ಸೋಮವಾರ, ಆಗಸ್ಟ್ 2, 2021
28 °C

ಜೂನ್‌ 22ರಿಂದ ಝೀನಲ್ಲಿ ಪರಮಾವತಾರಿ ಶ್ರೀಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಮಾವತಾರಿ ಶ್ರೀಕೃಷ್ಣ

ಕೊರೊನಾ–ಲಾಕ್‌ಡೌನ್ ಅವಧಿಯಲ್ಲಿ ಧಾರಾವಾಹಿಗಳ ಚಿತ್ರೀಕರಣವೇ ನಿಂತು ಹೋಯಿತು. ಇದೇ ಸಂದರ್ಭದಲ್ಲಿ  ದಶಕಗಳ ಹಿಂದೆ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿಗಳಾದ ರಾಮಾಯಣ, ಮಹಾಭಾರತ ಮತ್ತು ಉತ್ತರ ರಾಮಾಯಣ ಧಾರಾವಾಹಿಗಳನ್ನು ದೂರದರ್ಶನ ವಾಹಿನಿ ಮರು ಪ್ರಸಾರ ಮಾಡಿತು. ಇದಕ್ಕೂ ಮುನ್ನ ಕೆಲವು ವಾಹಿನಿಗಳು ಪೌರಾಣಿಕ ಧಾರವಾಹಿಯನ್ನು ಪ್ರಸಾರ ಮಾಡುತ್ತಾ ವೀಕ್ಷಕರನ್ನು ಸೆಳೆದಿದ್ದವು.

ವೀಕ್ಷಕರ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಝೀ ಕನ್ನಡ ವಾಹಿನಿ, ಈಗ ಅಂಥದ್ದೇ ಪೌರಾಣಿಕ ಧಾರವಾಹಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಝೀ ವಾಹಿನಿ, ಇದೇ 22ರಿಂದ  ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ‘ಪರಮಾವತಾರಿ ಶ್ರೀಕೃಷ್ಣ‘ ಎಂಬ ಪೌರಾಣಿಕ ಧಾರವಾಹಿಯ ಪ್ರಸಾರ ಆರಂಭಿಸುತ್ತಿದೆ. 

ಸೋಮವಾರದಿಂದ ಶನಿವಾರದವರೆಗೆ ಪ್ರಸಾರವಾಗುವ ಈ ಧಾರಾವಾಹಿ, ಕಿರುತೆರೆ ವೀಕ್ಷಕರಿಗೆ ಶ್ರೀಕೃಷ್ಣನ ಲೀಲೆಗಳನ್ನು ತೋರಿಸಲಿದೆ. ಬೆಣ್ಣೆ ಕದಿಯುವ ಮುದ್ದು ಕೃಷ್ಣ, ಗೋಪಿಕೆಯರೊಂದಿಗೆ ಆಡುವ ತುಂಟ ಕೃಷ್ಣ, ಕಂಸನನ್ನು ಕೊಲ್ಲುವ ಧೀರ ಕೃಷ್ಣ, ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಪರ ನಿಂತು, ಅರ್ಜುನನಿಗೆ ಭಗವದ್ಗೀತೆ ಬೋಧಿಸುವ ಕೃಷ್ಣ.. ಹೀಗೆ ಹಲವು ಕೃಷ್ಣಾವತಾರಗಳನ್ನು ಈ ಧಾರವಾಹಿಯಲ್ಲಿ ತೋರಿಸಲಿದೆ.

ಕೃಷ್ಣಾವತಾದ ಬಗೆಗಿರುವ ಹಲವು ಅನುಮಾನಗಳಿಗೂ ಈ ಧಾರವಾಹಿ ಉತ್ತರ ನೀಡಲಿದೆ.  ಕೃಷ್ಣ ಯಾಕೆ ಬೆಣ್ಣೆ ಕದಿಯುತ್ತಿದ್ದ ? ರಾಧೆ–ಕೃಷ್ಣಯರ ಪ್ರೇಮದ ನಡುವೆ, ರಾಧೆಯನ್ನು ಏಕೆ ಮದುವೆಯಾಗಲಿಲ್ಲ..?  ಇಂದ ಹಲವು ಕುತೂಹಲದ ಪ್ರಶ್ನೆಗಳಿಗೆ ಧಾರಾವಾಹಿ ಉತ್ತರ ನೀಡಿದೆ.

‌‘ಕನ್ನಡ ಕಿರುತೆರೆಯ ವೀಕ್ಷಕರು ಸದಾ ಪೌರಾಣಿಕ ಧಾರವಾಹಿಗಳನ್ನು ಇಷ್ಟಪಡುತ್ತಾರೆ. ವೀಕ್ಷಕರ ಅಭಿರುಚಿ ಅರಿತು ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ನಮ್ಮ ವಾಹಿನಿ. ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ಸಾಲಿಗೆ ಈ ಧಾರಾವಾಹಿಯೂ ಸೇರಲಿದೆ‘ ಎಂದು ಝೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು