ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಿಶ್ವ ಜಲ ದಿನ: ಜೀವಜಲ ಉಳಿಸಲು ಸಕಾಲ

Last Updated 22 ಮಾರ್ಚ್ 2023, 7:12 IST
ಅಕ್ಷರ ಗಾತ್ರ

ಬೆಂಗಳೂರು: ನೀರಿನ ನಿರ್ಣಾಯಕ ಪ್ರಾಮುಖ್ಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್‌ 22ರಂದು ವಿಶ್ವ ಜಲ ದಿನ ಆಚರಿಸಲಾಗುತ್ತದೆ.

ನೀರಿನ ಮಿತ ಬಳಕೆ. ಸಮರ್ಥ ಸರಬರಾಜಿನ ಬಗ್ಗೆ ಶಿಕ್ಷಣವನ್ನು ಹರಡುವ ಸಮಯ ಇದಾಗಿದೆ. ಜಾಗತಿಕ ನೀರಿನ ಸಮಸ್ಯೆಗಳನ್ನು ಅರಿತು, ವಿಶ್ವಾಸಾರ್ಹ ನೀರಿನ ಬಳಕೆ ಆಗಬೇಕಿದೆ ಎಂಬುದು ಜಲದಿನದ ಮುಖ್ಯ ಉದ್ದೇಶ.

ವಿಶ್ವದ ಜನಸಂಖ್ಯೆ 800 ಕೋಟಿ ತಲುಪಿರುವುದು ಈ ಸಮಯದಲ್ಲಿ ನೀರಿಗಾಗಿ ಹಾಹಾಕಾರ ಕೇಳಿಬರುತ್ತಿರುವುದು ಸಾಮಾನ್ಯ ವಿಷಯ. ವಿಶ್ವಸ೦ಸ್ಥೆ ಕೈಗೊಂಡ ಅಧ್ಯಯನದ ಪ್ರಕಾರ, 2100ರಲ್ಲಿ ವಿಶ್ವದ ಜನಸಂಖ್ಯೆ 1,100 ಕೋಟಿ ತಲುಪಲಿದೆ. ಆಗಾ ನೀರಿನ ಬವಣೆ ಹೆಚ್ಚಾಗುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ.

ನೀರಿನ ಅಸಮಾನ ಬಳಕೆಯು ಅಸಮಾನತೆಗಳನ್ನು ಘಾತೀಯವಾಗಿ ಹೆಚ್ಚಿಸುತ್ತದೆ. ಕೋವಿಡ್-19 ಸಾಂಕ್ರಾಮಿಕ ನಮಗೆ ಮನಃಪೂರ್ವಕವಾಗಿ ಸಂರಕ್ಷಿಸು, ಉಳಿಸು ಮತ್ತು ಕಾಪಾಡು, ಇಲ್ಲವಾದರೆ ಮುಂಬರುವ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗು ಎಂಬ ಪಾಠಗಳನ್ನು ಈಗಾಗಲೇ ಕಲಿಸಿದೆ.

ಜಲಕ್ಷಾಮ ಈ ಜಗತ್ತಿನ ಮುಂದೆ ಇರುವ ಬಿಕ್ಕಟ್ಟುಗಳಲ್ಲಿ ಅತ್ಯಂತ ಗಂಭೀರವಾದುದು. ನಮ್ಮ ದೇಶದಲ್ಲಿ ಕೂಡ ಈ ಸಮಸ್ಯೆ ತೀವ್ರವಾಗಿದೆ. ಒಟ್ಟು ಜನಸಂಖ್ಯೆಯ ಶೇ 50ರಷ್ಟು ಜನರಿಗೆ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ ಎಂದು ವರದಿಗಳು ಹೇಳುತ್ತಿವೆ. ಹಾಗಾಗಿಯೇ ನೀರು ಸಂರಕ್ಷಣೆ ಜರೂರಾಗಿದೆ.

ಆದ್ದರಿಂದ ಜನರು ನೀರನ್ನು ಮಿತವಾಗಿ ಬಳಕೆ ಮಾಡಿ, ಮುಂದಿನ ಪೀಳಿಗೆಗೆ ಸಂರಕ್ಷಣೆ ಮಾಡುವ ಅಗತ್ಯವಿದೆ.

ವಿಶ್ವ ಜಲ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪರಿಸರ ಪ್ರೇಮಿಗಳು ಹಾಗೂ ಸೆಲೆಬ್ರಿಟಿಗಳು ಜನರಲ್ಲಿ ನೀರನ್ನು ಸಂರಕ್ಷಣೆ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT