ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಗ್ ಬಾಸ್ | ರೂಪೇಶ್ ಶೆಟ್ಟಿ ಗೆಲ್ಲುತ್ತಿದ್ದಂತೆ ಕುಣಿದಾಡಿದ ಸಾನ್ಯಾ ಅಯ್ಯರ್

Last Updated 1 ಜನವರಿ 2023, 7:47 IST
ಅಕ್ಷರ ಗಾತ್ರ

ರೇಡಿಯೊ–ವಿಡಿಯೊ ಜಾಕಿಯಾಗಿದ್ದ ಹಾಗೂ ಕನ್ನಡ, ತುಳು, ಕೊಂಕಣಿ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ನಟ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಕನ್ನಡ ಸೀಸನ್-9ರಲ್ಲಿ ಜಯ ಸಾಧಿಸಿದ್ದಾರೆ. ಇದೇ ಮೊದಲ ಬಾರಿಗೆ ಒಟಿಟಿ ವೇದಿಕೆಯಲ್ಲಿ ನಡೆದ ಸೀಸನ್‌ ಸಹ ಗೆದ್ದಿದ್ದ ಶೆಟ್ಟಿ, ಟಿವಿ ಶೋನಲ್ಲಿಯೂ ಪ್ರಶಸ್ತಿ ಗೆಲ್ಲುವಲ್ಲಿ ಸಫಲರಾಗಿದ್ದಾರೆ.

100 ದಿನಗಳು ನಡೆದ ಈ ರಿಯಾಲಿಟಿ ಶೋನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳು ಎನಿಸಿದ್ದ ನಟಿ ಅಮೂಲ್ಯ ಗೌಡ, ನಟ ಅರುಣ್ ಸಾಗರ್‌ 13ನೇ ವಾರ ಹಾಗೂ ಜ್ಯೋತಿಷಿ ಆರ್ಯವರ್ಧನ್‌ ಗುರೂಜಿ 14ನೇ ವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಿದ್ದರು. ಹಾಗಾಗಿ, ಕನ್ನಡ ಪರ ಹೋರಾಟಗಳಿಂದ ಗಮನ ಸೆಳೆದಿದ್ದ ರೂಪೇಶ್‌ ರಾಜಣ್ಣ, ನಟಿಯರಾದ ದಿವ್ಯಾ ಉರುಡುಗ, ದೀಪಿಕಾ ದಾಸ್‌, ನಟರಾದ ರೂಪೇಶ್‌ ಶೆಟ್ಟಿ ಮತ್ತು ರಾಕೇಶ್‌ ಅಡಿಗ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದರು.

ಬಿಗ್ ಬಾಸ್ ಕನ್ನಡ 8 ರಲ್ಲಿ 2ನೇ ರನ್ನರ್ ಅಪ್ ಆಗಿದ್ದ ದಿವ್ಯಾ ಉರುಡುಗ ಈ ಬಾರಿ 99ನೇ ದಿನ ಹೊರಬಿದ್ದಿದ್ದರು. ನಂತರ ದೀಪಿಕಾ ದಾಸ್‌ ಮೂರನೇ ರನ್ನರ್ ಅಪ್ ಆಗಿ ಹೊರನಡೆದಿದ್ದಾರೆ. ಸೀಸನ್ 7ರಲ್ಲಿಯೂ ಫೈನಲ್‌ ಪ್ರವೇಶಿಸಿದ್ದ ಇವರು ಈ ಬಾರಿಯೂ ಪ್ರಶಸ್ತಿ ಗೆಲ್ಲಲು ಸಾದ್ಯವಾಗಿಲ್ಲ.

ಉಳಿದಂತೆ, ರೂಪೇಶ್ ರಾಜಣ್ಣ 2ನೇ ರನ್ನರ್ ಅಪ್ ಆದರೆ, ರೂಪೇಶ್‌ಗೆ ಕಠಿಣ ಸವಾಲೊಡ್ಡಿದ್ದ ರಾಕೇಶ್ ಅಡಿಗ ಮೊದಲ ರನ್ನರ್ ಅಪ್ ಆದರು.

ಕುಣಿದಾಡಿದ ಸಾನ್ಯಾ ಅಯ್ಯರ್‌, ಪ್ರಶಾಂತ್ ಸಂಬರಗಿ
ಫಿನಾಲೆಯಲ್ಲಿ ನಿರೂಪಕ–ನಟ ಸುದೀಪ್‌ ಅವರು ಇದ್ದ ಫೈನಲಿಸ್ಟ್‌ಗಳನ್ನು ಅಕ್ಕ ಪಕ್ಕ ನಿಲ್ಲಿಸಿಕೊಂಡು ರೂಪೇಶ್‌ ಕೈ ಎತ್ತುತ್ತಿದ್ದಂತೆಯೇ, ಅವರ (ರೂಪೇಶ್‌) ಕುಟುಂಬದವರು ಕಣ್ಣೀರಾದರು. ಈ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಸಾನ್ಯಾ ಅಯ್ಯರ್‌ ಮತ್ತು ಪ್ರಶಾಂತ್ ಸಂಬರಗಿ ಕುಣಿದು ಕುಪ್ಪಳಿಸಿದರು.

ರೂಪೇಶ್‌ ಮತ್ತು ಸಾನ್ಯಾ ಉತ್ತಮ ಒಡನಾಟ ಹೊಂದಿದ್ದರು. ಇವರಿಬ್ಬರ ಸಂಬಂಧದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ, ‌ಸಾನ್ಯಾ ಆರನೇ ವಾರವೇ ಎಲಿಮಿನೇಟ್ ಆದಾಗ ರೂಪೇಶ್ ಕಣ್ಣೀರು ಹಾಕಿದ್ದರು.

ಸಾನ್ಯಾ ಮಡಿಲಿನಲ್ಲಿ ತಲೆ ಇಟ್ಟು ದುಃಖಿತರಾಗಿದ್ದಾರೆ. ನಿನ್ನನ್ನು ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತೇನೆ ಎಂದೂ ಬೇಸರ ವ್ಯಕ್ತಪಡಿಸಿದ್ದರು. ಇದೀಗ, ರೂಪೇಶ್‌ ಗೆಲುವಿನ ಬಳಿಕ ಸಾನ್ಯಾ ಕುಣಿದು ಸಂಭ್ರಮಿಸಿದ್ದಾರೆ.

ರೂಪೇಶ್‌ಗೆ ಸಿಕ್ಕ ಹಣವೆಷ್ಟು?
ರೂಪೇಶ್‌ಗೆ ಟಿವಿ ಶೋನಲ್ಲಿ ಗೆದ್ದದ್ದಕ್ಕೆ ₹ 60 ಲಕ್ಷ ಮತ್ತು ಒಟಿಟಿಯಲ್ಲಿ ಜಯ ಸಾಧಿಸಿದ್ದಕ್ಕೆ ₹ 5 ಲಕ್ಷ ಸಿಕ್ಕಿದೆ. ಮೊದಲ ರನ್ನರ್ ಅಪ್ ಆಗಿ ರಾಕೇಶ್‌ಗೆ ₹ 12 ಲಕ್ಷ, ಎರಡನೇ ಹಾಗೂ ಮುರನೇ ರನ್ನರ್ ಅಪ್‌ಗಳಾದ ದೀಪಿಕಾ ದಾಸ್‌, ರೂಪೇಶ್ ರಾಜಣ್ಣಗೆ ತಲಾ ₹ 3 ಲಕ್ಷ ಲಭಿಸಿದೆ. ನಾಲ್ಕನೇ ರನ್ನರ್ ಅಪ್ ದಿವ್ಯಾ ಉರುಡುಗ ₹2 ಲಕ್ಷ ಪಾಕೆಟ್‌ಗೆ ಇಳಿಸಿದ್ದಾರೆ.

ರೂಪೇಶ್‌ ನಟಿಸಿದ ಸಿನಿಮಾಗಳು
ತುಳು ಸಿನಿಮಾ 'ದಿಬ್ಬಣ'ದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ರೂಪೇಶ್‌, ನಂತರ ಅದೇ ಭಾಷೆಯ 'ಐಸ್‌ಕ್ರೀಮ್‌'ನಲ್ಲಿ ನಾಯಕನಾಗಿ ಅಭಿನಯಿಸಿದರು. ಅವರು ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ 'ಡೇಂಜರ್‌ ಝೋನ್'. ಇದು 2016ರಲ್ಲಿ ತೆರೆ ಕಂಡಿತ್ತು. ಬಳಿಕ ಅವರು ಕೊಂಕಣಿಯೂ ಸೇರಿದಂತೆ ಒಟ್ಟು 12 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT