ಮುಂಬೈ: ಮೂಲ ರಾಮಾಯಣವನ್ನು ತಿರುಚಲಾಗಿದೆ ಎಂಬ ಆರೋಪದಡಿ ಇತ್ತೀಚೆಗೆ ತೆರೆಕಂಡ ಆದಿಪುರುಷ ಚಿತ್ರದ ವಿರುದ್ಧ ದೇಶ, ವಿದೇಶಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, 80ರ ದಶಕದಲ್ಲಿ ದೂರದರ್ಶನದಲ್ಲಿ ಪ್ರದರ್ಶನಗೊಂಡ ರಮಾನಂದ ಸಾಗರ್ ಅವರ ‘ರಾಮಾಯಣ’ ಧಾರಾವಾಹಿಯನ್ನು ಒಟಿಟಿ ಹಾಗೂ ಚಾನೆಲ್ ಮೂಲಕ ಪ್ರಸಾರ ಮಾಡಲು ಶೆಮಾರೂ ಸಿದ್ಧತೆ ನಡೆಸಿದೆ.

ಪ್ರಭಾಸ್ ಹಾಗೂ ಕೃತಿ ಅಭಿನಯದ ಆದಿಪುರುಷ ಚಿತ್ರದಲ್ಲಿನ ಸಂಭಾಷಣೆಗೆ ಭಾರತ, ನೇಪಾಳ ಸೇರಿದಂತೆ ವಿವಿಧೆಡೆ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಪುರಾಣವನ್ನು ತಿರುಚಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಈ ವಿವಾದ ಭುಗಿಲೆದ್ದಿರುವ ಸಂದರ್ಭದಲ್ಲಿ ದೂರದರ್ಶನದಲ್ಲಿ ಪ್ರಥಮ ಬಾರಿಗೆ ಧಾರಾವಾಹಿ ರೂಪದಲ್ಲಿ ಪ್ರಸಾರವಾದ ರಾಮಾಯಣವನ್ನು ಮರು ಪ್ರಸಾರ ಮಾಡುತ್ತಿರುವ ವಿಷಯವನ್ನು ಶೆಮಾರೂ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.

ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಖಲಿಯಾ ಹಾಗೂ ಲಕ್ಷ್ಮಣನಾಗಿ ಸುನೀಲ್ ಲಹ್ರಿ ಅವರು ಅಭಿನಯಿಸಿದ ರಾಮಾಯಣದ ಮರು ಪ್ರಸಾರ ಜುಲೈ 3ರಿಂದ ಆರಂಭವಾಗಲಿದೆ. ನಿತ್ಯ ಸಂಜೆ 7.30ಕ್ಕೆ ಇದು ಪ್ರಸಾರವಾಗಲಿದೆ ಎಂದು ಶೆಮಾರೂ ಹೇಳಿದೆ.

ಈ ನಡುವೆ, ಆದಿಪುರುಷ ಚಿತ್ರವನ್ನು ನಿಷೇಧಿಸುವ ಕುರಿತು ಅಲಹಾಬಾದ್ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಪುರಸ್ಕರಿಸಿರುವ ಪೀಠ, ಸಹ ಲೇಖಕ ಮನೋಜ್ ಶುಕ್ಲಾ ಅವರ ಹೆಸರನ್ನು ಪ್ರಕರಣದಲ್ಲಿ ಸೇರಿಸಲು ಸೂಚಿಸಿದೆ.

‘ರಾಮಾಯಣ ಎಂಬುದು ಭಾರತೀಯರಿಗೆ ಪವಿತ್ರವಾದದ್ದು. ಬಹಳಷ್ಟು ಜನ ಈಗಲೂ ಮನೆಯಿಂದ ಹೊರಕ್ಕೆ ಹೊರಡುವ ಮೊದಲು ರಾಮ ಚರಿತ ಮಾನಸವನ್ನು ಓದುತ್ತಾರೆ. ಇಂಥ ಧಾರ್ಮಿಕ ಸೂಕ್ಷ್ಮ ವಿಚಾರಗಳನ್ನು ಸಿನಿಮಾ ಮುಟ್ಟಬಾರದಿತ್ತು’ ಎಂದು ಪೀಠ ಅಭಿಪ್ರಾಯಪಟ್ಟಿದೆ.

‘ಈ ಸಿನಿಮಾ ತೆರೆಗೆ ತರುವ ಮೊದಲು ಸೆನ್ಸಾರ್ ಮಂಡಳಿ ತನ್ನ ಕೆಲಸವನ್ನು ಪರಿಪೂರ್ಣವಾಗಿ ಮಾಡಿದೆಯೇ?’ ಎಂದು ನ್ಯಾಯಪೀಠ ಪ್ರಶ್ನಿಸಿತ್ತು.

ಇದಕ್ಕೆ ಪ್ರತಿವಾದಿ ಪರ ವಕೀಲರು ಮಾಹಿತಿ ನೀಡಿ, ‘ಸಿನಿಮಾದಲ್ಲಿದ್ದ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯಲು ಸೂಚಿಸಲಾಗಿತ್ತು. ಜತೆಗೆ ಹಕ್ಕು ನಿರಾಕರಣೆ ಪ್ರಕಟಣೆ ನೀಡುವ ಕುರಿತು ಸೂಚಿಸಲಾಗಿತ್ತು.’ ಎಂದರು.

ಇದಕ್ಕೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ‘ಹಕ್ಕು ನಿರಾಕರಣೆಯನ್ನು ಒಪ್ಪಿಕೊಳ್ಳಲು ಈ ದೇಶದ ಜನ, ಯುವಜನತೆ ಬುದ್ಧಿ ಇಲ್ಲದವರು ಎಂದುಕೊಂಡಿದ್ದೀರಾ? ಭಗವಾನ್ ರಾಮ, ಲಕ್ಷ್ಮಣ, ಹನುಮಾನ್, ರಾವಣ, ಲಂಕಾ ತೋರಿಸಿ ಇದು ‘ರಾಮಾಯಣ ಅಲ್ಲ' ಎಂದರೆ ಒಪ್ಪಿಕೊಳ್ಳುತ್ತಾರೆಯೇ? ಟಿ.ವಿ.ಗಳಲ್ಲಿ ಈ ಚಿತ್ರ ಕುರಿತು ಸುದ್ದಿಗಳನ್ನು ವೀಕ್ಷಿಸಲಾಗಿದೆ. ಚಿತ್ರ ನೋಡಲು ಹೋದ ಬಹಳಷ್ಟು ಜನ ಥಿಯೇಟರ್‌ಗಳಿಗೆ ಬೀಗ ಹಾಕಿದ್ದಾರೆ. ಅದೃಷ್ಟವಶಾತ್ ವಿಧ್ವಂಸಕ ಕೃತ್ಯಗಳು ನಡೆದಿಲ್ಲ’ ಎಂದಿದೆ.

ಜುಲೈ 3ರಿಂದ ಸಂಜೆ 7.30ಕ್ಕೆ ಶೆಮಾರೂ ಟಿವಿಯಲ್ಲಿ ರಾಮಾಯಣ ಪ್ರಸಾರವಾಗಲಿದ್ದು, ಪ್ರಸಾರ ಸೇವೆ ನೀಡುವ ವೇದಿಕೆಗಳಲ್ಲಿ ಶೆಮಾರೂ ಟಿವಿಯ ಚಾನೆಲ್ ಸಂಖ್ಯೆ ಈ ರೀತಿ ಇದೆ:

DD Free Dish: 28
Tataplay : 181
Airtel: 132
D2H : 149
Dish TV : 139
GTPL : 17
DEN : 116
Hathway : 16
NXT Digital : 178
IN DIGITAL : 178
SITI CABLE : 128
FASTWAY : 26
SCOD 18 : 118
UCN : 13
Digiana : 122
Rajasthan Infotech : 312
Radiant Digitek : 143

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.