ನವದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಂಭವಿಸಿದ್ದು, ಭಾನುವಾರ ಸಂಜೆ ಹೊತ್ತಿಗೆ ಅದು ಚಂಡಮಾರುತವಾಗಿ (ಸೈಕ್ಲೋನ್)ರೂಪುಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಗಂಟೆಗೆ 75 ಕಿ.ಮೀ ವೇಗ ಪಡೆದುಕೊಳ್ಳಲಿರುವ ಚಂಡಮಾರುತವು ಉತ್ತರ ಆಂಧ್ರ ಪ್ರದೇಶ ಮತ್ತು ಒಡಿಶಾದತ್ತ ಚಲಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕಾರ್ ನಿಕೋಬಾರ್ ದ್ವೀಪದ (ನಿಕೋಬಾರ್ ದ್ವೀಪಗಳು) 170 ಕಿ.ಮೀ ಪಶ್ಚಿಮಕ್ಕೆ ಮತ್ತು ಪೋರ್ಟ್ ಬ್ಲೇರ್ನ ನೈರುತ್ಯ ಭಾಗದ 300 ಕಿ.ಮೀ. ದೂರದಲ್ಲಿ ಶನಿವಾರ ಬೆಳಗ್ಗೆ 11.30ರಲ್ಲಿ ವಾಯುಭಾರ ಕುಸಿತ ಸಂಭವಿಸಿದೆ. ಅದು ತೀವ್ರತೆ ಪಡೆದುಕೊಳ್ಳಲಾರಂಭಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ವಿಶೇಷ ಬುಲೆಟಿನ್ನಲ್ಲಿ ತಿಳಿಸಿದೆ.

ವಾಯುಭಾರ ಕುಸಿತವು ಹೀಗೆ ತೀವ್ರತೆ ಪಡೆದುಕೊಂಡು ಚಂಡಮಾರುತವಾಗಿ ರೂಪಾಂತರಗೊಂಡರೆ ಅದನ್ನು ‘ಅಸನಿ’ ಎಂದು ಕರೆಯಲಾಗುತ್ತದೆ. (ಶ್ರೀಲಂಕದ) ಸಿಂಹಳ ಭಾಷೆಯಲ್ಲಿ ‘ಅಸನಿ’ ಎಂದರೆ 'ಕ್ರೋಧ' ಎಂದು ಅರ್ಥ. ಹಾಗೇನಾದರೂ ತೀವ್ರತೆ ಹೆಚ್ಚಾದರೆ, ಇದು ಈ ಋತುವಿನ ಮೊದಲ ಚಂಡಮಾರುತ ಎನಿಸಿಕೊಳ್ಳಲಿದೆ. ಮಾರ್ಚ್ನಲ್ಲಿ ಇದೇ ರೀತಿಯ ವಾತಾವರಣವೊಂದು ರೂಪುಗೊಂಡಿತ್ತಾದರೂ, ತೀವ್ರತೆ ಪಡೆದು ಚಂಡಮಾರುತವಾಗುವಲ್ಲಿ ವಿಫಲವಾಗಿತ್ತು.

ಪ್ರಸ್ತುತ ಹವಾಮಾನ ವ್ಯವಸ್ಥೆಯಲ್ಲಿ ಭಾನುವಾರದಂದು ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಗಳಿವೆ. ಅದು ಮೇ 10 ರವರೆಗೆ ಈಶಾನ್ಯದ ಕಡೆಗೆ ಚಲಿಸಲಿದೆ. ನಂತರ ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿಯನ್ನು ತಲುಪಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
‘ನಂತರ ಇದು ಒಡಿಶಾ ಕರಾವಳಿಯಿಂದ ವಾಯುವ್ಯ ಬಂಗಾಳ ಕೊಲ್ಲಿಯತ್ತ ಹೋಗಲಿದೆ’ ಎಂದು ಬುಲೆಟಿನ್ನಲ್ಲಿ ಹೇಳಲಾಗಿದೆ.

ಶನಿವಾರದಿಂದ ಸಮುದ್ರದಲ್ಲಿನ ಪರಿಸ್ಥಿತಿ ಪ್ರಕ್ಷುಬ್ಧವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶನಿವಾರ ಮತ್ತು ಭಾನುವಾರದಂದು ಅಂಡಮಾನ್ ಸಮುದ್ರ ಮತ್ತು ಆಗ್ನೇಯ ಬಂಗಾಳಕೊಲ್ಲಿಗೆ ತೆರಳದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

ಭಾನುವಾರದವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

‘ಚಂಡಮಾರುತವು ಭಾರತದ ಯಾವ ಭಾಗಕ್ಕೆ ಅಪ್ಪಳಿಸಲಿದೆ ಎಂಬುದರ ಕುರಿತು ನಾವು ಇನ್ನೂ ಯಾವುದೇ ಮುನ್ಸೂಚನೆ ನೀಡಿಲ್ಲ. ಚಂಡಮಾರುತ ಅಪ್ಪಳಿಸುವ ವೇಳೆ ಇರಬಹುದಾದ ಗಾಳಿಯ ವೇಗದ ಬಗ್ಗೆಯೂ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಐಎಂಡಿ ಪ್ರಧಾನ ನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.