ಶುಕ್ರವಾರ, ಮೇ 27, 2022
28 °C

ತೆಲುಗು ಬಿಗ್‌ಬಾಸ್‌ 5 | ’ಸನ್ನಿ’ ವಿನ್ನರ್‌: ಮನೆ, ಕಾರು, ₹ 50 ಲಕ್ಷ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌:  ತೆಲುಗಿನ ಖ್ಯಾತ ನಟ ನಾಗಾರ್ಜುನ ನಡೆಸಿಕೊಡುತ್ತಿರುವ ತೆಲುಗು ಬಿಗ್‌ಬಾಸ್‌ 5ನೇ ಸರಣಿಯ ರಿಯಾಲಿಟಿ ಶೋ ಮುಕ್ತಾಯವಾಗಿದ್ದು ವಿಡಿಯೊ ಜಾಕಿ 'ಸನ್ನಿ' ಬಿಗ್‌ಬಾಸ್‌ ವಿನ್ನರ್‌ ಆಗಿದ್ದಾರೆ. 

ಜನಪ್ರಿಯತೆ ಪಡೆದುಕೊಂಡಿದ್ದ ಸನ್ನಿ, ಷಣ್ಮುಖ ಜಸ್ವಂತ್‌, ಶ್ರೀರಾಮಚಂದ್ರ ಹಾಗೂ ಮಾನಸಾ ಫೈನಲ್‌ ಪ್ರವೇಶ ಪಡೆದಿದ್ದರು. ಇವರ ಪೈಕಿ ಸನ್ನಿ ಮತ್ತು ಷಣ್ಮುಖ ಫೈನಲ್‌ನಲ್ಲಿ ಉಳಿದುಕೊಂಡಿದ್ದರು.

ಅಂತಿಮವಾಗಿ ನಾಗಾರ್ಜುನ ಅವರು ಸನ್ನಿ ಕೈ ಎತ್ತುವ ಮೂಲಕ ವಿನ್ನರ್‌ ಎಂದು ಘೋಷಣೆ ಮಾಡಿದರು. ಸನ್ನಿಯವರು 5ನೇ ಆವೃತ್ತಿಯ ಟ್ರೋಫಿ, ಕಾರು, ಮನೆ ಸೇರಿದಂತೆ ₹ 50 ಲಕ್ಷ ರೂಪಾಯಿ ಬಹುಮಾನ ಗೆದ್ದರು. 

ಷಣ್ಮುಖ ಅವರು ಮೊದಲ ರನ್ನರ್​ ಅಪ್​ ಆದರೆ, ಶ್ರೀರಾಮಚಂದ್ರ ಎರಡನೇ ರನ್ನರ್​ ಅಪ್​ ಆಗಿ ಹೊರ ಹೊಮ್ಮಿದ್ದಾರೆ. ಮತ್ತೊಬ್ಬರಾದ ಮಾನಸಾ ನಾಲ್ಕನೇ ಸ್ಥಾನ ಪಡೆದುಕೊಂಡರು. ಇವರು ಕೂಡ ಆಕರ್ಷಕ ಬಹುಮಾನಗಳನ್ನು ಗೆದ್ದರು

ಹಲವು ವಿವಾದಗಳಿಗೆ ಕಾರಣವಾಗಿದ್ದ ಈ ಕಾರ್ಯಕ್ರಮವನ್ನು ನಾಗಾರ್ಜುನ ಅವರು ಮೊದಲ ದಿನದಿಂದಲೂ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದರು. ಈ ಸಲದ ಕಾರ್ಯಕ್ರಮದಲ್ಲಿ 19 ಜನ ಭಾಗವಹಿಸಿದ್ದರು.

ಓದಿ: 

ಅದ್ದೂರಿ ಫೈನಲ್‌ ಕಾರ್ಯಕ್ರಮಕ್ಕೆ ಬಾಲಿವುಡ್‌ನ ಬ್ರಹ್ಮಾಸ್ತ್ರ ಸಿನಿಮಾ ತಂಡದ ರಣಬೀರ್‌ ಕಪೂರ್‌, ಆಲಿಯಾ ಭಟ್‌, ಆರ್‌ಆರ್‌ಆರ್‌ ಸಿನಿಮಾದ ನಿರ್ದೇಶಕ ರಾಜಮೌಳಿ, ಪುಷ್ಪ ಸಿನಿಮಾ ತಂಡದಿಂದ ರಶ್ಮಿಕಾ ಮಂದಣ್ಣ, ಶ್ಯಾಮ್‌ ಸಿಂಗ್‌ ರಾಯ್‌ ಸಿನಿಮಾ ತಂಡದಿಂದ  ನಾನಿ, ಸಾಯಿ ಪಲ್ಲವಿ ಆಗಮಿಸಿದ್ದರು.   

ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದ್ದ ಈ ಕಾರ್ಯಕ್ರಮದ ಫೈನಲ್‌ ಅದ್ದೂರಿಯಾಗಿ ನಡೆಯಿತು. 

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು