ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುನೊ ರಾಷ್ಟ್ರೀಯ ಉದ್ಯಾನ ಸೇರಿದ್ದ ಚೀತಾಗಳು ಈಗ ಹೇಗಿವೆ?

Last Updated 18 ಸೆಪ್ಟೆಂಬರ್ 2022, 11:10 IST
ಅಕ್ಷರ ಗಾತ್ರ

ಶಯೋಪುರ (ಮಧ್ಯಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ‘ಕುನೊ ರಾಷ್ಟ್ರೀಯ ಉದ್ಯಾನ (ಕೆಎನ್‌ಪಿ)’ ದಲ್ಲಿ ಶನಿವಾರ ಬಿಡುಗಡೆ ಮಾಡಿದ ಚೀತಾವೊಂದರ ಚಿತ್ರವನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಭಾನುವಾರ ಬಿಡುಗಡೆ ಮಾಡಿದೆ.

‘ಸ್ವಾಗತ ಕಾರ್ಯಕ್ರಮದ ನಂತರ ಉದ್ಯಾನದಲ್ಲಿ ಚೀತಾಗಳು ಹೀಗಿವೆ...’ ಎಂಬ ಸಾಲಿನೊಂದಿಗೆ ಚೀತಾವೊಂದರ ಫೋಟೊವನ್ನು ಇಲಾಖೆಯು ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಉಲ್ಲಸಿತ ಭಾವದಲ್ಲಿ ಕಾಣಿಸಿಕೊಂಡಿರುವ ಚೀತಾ ಮೇಲ್ಮುಖವಾಗಿ ಮಲಗಿರುವುದು ಚಿತ್ರದಲ್ಲಿದೆ.

ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರಗೊಳ್ಳುವ ಯಾವುದೇ ಜೀವಿಗಳು ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತವೆ. ಕೆಲವೊಮ್ಮೆ ಅವು ಹೊಸ ಪರಿಸರಕ್ಕೆ ಹೊಂದಿಕೊಳ್ಳದೇ ಹೋಗುವುದೂ ಉಂಟು. ಇದು ಪರಿಸರ, ಪ್ರಾಣಿ ಪ್ರಿಯರ ಆತಂಕವೂ ಹೌದು. ಆದರೆ, ಹೊಸ ಚೀತಾ ಕುನೊ ಅಭಯಾರಣ್ಯದ ಹೊಸ ಪರಿಸರದಲ್ಲಿ ಗೆಲುವಿನಿಂದ ಕಾಣಿಸಿಕೊಂಡಿರುವುದು ವಿಶೇಷವೆನಿಸಿದೆ.

ಶನಿವಾರ, ಚೀತಾ ಬಿಡುಗಡೆ ನಂತರ ಮಾತನಾಡಿದ್ದ ನರೇಂದ್ರ ಮೋದಿ ಅವರು, ‘ಚೀತಾಗಳನ್ನು ರಕ್ಷಿಸಿ. ಮಾನವ–ಪ್ರಾಣಿ ಸಂಘರ್ಷವನ್ನು ನಿಯಂತ್ರಿಸಿ. ಈ ಪ್ರಾಣಿಗಳು ತಮ್ಮ ಹೊಸ ಆವಾಸಸ್ಥಾನಕ್ಕೆ ಒಗ್ಗಿಕೊಳ್ಳುವವರೆಗೆ ತಮ್ಮನ್ನೂ ಸೇರಿದಂತೆ ಯಾರೊಬ್ಬರನ್ನೂ ಕೆಎನ್‌ಪಿ ಒಳಗೆ ಬಿಡಬೇಡಿ’ ಎಂದು ಉದ್ಯಾನದ ಸಿಬ್ಬಂದಿಗೆ ತಿಳಿಸಿದ್ದರು.

'ಇಲ್ಲಿ ರಚಿಸಲಾಗಿರುವ ಆವರಣಕ್ಕೆ ಚೀತಾಗಳು ಒಗ್ಗಿಕೊಳ್ಳಲು ಸಮಯ ಬೇಕಾಗುತ್ತದೆ. ನಂತರ ಅವು ಅರಣ್ಯಕ್ಕೆ ಒಗ್ಗಿಕೊಳ್ಳಬೇಕಿದೆ ಎಂಬುದು ನಿಮಗೆ ತಿಳಿದಿರಬೇಕು. ರಾಜಕೀಯ ನಾಯಕರು, ಮಾಧ್ಯಮದವರು, ಅಧಿಕಾರಿಗಳು, ಸಂಬಂಧಿಕರು ಅಷ್ಟೇಯೇಕೆ ನನಗೂ ಉದ್ಯಾನದೊಳಗೆ ಪ್ರವೇಶ ನಿರಾಕರಿಸುವುದು ನಿಮ್ಮ ಕರ್ತವ್ಯ' ಎಂದು 'ಚೀತಾ ಮಿತ್ರ'ರಿಗೆ ಹೇಳಿದ್ದರು.

ಒಟ್ಟು 8 ಚೀತಾಗಳನ್ನು (ಐದು ಹೆಣ್ಣು ಮತ್ತು ಮೂರು ಗಂಡು) ನಮೀಬಿಯಾದಿಂದ ಗ್ವಾಲಿಯರ್‌ಗೆ ಬೋಯಿಂಗ್ ವಿಮಾನದಲ್ಲಿ ಶನಿವಾರ ಕರೆತರಲಾಗಿದೆ. ಈ ಪ್ರಾಣಿಗಳನ್ನು ಕರೆತರಲು ಅನುಕೂಲವಾಗುವಂತೆ ವಿಮಾನವನ್ನು ಮಾರ್ಪಾಡು ಮಾಡಲಾಗಿತ್ತು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT