ಶನಿವಾರ, ಮೇ 28, 2022
30 °C

ಮಡಗಾಸ್ಕರ್‌ನಲ್ಲಿ ಮಾತ್ರ ಕಂಡುಬರುವ ಸಿಫಾಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಗಾಸ್ಕರ್ ದ್ವೀಪವು ಹಲವು ವಿಭಿನ್ನ ಪ್ರಾಣಿಗಳು ಮತ್ತು ಪಕ್ಷಿ ಪ್ರಭೇದಗಳ ತಾಣವಾಗಿದೆ. ಇಲ್ಲಿ ಮಾತ್ರ ಕಂಡುಬರುವ ಜೀವಿಗಳಲ್ಲಿ ವಿಭಿನ್ನ ಜೀವನ ಶೈಲಿಯಿಂದ ಗಮನ ಸೆಳೆಯುವ ಪ್ರಾಣಿ ಸಿಫಾಕ. ಇದರ ವೈಜ್ಞಾನಿಕ ಹೆಸರು ಪ್ರಾಪಿಥೆಕಸ್ (Propithecus). ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ?

ಇದು ಮಧ್ಯಮ ಗಾತ್ರದ ಸಸ್ತನಿಯಾಗಿದ್ದು, ಈವರೆಗೆ ಇದರಲ್ಲಿ ಮೂರು ಪ್ರಭೇದಗಳನ್ನು ಗುರುತಿಸಲಾಗಿದೆ. ಇದರ ಮುಖವು ಕಪ್ಪಾಗಿದ್ದು, ಉದ್ದವಾದ ಮೂತಿಯನ್ನು ಹೊಂದಿದೆ. ದೇಹವು ಕಪ್ಪು, ಹಳದಿ, ಬಿಳಿ, ಬೂದು ಬಣ್ಣದ ತುಪ್ಪಳದಿಂದ ಆವೃತವಾಗಿದ್ದು. ದೇಹದ ಮುಂಗಾಲುಗಳು, ಕೆಳಭಾಗವು ಕಂದು ಬಣ್ಣದಿಂದ ಕೂಡಿರುತ್ತದೆ. ಉದ್ದವಾದ ಬಾಲವನ್ನು ಹೊಂದಿದೆ. ಉದ್ದವಾದ, ಬಲವಾದ ಮುಂಗಾಲು ಮತ್ತು ಹಿಂಗಾಲುಗಳನ್ನು ಹೊಂದಿದ್ದು, ಇದು ಮರದಿಂದ ಮರಕ್ಕೆ ಜಿಗಿಯುವಾಗ ಗರಿಷ್ಠ 30 ಅಡಿಗಳವರೆಗೆ ಜಿಗಿಯಬಲ್ಲದು.

ಎಲ್ಲೆಲ್ಲಿವೆ?

ಮಡಗಾಸ್ಕರ್ ದ್ವೀಪ ಮತ್ತು ಆಫ್ರಿಕಾದ ಪೂರ್ವ ಭಾಗದ ಕರಾವಳಿಯ ಅರಣ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಆಹಾರ

ಇದು ಸಸ್ಯಾಹಾರಿ ಪ್ರಾಣಿಯಾಗಿದೆ. ಹೆಚ್ಚಾಗಿ ವಿವಿಧ ಸಸ್ಯಗಳ ಎಲೆಗಳು, ಹಣ್ಣುಗಳನ್ನು ತಿನ್ನುತ್ತದೆ.

ವರ್ತನೆ ಮತ್ತು ಜೀವನ ಕ್ರಮ

ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುತ್ತದೆ. ಒಂದು ಗುಂಪಿನಲ್ಲಿ 6 ರಿಂದ 10 ಪ್ರಾಣಿಗಳಿರುತ್ತವೆ. ದಿನದ ಬಹುತೇಕ ಸಮಯವನ್ನು ಮರದ ಮೇಲೆ ಕಳೆಯುತ್ತದೆ. ಹಗಲಿನ ವೇಳೆ ಹೆಚ್ಚು ಚಟುವಟಿಕೆಯಿಂದ ಇದ್ದು, ಆಹಾರದ ಹುಡುಕಾಟದಲ್ಲಿ ತೊಡಗಿರುತ್ತದೆ. ರಾತ್ರಿಯ ವೇಳೆ ಮರದ ಮೇಲೆ ವಿಶ್ರಾಂತಿ ಪಡೆಯುತ್ತದೆ. ಇದಕ್ಕೆ ಕಾಡಿನಲ್ಲಿ ಮರದಿಂದ ಮರಕ್ಕೆ ಜಿಗಿಯುವುದು, ಗುಂಪಿನಲ್ಲಿ ಕುಣಿಯುತ್ತಾ, ಲಂಬವಾಗಿ ನಡೆಯಲು ಇಷ್ಟ ಪಡುತ್ತದೆ. ಪೋಸಾ, ಪುಮಾದಂತಹ ಕಾಡು ಪ್ರಾಣಿಗಳು ಇವುಗಳನ್ನು ಬೇಟೆಯಾಡಿ ತಿನ್ನುತ್ತವೆ. ಇವುಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬರುತ್ತಿದೆ. 

ಸಂತಾನೋತ್ಪತ್ತಿ

ನವೆಂಬರ್‌ನಿಂದ ಜನವರಿ ನಡುವಿನ ಸಮಯವು ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿದೆ. ಹೆಣ್ಣು ಸಿಫಾಕ ಸುಮಾರು ಆರು ತಿಂಗಳು ತಿಂಗಳು ಗರ್ಭ ಧರಿಸಿದ ನಂತರ ಒಂದು ಅಥವಾ ಎರಡು ಮರಿಗಳಿಗೆ ಜನ್ಮ ನೀಡುತ್ತದೆ. ಹುಟ್ಟಿದ ನಾಲ್ಕು ವಾರಗಳ ನಂತರ ಮರಿಗಳು ನಡೆದಾಡಲು ಶುರು ಮಾಡುತ್ತವೆ. ಮರಿಗಳು ವಯಸ್ಕ ಹಂತಕ್ಕೆ ತಲುಪುವವರೆಗೂ ತಾಯಿಯ ಪೋಷಣೆಯಲ್ಲಿ ಬೆಳೆಯುತ್ತವೆ. ಇವು ವಯಸ್ಕ ಹಂತ ತಲುಪಲು ಎರಡರಿಂದ ಮೂರು ವರ್ಷ ಬೇಕಾಗುತ್ತದೆ.

ಗಾತ್ರ ಮತ್ತು ಜೀವಿತಾವಧಿ

40 ರಿಂದ 55 ಸೆಂ.ಮೀ: ದೇಹದ ಉದ್ದ

ತೂಕ 6 ರಿಂದ 8 ಕೆ.ಜಿ: ತೂಕ

15 ರಿಂದ 20 ವರ್ಷ: ಜೀವಿತಾವಧಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು