ನವದೆಹಲಿ: ಹವಾಮಾನ ಬದಲಾವಣೆ ಮಿತಿ, ಜೀವವೈವಿಧ್ಯ ಪುನರ್‌ಸ್ಥಾಪನೆ ಮತ್ತು ಆರೋಗ್ಯ ರಕ್ಷಣೆಗೆ ವಿಶ್ವ ನಾಯಕರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದಿ ಲ್ಯಾನ್ಸೆಟ್ ಮತ್ತು ನ್ಯಾಷನಲ್ ಮೆಡಿಕಲ್ ಜರ್ನಲ್ ಆಫ್ ಇಂಡಿಯಾ ಸೇರಿದಂತೆ 220ಕ್ಕೂ ಹೆಚ್ಚು ಪ್ರಮುಖ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಸಂಪಾದಕೀಯ ಹೇಳಿದೆ.

ಲಂಡನ್‌ನ ಗ್ಲ್ಯಾಸ್ಗೋದಲ್ಲಿ ನವೆಂಬರ್‌ನಲ್ಲಿ ಆಯೋಜನೆಗೊಂಡಿರುವ ಸಿಒಪಿ26 ಹವಾಮಾನ ಸಮ್ಮೇಳನದ ಮೊದಲು ನಡೆಯುತ್ತಿರುವ ಕೊನೆಯ ಅಂತರರಾಷ್ಟ್ರೀಯ ಸಭೆಗಳಲ್ಲಿ ಒಂದಾದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಮುಂಚಿತವಾಗಿ ಈ ಸಂಪಾದಕೀಯ ಪ್ರಕಟಿಸಲಾಗಿದೆ.

ಜಾಗತಿಕ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗಿರುವಂತೆ ಮತ್ತು ಜೀವವೈವಿಧ್ಯ ಪುನರ್ ಸ್ಥಾಪಿಸಲು ವಿಶ್ವದ ನಾಯಕರು ಸಮರ್ಪಕ ಕ್ರಮ ಕೈಗೊಳ್ಳದಿರುವುದು ಭವಿಷ್ಯದಲ್ಲಿ ಜಾಗತಿಕ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಬೆದರಿಕೆಯೊಡ್ಡಲಿದೆ ಎಂದು ಸಂಪಾದಕೀಯ ಎಚ್ಚರಿಸಿದೆ.

ಬದಲಾಗುತ್ತಿರುವ ಹವಾಗುಣವು ಮನುಕುಲಕ್ಕೆ ಅನೇಕ ರೀತಿಯಲ್ಲಿ ಅಪಾಯ ಉಂಟುಮಾಡುತ್ತಿದೆ. ಆರೋಗ್ಯ ರಕ್ಷಣೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಹವಾಮಾನ ಬದಲಾವಣೆ ಮಿತಿಗೊಳಿಸಲು ಕೋವಿಡ್ 19 ಸಾಂಕ್ರಾಮಿಕ ಕೊನೆಗೊಳ್ಳಲೆಂದು ಕಾಯುತ್ತಾ ಕೂರುವಂತಿಲ್ಲ. ತಕ್ಷಣದ ಕ್ರಮದ ಅವಶ್ಯಕತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

‘ಜಗತ್ತಿನಾದ್ಯಂತದ ಹವಾಮಾನದ ವೈಪರೀತ್ಯದ ಇತ್ತೀಚಿನ ಉದಾಹರಣೆಗಳು ಹವಾಮಾನ ಬದಲಾವಣೆಯ ವಾಸ್ತವತೆಯನ್ನು ಕೇಂದ್ರೀಕರಿಸಿದೆ’ ಎಂದು ನ್ಯಾಷನಲ್ ಮೆಡಿಕಲ್ ಜರ್ನಲ್ ಆಫ್ ಇಂಡಿಯಾದ ಮುಖ್ಯ ಸಂಪಾದಕ ಮತ್ತು ಸಂಪಾದಕೀಯದ ಸಹ ಲೇಖಕರಲ್ಲಿ ಒಬ್ಬರಾದ ಪ್ಯೂಶ್ ಸಾಹ್ನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.