ಮಂಗಳವಾರ, ಮಾರ್ಚ್ 21, 2023
30 °C

ಚೇತರಿಸಿಕೊಂಡ ನಟ ಸುದೀಪ್‌: ಮತ್ತೆ ಬಿಗ್‌ಬಾಸ್‌ ನಡೆಸಲು ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳೆದೆರಡು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್‌ ಚೇತರಿಸಿಕೊಂಡಿದ್ದು, ಈ ವಾರಾಂತ್ಯದ ಬಿಗ್‌ಬಾಸ್‌ ಸಂಚಿಕೆಗಳಲ್ಲಿ ಭಾಗವಹಿಸಲಿದ್ದಾರೆ.

‘ನಿಮ್ಮ ಪ್ರಾರ್ಥನೆಗೆ ಧನ್ಯವಾದ. ನಾಗೀಗ ಚೇತರಿಸಿಕೊಂಡಿದ್ದು, ಈ ವಾರಾಂತ್ಯದ ಬಿಗ್‌ಬಾಸ್‌ ಸಂಚಿಕೆಯಲ್ಲಿ ಭಾಗವಹಿಸಲು ಎದುರುನೋಡುತ್ತಿದ್ದೇನೆ. ನನ್ನ ಆರೋಗ್ಯದ ಮೇಲೆ ನಿಗಾ ಇರಿಸಿದ ವೈದ್ಯರಾದ ವೆಂಕಟೇಶ್‌ ಹಾಗೂ ವಿನಯ್‌ ಅವರಿಗೆ ಧನ್ಯವಾದ’ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್‌, ಕಳೆದೆರಡು ವಾರದ ಬಿಗ್‌ಬಾಸ್‌ ‘ವಾರದ ಕಥೆ ಕಿಚ್ಚನ ಜೊತೆ’ ಹಾಗೂ ‘ಸೂಪರ್‌ ಸಂಡೇ ವಿದ್‌ ಸುದೀಪ್‌’ನಲ್ಲಿ ಭಾಗವಹಿಸಿರಲಿಲ್ಲ. ಸುದೀಪ್‌ ಅನುಪಸ್ಥಿತಿಯಲ್ಲಿ ನಡೆದ ಸಂಚಿಕೆಯಲ್ಲಿ, ಮನೆಯಿಂದ ಹೊರಹೋಗಲು ನಾಮಿನೇಟ್‌ ಆಗಿದ್ದ ಸ್ಪರ್ಧಿಗಳನ್ನು ಹಲವು ಆಟದ ಮುಖಾಂತರ ಸೇಫ್‌ ಮಾಡಲಾಗಿತ್ತು. ಕಳೆದ ಎಂಟು ಆವೃತ್ತಿಗಳಲ್ಲಿ ಹೀಗಾಗಿದ್ದು ಇದೇ ಮೊದಲಾಗಿತ್ತು. ಮನೆಯೊಳಗಿದ್ದ ಸ್ಪರ್ಧಿಗಳೂ, ಸುದೀಪ್‌ ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪತ್ರದ ಮುಖೇನ ಕೋರಿದ್ದರು. ಸುದೀಪ್‌ ಅಭಿಮಾನಿಗಳೂ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಟ್ವಿಟರ್‌, ಇನ್‌ಸ್ಟಾಗ್ರಾಂನಲ್ಲಿ ಸಂದೇಶಗಳನ್ನು ಕಳುಹಿಸಿದ್ದರು.   

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು