ಐಪಿಎಲ್ ಕ್ರಿಕೆಟ್ ಟೂರ್ನಿಯ 18ನೇ ಆವೃತ್ತಿ ಇನ್ನೆರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಈ ಟೂರ್ನಿಯ ಪಂದ್ಯಗಳನ್ನು ಕೋಟಿ ಕೋಟಿ ಅಭಿಮಾನಿಗಳು ಟಿ.ವಿ ಮತ್ತು ಮೊಬೈಲ್‌ಗಳ ಮೂಲಕ ಕಣ್ತುಂಬಿಕೊಂಡಿದ್ದಾರೆ. ಪ್ರತಿಯೊಂದು ಪಂದ್ಯದ ಎಲ್ಲ ಆಯಾಮಗಳ ನೇರಪ್ರಸಾರವನ್ನು ಆನಂದಿಸಿದ್ದಾರೆ. ತಮ್ಮ ನೆಚ್ಚಿನ ಕ್ರಿಕೆಟಿಗರ ಆಟದ ಸೊಬಗನ್ನು ಆಸ್ವಾದಿಸಿದ್ದಾರೆ. ಆದರೆ ಮೈದಾನದಲ್ಲಿ ನಡೆಯುವ ಪಂದ್ಯವನ್ನು ಟಿ.ವಿ ಅಥವಾ ಮೊಬೈಲ್ ಪರದೆಗೆ ತರುವ ಪ್ರಕ್ರಿಯೆ ಮಾತ್ರ ಅನೂಹ್ಯವಾದದ್ದು. ಮುಂಬೈನಲ್ಲಿರುವ ಜಿಯೊಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೊಗಳಲ್ಲಿ ಒಂದು ಸುತ್ತು ಹಾಕಿ ಬಂದಾಗ ವಿಭಿನ್ನ ಲೋಕವೇ ತೆರೆದುಕೊಂಡಿತು. ಆಹ್ವಾನದ ಮೇರೆಗೆ ಈ ಸ್ಟುಡಿಯೋಗಳಿಗೆ ‘ಪ್ರಜಾವಾಣಿ’ ಭೇಟಿ ನೀಡಿದಾಗ ಕಂಡ ನೋಟ ಇಲ್ಲಿದೆ