ಭಾನುವಾರ, ಅಕ್ಟೋಬರ್ 24, 2021
25 °C

ನೋಡಿ: ಕಾಡು ಬಿಟ್ಟು ನಾಡಿಗೆ ಬಂದ 12 ಅಡಿ ಉದ್ದದ ಕಾಳಿಂಗ ಸರ್ಪ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳುನಾಡಿನ ತೆಂಕಾಸಿ ಸಮೀಪದ ಗ್ರಾಮವೊಂದರಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. 

ಈ ಕಾಳಿಂಗ ಸರ್ಪದ ಫೋಟೊ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ. ಉದ್ಯಮಿ ಹಾಗೂ  ಜೊಹೊ ಕಂಪನಿಯ ​ಸಿಇಒ ಶ್ರೀಧರ್​ ವೆಂಬು ಕಾಳಿಂಗ ಸರ್ಪದ ಫೋಟೊವನ್ನು ಟ್ವೀಟ್‌ ಮಾಡಿದ್ದಾರೆ. 

’ನಮ್ಮ ಮನೆಯ ಸಮೀಪದಲ್ಲಿ ಕಾಳಿಂಗ ಸರ್ಪ ಬಂದಿತ್ತು. ನಾವು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದೆವು. ಅವರು ಸ್ಥಳಕ್ಕೆ ಬಂದು ಸರ್ಪವನ್ನು ಹಿಡಿದು ಊರಿನ ಪಕ್ಕದಲ್ಲಿರುವ ಕಾಡಿಗೆ ಬಿಟ್ಟರು ಎಂದು ಶ್ರೀದರ್‌ ಹೇಳಿಕೊಂಡಿದ್ದಾರೆ. 

ಕಪ್ಪಾದ ಕಾಳಿಂಗ ಸರ್ಪವನ್ನು ನಾನು ಕೂಡ ಧೈರ್ಯದಿಂದ ಮುಟ್ಟಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. 

ಈ ಫೋಟೊಗೆ ಸಾವಿರಾರು ಲೈಕ್ಸ್​ಗಳು ಬಂದಿದ್ದು ನೂರಾರು ಸಲ  ರೀಟ್ವೀಟ್ ಆಗಿದೆ. ಹಾವು ನೋಡಿ ಸಂತಸ ವ್ಯಕ್ತಪಡಿಸಿರುವ ನೆಟ್ಟಿಗರು ವಿವಿಧ ಕಮೆಂಟ್‌ಗಳುನ್ನು ಹಾಕಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು