಕೂಡ ತಿಳಿದು ಬಂದಿದೆ.
.ಮಹಾನಟಿ ಸ್ಪರ್ಧಿ ದಿವ್ಯಾಂಜಲಿಗೆ ಸನ್ಮಾನ.ಕಾಂಚನ ಅವತಾರದಲ್ಲಿ ವಂಶಿ: ದಸರಾ ಸಂಭ್ರಮ ದುಪ್ಪಟ್ಟು ಮಾಡಿದ ಮಹಾನಟಿಯರು.
ವಂಶಿ, ವರ್ಷ ಡಿಗ್ರಜೆ, ಭೂಮಿಕಾ ತಮ್ಮೇಗೌಡ, ಶ್ರೀಯ ಆಗಮ್ಯ ಹಾಗೂ ಮಾನ್ಯ ರಮೇಶ್ ಈ ಐವರು ಟಾಪ್ 5 ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ. ಮಹಾನಟಿ ಕಾರ್ಯಕ್ರಮಕ್ಕೆ ಆಯ್ಕೆಯಾದ ಪ್ರತಿಯೊಬ್ಬರ ಅಭಿನಯವು ವೀಕ್ಷಕರ ಮನ ಮುಟ್ಟಿದ್ದವು. ಜೊತೆಗೆ ಶೋ ಶುರುವಾದಾಗಿನಿಂದ ಕೊನೆಯವರೆಗೂ ಎಲ್ಲಾ ಸ್ಪರ್ಧಿಗಳ ಅಭಿನಯಕ್ಕೆ ತೀರ್ಪುಗಾರರು ಕೂಡ ತಮ್ಮ ನಿರ್ಧಾರವನ್ನು ಕೊನೆಗೂ ನೀಡಿದ್ದಾರೆ.

ಈಗಾಗಲೇ ಮಹಾನಟಿಯರಿಗೆ ಈ ಶೋ ಮೂಲಕ ಕನ್ನಡದ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಲಭಿಸಿತ್ತು. ಲಕ್ಷ್ಮೀ ನಿವಾಸ, ಶ್ರಾವಣಿ ಸುಬ್ರಮಣ್ಯ, ಗಟ್ಟಿಮೇಳ, ಕರ್ಣ ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ಅಭಿನಯಿಸೋ ಅವಕಾಶವನ್ನು ತಂಡ ಕಲ್ಪಿಸಿಕೊಟ್ಟಿತ್ತು.

ಮಹಾನಟಿ ರಿಯಾಲಿಟಿ ಶೋಗೆ ತೀರ್ಪುಗಾರರ ಸ್ಥಾನವನ್ನು ನಟಿ ಪ್ರೇಮಾ, ನಟ ರಮೇಶ್ ಅರವಿಂದ್, ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ನಿಶ್ವಿಕಾ ನಾಯ್ಡು ಅಲಂಕರಿಸಿದ್ದರು. ಮುಂದಿನ ವಾರ ಮಹಾನಟಿ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಈ ಬಾರಿಯ ಮಹಾನಟಿ ಸೀಸನ್ 2ರ ವಿನ್ನರ್ ಯಾರಾಗಲಿದ್ದಾರೆ ಎಂದು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.