ಮಂಗಳವಾರ, ಏಪ್ರಿಲ್ 20, 2021
32 °C

Bigg Boss 8| ಮಾವ... ಪ್ರಶಾಂತ್ ಸಂಬರಗಿಗೆ ಸುದೀಪ್ ಇಟ್ಟ ಹೆಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 8 ಆರಂಭವಾಗಿ ಒಂದು ವಾರ ಕಳೆದಿದೆ. ನಿರೂಪಕ ಸುದೀಪ್ ಎಲ್ಲ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ. ಸ್ಪರ್ಧಿಗಳು ಖುಷಿ ಖುಷಿಯಾಗಿ ಅನುಭವ ಹಂಚಿಕೊಂಡಿದ್ದಾರೆ. ಈ ಸಂದರ್ಭ, ಸುದೀಪ್ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಗೆ ಒಂದು ಹೆಸರು ಇಡುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು.

ಬಿಗ್ ಬಾಸ್ ಮನೆಗೆ ಬಂದ ಕೆಲ ಸ್ಪರ್ಧಿಗಳು ಪ್ರೇಮಕ್ಕೆ ಬಿದ್ದಿದ್ದಾರೆ. ಗರ್ಲ್ ಫ್ರೆಂಡ್‌ಗಳನ್ನು ಹುಡುಕಿಕೊಂಡಿದ್ದರು. ನೀವೇನ್ರಿ ಮಾವನನ್ನ ಹುಡುಕಿಕೊಂಡ್ರಿ ಎಂದು ಮಂಜು ಪಾವಗಡ ಅವರನ್ನು ಸುದೀಪ್ ತಮಾಷೆಯಾಗಿ ಪ್ರಶ್ನಿಸಿದರು. ಬಳಿಕ, ಆ ಮಾವ ಯಾರು ಅಂತಾ ಬೇಕಲ್ಲ. ಅದು ಬೇರರೂ ಅಲ್ಲ. ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ. ಮಾವ ಅನ್ನೋ ಹೆಸರನ್ನು ನೀವೂ ತುಂಬಾ ಎಂಜಾಯ್ ಮಾಡ್ತಿದ್ದೀರ ಅನ್ಸುತ್ತೆ. ಅದಕ್ಕೆ ನಾನು ನಿಮಗೆ ಮಾವ ಅಂತಾ ಹೆಸರೇ ಇಡುತ್ತೇನೆ ಎಂದು ಹೇಳಿ ಹೆಸರು ಇಟ್ಟೇ ಬಿಟ್ಟರು.

ಈ ವಾರ ಮನೆಯಲ್ಲಿ ಬೆಸ್ಟ್ ಪರ್ಫಾಮರ್ ಆಗಿ ಸ್ಪರ್ಧಿಗಳಿಂದ ಪಟ್ಟ ಗಿಟ್ಟಿಸಿಕೊಂಡ ಪ್ರಶಾಂತ್ ಸಂಬರಗಿ ಅವರನ್ನು ಮಂಜು ಪಾವಗಡ ಅವರು ತಮಾಷೆಯಾಗಿ ಮಾವ ಎಂದು  ಕರೆಯುತ್ತಿರುತ್ತಾರೆ. ಇದನ್ನೇ ಉಲ್ಲೇಖಿಸಿದ ಸುದೀಪ್ ಅದೇ ಹೆಸರು ಖಾಯಂ ಮಾಡಿದರು. 

ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ನಟಿಯರ ವಿರುದ್ಧ ಅರೋಪ ಮಾಡಿ ಸುದ್ದಿಯಾಗಿದ್ದ ಸಂಬರಗಿ, ಬಿಗ್ ಬಾಸ್ ಮನೆಯಲ್ಲಿ ತುಂಬಾ ಡಾಮಿನೇಟ್ ಎಂಬ ರೀತಿ ಗುರುತಿಸಿಕೊಂಡಿದ್ದಾರೆ. ಮೊದಲ ವಾರ ಹಲವು ಸ್ಪರ್ಧಿಗಳು ಇದೇ ವಿಷಯಕ್ಕೆ ಸಂಬರಗಿಗೆ ಡಿಸ್ ಲೈಕ್ ಬ್ಯಾಡ್ಜ್ ಹಾಕಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು