ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT
 ಆಳ ಅಗಲ: ವೈವಿಧ್ಯಮಯ ಬೆಳಕಿನ ಹಬ್ಬ
ಆಳ ಅಗಲ: ವೈವಿಧ್ಯಮಯ ಬೆಳಕಿನ ಹಬ್ಬ
ಫಾಲೋ ಮಾಡಿ
Published 20 ಅಕ್ಟೋಬರ್ 2025, 23:16 IST
Last Updated 20 ಅಕ್ಟೋಬರ್ 2025, 23:16 IST
Comments
ದೀಪಾವಳಿಯನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಭಿನ್ನವಾಗಿ ಆಚರಿಸುವ ಸಂಪ್ರದಾಯವಿದೆ. ಕೆಲವು ಸಮುದಾಯಗಳು ವಿಶಿಷ್ಟವಾಗಿ ಹಬ್ಬವನ್ನು ಆಚರಿಸುತ್ತವೆ. ವಿವಿಧ ರಾಜ್ಯಗಳಲ್ಲೂ ಭಿನ್ನ ರೀತಿಯ ಸಂಪ್ರದಾಯ ಅನುಸರಿಸುತ್ತಿರುವ ನಿದರ್ಶನಗಳಿವೆ. ಕೆಲವು ದೇಶಗಳಲ್ಲಿ ಬೆಳಕಿನ ಹಬ್ಬಕ್ಕೆ ಭಾರತದಲ್ಲಿ ಇರುವಷ್ಟೇ ಮಹತ್ವ ಇದೆ. ಶತಮಾನಗಳಿಂದ ರೂಢಿಯಲ್ಲಿರುವ ಕೆಲವು ವಿಶಿಷ್ಟ ಆಚರಣೆಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ
ಎಮ್ಮೆಗಳಿಗೆ ಮನ್ನಣೆ 
ತುಳುನಾಡಿನ ‘ತುಡರ ಪರ್ಬ’
ಅಂಟಿಗೆ–ಪಂಟಿಗೆ 
ದೀವಟಿಗೆ ಉತ್ಸವ
ಲಂಬಾಣಿ ಸಮುದಾಯದ ‘ದವಾಳಿ’
ವಿಜಯನಗರ ಜಿಲ್ಲೆಯ ಲಂಬಾಣಿ ತಾಂಡಾಗಳಲ್ಲಿ ‘ದವಾಳಿ’ ಹೆಸರಿನಲ್ಲಿ ದೀಪಾವಳಿಯನ್ನು ಸುಗ್ಗಿಯ ಹಬ್ಬವಾಗಿ ಆಚರಿಸಲಾಗುತ್ತದೆ. ತಾಂಡಾದ ಎಲ್ಲ ಮನೆತನದ ಯುವತಿಯರು ಅಮಾವಾಸ್ಯೆ ದಿನ ರಾತ್ರಿ ಮನೆ ಮನೆಗೆ ತೆರಳಿ ಹರಳೆಣ್ಣೆಯ ದೀಪದ ಆರತಿ ಬೆಳಗುತ್ತಾ, ‘ವರ್ಷೆದಾಡ್ ಕೋಡ್ ಧವಾಳಿ ಬಾಯ್ತೋನೊ ಮೇರಾ, ಬಿಯಾತೋನೊ ಮೇರಾ ’ (ಕತ್ತಲೆ ತೊರೆದು ಬೆಳಕು ಆವರಿಸಲಿ, ಎಲ್ಲರಿಗೂ ಒಳ್ಳೆಯದಾಗಲಿ) ಎಂದು ಶುಭ ಕೋರುತ್ತಾರೆ. ಮರು ದಿನ ಎಲ್ಲ ಮಹಿಳೆಯರು ಕಾಡಿಗೆ ತೆರಳಿ ವಲ್ಲೇಣಾರ ಫೂಲ್ (ವಲ್ಲೇಣ ಹೂವು), ಗರಿಕೆ ಆಯ್ದು ಬುಟ್ಟಿಯಲ್ಲಿ ತರುತ್ತಾರೆ. ಕೆಲವರು ಬೆಳಗಾಗುತ್ತಲೇ ಮನೆಯ ಹಿರಿಯರ ಹಬ್ಬವನ್ನು ಆಚರಿಸಲು ಸಾಮೂಹಿಕವಾಗಿ ನದಿಯ ದಂಡೆಗೆ ತೆರಳುತ್ತಾರೆ. ಅಲ್ಲಿ ವಿವಾಹ ನಿಶ್ಚಿತಾರ್ಥವಾಗಿರುವ ಎಲ್ಲ ಯುವತಿಯರು ಪರಸ್ಪರ ಅಪ್ಪಿಕೊಂಡು ಅಳುತ್ತಾರೆ. ಮುಂದಿನ ಹಬ್ಬಕ್ಕೆ ನಾವಿರುವುದಿಲ್ಲ ಎಂದು ತಮ್ಮ ಸ್ನೇಹವನ್ನು ಮೆಲುಕು ಹಾಕುತ್ತಾರೆ.
ಮಲೆನಾಡಲ್ಲಿ ಹೋರಿ ಹಬ್ಬ
ಸಗಣಿ ಕಾಳಗ
ಉಡುಪಿಯಲ್ಲಿ ಮುಳ್ಳಮುಟ್ಟೆ
ಉಡುಪಿ ಜಿಲ್ಲೆಯ ಕಾಪು, ಪಡುಬಿದ್ರಿ ಮೊದಲಾದೆಡೆ ಮುಳ್ಳಮುಟ್ಟೆ ಎಂಬ ವಿಶಿಷ್ಟವಾದ ಆಚರಣೆ ನಡೆಯುತ್ತದೆ. ಊರಿನ ಮುಳ್ಳುಕಂಟಿ, ಕಸ ಮೊದಲಾದವುಗಳನ್ನು ಕಡಿದು ಎತ್ತರದ ಪ್ರದೇಶದಲ್ಲಿ ರಾಶಿ ಹಾಕಲಾಗುತ್ತದೆ. ದೀಪಾವಳಿಯಂದು ಮುಂಜಾನೆ ಡೋಲು, ವಾದ್ಯಗಳೊಂದಿಗೆ ಊರಿನ ಜನರು ಸಾಮೂಹಿಕವಾಗಿ ಈ ಮುಳ್ಳಮುಟ್ಟೆಗೆ ಬೆಂಕಿ ಹಚ್ಚುತ್ತಾರೆ. ಮುಳ್ಳಮುಟ್ಟೆಗೆ ಬೆಂಕಿ ನೀಡುವುದಕ್ಕೂ ಮೊದಲು ರಾತ್ರಿ ಜಾಗರಣೆ ನಡೆಸಬೇಕಾದ ಕಾರಣ ವಿವಿಧ ಮನೋರಂಜನೆ ಕಾರ್ಯಕ್ರಮಗಳನ್ನೂ ಊರಿನ ಜನರಿಗಾಗಿ ಹಮ್ಮಿಕೊಳ್ಳಲಾಗುತ್ತದೆ. ಕೆಲವೆಡೆ ಬಂಟ ದೈವದ ಕೋಲವೂ ನಡೆಯುತ್ತದೆ.
ಕಿರು ದೀಪಾವಳಿ
ಬುಧವಾರ ಬಂದರಷ್ಟೆ ಆಚರಣೆ
ಹೋರಿ ಬೆದರಿಸುವ ಸ್ಪರ್ಧೆ
ಮುಂದಿನ ಶುಕ್ರವಾರ ಹಬ್ಬ
ಬಂಗಾಳದಲ್ಲಿ ಕಾಳಿ ಆರಾಧನೆ
ಒಡಿಶಾದಲ್ಲಿ ಪೂರ್ವಜರ ಸ್ಮರಣೆ
ಗೋವಾದಲ್ಲಿ ನರಕಾಸುರನ ವಧೆ
ವಿದೇಶಗಳಲ್ಲೂ ಸಂಭ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT