ದೇಶದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ವಿಪರೀತ ಹೆಚ್ಚಳವಾಗಿವೆ. ಈ ಸೈಬರ್ ಕಳ್ಳರದ್ದು ಅಂತರರಾಜ್ಯ ಜಾಲ. ದೇಶದ ಕೆಲವು ಜಿಲ್ಲೆಗಳು ಡಿಜಿಟಲ್ ವಂಚಕರಿಂದ ಕುಖ್ಯಾತಿ ಗಳಿಸಿವೆ. ಕುಗ್ರಾಮಗಳ ಅರೆಶಿಕ್ಷಿತರು, ಅಶಿಕ್ಷಿತರು ದೂರದ ನಗರ/ಪಟ್ಟಣಗಳಲ್ಲಿರುವ ಜನರ ಖಾತೆಗಳಿಂದ ಕೋಟ್ಯಂತರ ರೂಪಾಯಿಗಳನ್ನು ದೋಚುತ್ತಿದ್ದಾರೆ. ಚೀನಾ, ಮ್ಯಾನ್ಮಾರ್‌ನಂಥ ರಾಷ್ಟ್ರಗಳ ವಂಚಕರ ಜಾಲಗಳೂ ಭಾರತದಲ್ಲಿ ಡಿಜಿಟಲ್ ವಂಚನೆಯಲ್ಲಿ ತೊಡಗಿವೆ. ಭಾರತೀಯರನ್ನು ಉದ್ಯೋಗದ ಆಮಿಷ ಒಡ್ಡಿ ಕರೆಸಿಕೊಂಡು ಅವರನ್ನು ಸೈಬರ್ ಗುಲಾಮರನ್ನಾಗಿ ಮಾಡಿಕೊಂಡು ಅಕ್ರಮಗಳಿಗೆ ಬಳಸುವ ಜಾಲಗಳು ಆಗ್ನೇಯ ಏಷ್ಯಾದಲ್ಲಿ ಸಕ್ರಿಯವಾಗಿವೆ