ಶನಿವಾರ, ಫೆಬ್ರವರಿ 27, 2021
19 °C

ಕೇರಳ, ತಮಿಳುನಾಡಿನಲ್ಲಿ ಇರುವೆಯ ಅಪರೂಪದ ಎರಡು ಪ್ರಬೇಧ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇರಳ ಹಾಗೂ ತಮಿಳುನಾಡಿನಲ್ಲಿ ಅಪರೂಪ ಎನಿಸಿರುವ ಎರಡು ಹೊಸ ಪ್ರಬೇಧದ ಇರುವೆಗಳನ್ನು ವಿಜ್ಞಾನಿಗಳ ತಂಡ ಪತ್ತೆಹಚ್ಚಿದೆ ಎಂದು ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗವು (ಡಿಎಸ್‌ಟಿ) ಶನಿವಾರ ಹೇಳಿದೆ.

ಪಟಿಯಾಲದ ಪಂಜಾಬಿ ವಿಶ್ವವಿದ್ಯಾಲಯದ ಹಿಮಂದರ್‌ ಭಾರ್ತಿ ನೇತೃತ್ವದ ತಂಡವು ಅಪರೂಪದ ಈ ಇರುವೆಗಳನ್ನು ಪತ್ತೆಹಚ್ಚಿದ್ದಾರೆ.

ಒಂದು ಪ್ರಬೇಧದ ಇರುವೆಯು ಕೇರಳದ ಪೆರಿಯಾರ್‌ ಹುಲಿ ರಕ್ಷಿತಾರಣ್ಯದಲ್ಲಿ ಪತ್ತೆಯಾಯಿತು. ಜವಾಹರ್‌ಲಾಲ್‌ ನೆಹರೂ ಸೆಂಟರ್‌ ಫಾರ್‌ ಅಡ್ವಾನ್ಸ್ಡ್‌ ಸೈಂಟಿಫಿಕ್‌ ರಿಸರ್ಚ್‌ನ ಹೆಸರಾಂತ ಜೀವಶಾಸ್ತ್ರಜ್ಞ ಪ್ರೊ. ಅಮಿತಾಭ್‌ ಜೋಷಿ ಅವರ ಗೌರವಾರ್ಥವಾಗಿ ಒಂದು ಹೊಸ ಪ್ರಬೇಧದ ಇರುವೆಗೆ ಓಸೆರಿಯಾ ಜೋಷಿ ಎಂದು ಹೆಸರಿಡಲಾಗಿದೆ ಎಂದು ಡಿಎಸ್‌ಟಿ ಹೇಳಿದೆ.

ಈ ಎರಡು ಇರುವೆಗಳನ್ನು ಜೀವವೈವಿಧ್ಯತೆಯ ಅಪರೂಪದ ಪ್ರಬೇಧಗಳು ಎಂದು ಗುರುತಿಸಲಾಗಿದೆ. ಇರುವೆಯ ತಲೆಯ ಮೇಲಿನ ಫೀಲರ್‌ ಮೂಲಕ ಅವುಗಳ ವ್ಯತ್ಯಾಸಗಳನ್ನು ಗುರುತಿಸಲಾಗುತ್ತದೆ ಎಂದು ಡಿಎಸ್‌ಟಿ ಮಾಹಿತಿ ನೀಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು