ಓವರ್ ದ ಟಾಪ್ (ಒಟಿಟಿ) ವೇದಿಕೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ, ಅಸಭ್ಯ ಮತ್ತು ಅಶ್ಲೀಲ ವಿಡಿಯೊಗಳು ಮತ್ತು ವಿಚಾರಗಳು ಪ್ರಸಾರವಾಗುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಈ ಸಂಬಂಧ ಶಾಸಕಾಂಗ ಮತ್ತು ಕಾರ್ಯಾಂಗ ಕಾರ್ಯಪ್ರವೃತ್ತವಾಗಬೇಕು ಎಂದಿದೆ. ಭಾರತದಲ್ಲಿ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮಕ್ಕಳು ಮತ್ತು ಮಹಿಳೆಯರ ಅಶ್ಲೀಲ ಚಿತ್ರ, ವಿಡಿಯೊ ಮತ್ತು ವಿಚಾರಗಳು ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ. ಆದರೆ, ಅವು ಹಂಚಿಕೆಯಾಗುತ್ತಿರುವ ವೇಗಕ್ಕೆ ತಕ್ಕಂತೆ ಅವುಗಳನ್ನು ನಿಯಂತ್ರಿಸುವ ಕೆಲಸ ಆಗುತ್ತಿಲ್ಲ. ಇತ್ತೀಚೆಗೆ ಕೇಂದ್ರ ಸರ್ಕಾರವು ಒಟಿಟಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಮತ್ತು ವಿಕೃತ ವಿಡಿಯೊಗಳ ಹಂಚಿಕೆ ತಡೆಗೆ ಸಂಬಂಧಿಸಿದಂತೆ ಕೆಲವು ನಿರ್ದೇಶನಗಳನ್ನು ನೀಡಿದೆ. ಆದರೆ, ಈ ದಿಸೆಯಲ್ಲಿ ಆಗಬೇಕಾದ ಕೆಲಸ ಇನ್ನೂ ಬಹಳಷ್ಟಿದೆ

ಭಾರತದಲ್ಲಿ ಇಂಟರ್ನೆಟ್ ಬಳಕೆ ವ್ಯಾಪಕವಾಗಿದೆ. ಅದಕ್ಕೆ ಸಂವಾದಿಯಾಗಿ ಮನರಂಜನಾ ಉದ್ಯಮ ಹೊಸ ಆಯಾಮ ಪಡೆದುಕೊಂಡಿದ್ದು, ಒಟಿಟಿ ವೇದಿಕೆಗಳು (50ಕ್ಕೂ ಹೆಚ್ಚು ಇವೆ) ಜನಪ್ರಿಯವಾಗಿವೆ. ಸಿನಿಮಾಗಳನ್ನು ಪ್ರದರ್ಶನ (ಸ್ಟ್ರೀಮಿಂಗ್) ಮಾಡುವುದರ ಜತೆಗೆ ಈ ವೇದಿಕೆಗಳಿಗಾಗಿಯೇ ವೆಬ್ ಸರಣಿಗಳು ಮತ್ತಿತರ ವಿಡಿಯೊಗಳನ್ನು ರೂಪಿಸಿ, ಪ್ರಸಾರ ಮಾಡಲಾಗುತ್ತಿದೆ. ಹೀಗೆ ಪ್ರಸಾರವಾಗುತ್ತಿರುವ ಸಿನಿಮಾ, ವೆಬ್ ಸರಣಿಗಳಲ್ಲಿ ಅಶ್ಲೀಲತೆ (ಪೋರ್ನೋಗ್ರಫಿ) ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಡಿಜಿಟಲ್ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಸ್ಮಾರ್ಟ್ ಟಿವಿ, ಕಂಪ್ಯೂಟರ್, ಸ್ಮಾರ್ಟ್ ಫೋನ್ಗಳಲ್ಲಿ ಸಿನಿಮಾ, ವೆಬ್ ಸರಣಿ, ವೆಬ್ಸೈಟ್ಗಳನ್ನು ವೀಕ್ಷಿಸಬಹುದು. ಇವು ವ್ಯಕ್ತಿಗತ ಮಾಧ್ಯಮಗಳು ಆಗಿರುವುದರಿಂದ ಏಕಾಂತದಲ್ಲಿ ನೋಡಲು ಅವಕಾಶವಿದ್ದು, ಮಾಧ್ಯಮ ಬಳಕೆಯ ಚಿತ್ರಣವನ್ನೇ ಬದಲಾಯಿಸಿವೆ. ವಿವಿಧ ರೀತಿಯ ವಸ್ತು, ವಿಚಾರ, ವಿಡಿಯೊಗಳನ್ನು ಇವು ನೇರವಾಗಿ ಬಳಕೆದಾರರ ಮನೆ, ಮನಗಳಿಗೆ ತಲುಪಿಸುತ್ತಿವೆ.

ಸೆನ್ಸಾರ್ರಹಿತ ಒಟಿಟಿ:

ಸಿನಿಮಾಗಳಿಗೆ ಹೋಲಿಸಿದರೆ, ಒಟಿಟಿಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೊಗಳಲ್ಲಿ ಹೆಚ್ಚು ಅಶ್ಲೀಲತೆ ಇದೆ ಎನ್ನುವ ದೂರು ಇದೆ. ಸಿನಿಮಾಗೆ ಸೆನ್ಸಾರ್ಶಿಪ್ ವ್ಯವಸ್ಥೆ ಇದೆ. ಆಯಾ ಸಿನಿಮಾದ ವಸ್ತು, ಗುಣಮಟ್ಟಕ್ಕೆ ತಕ್ಕಂತೆ ‘ಯು’ (ಎಲ್ಲರೂ ನೋಡಬಹುದಾದ ಚಿತ್ರ), ‘ಎ’ (ವಯಸ್ಕರಿಗೆ ಮಾತ್ರ), ‘ಯು/ಎ’ (ಮಕ್ಕಳು ಹಿರಿಯರ ಮಾರ್ಗದರ್ಶನದಲ್ಲಿ ನೋಡಬೇಕಾದ ಚಿತ್ರ) ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಯಾವ ವಸ್ತುವಿನ ಸಿನಿಮಾ ಯಾವ ವಯಸ್ಸಿನವರಿಗೆ ಸೂಕ್ತ ಎನ್ನುವುದನ್ನು ಆ ಪ್ರಮಾಣಪತ್ರಗಳ ಆಧಾರದಲ್ಲಿ ತಿಳಿಯಬಹುದಾಗಿದೆ. ಸಿನಿಮಾವನ್ನು ಮನರಂಜನಾ ವಾಹಿನಿಗಳಲ್ಲಿ ಪ್ರಸಾರ ಮಾಡುವಾಗ ಅವುಗಳಲ್ಲಿನ ಅಶ್ಲೀಲ, ಹಿಂಸಾಚಾರದ ದೃಶ್ಯಗಳನ್ನು ಕತ್ತರಿಸಿ, ನಂತರ ಪ್ರಸಾರ ಮಾಡಲಾಗುತ್ತದೆ.

ಆದರೆ, ಒಟಿಟಿಗಳಲ್ಲಿ ಪ್ರಸಾರವಾಗುವ ಸಿನಿಮಾ, ವೆಬ್ಸರಣಿ ಇತ್ಯಾದಿಗಳಿಗೆ ಯಾವುದೇ ರೀತಿಯ ಸೆನ್ಸಾರ್ಶಿಪ್ ವ್ಯವಸ್ಥೆಯಾಗಲಿ, ನಿರ್ಬಂಧವಾಗಲಿ ಇಲ್ಲ. ಕುಟುಂಬ ಒಟ್ಟಿಗೆ ಕೂತು ನೋಡಲು ಮುಜುಗರ ಪಡಬೇಕಾದಂಥ, ಮಕ್ಕಳು ಮತ್ತು ಯುವಜನರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂಥ ವಸ್ತು/ದೃಶ್ಯಗಳು ಒಟಿಟಿ ವೇದಿಕೆಗಳಲ್ಲಿ ನೇರವಾಗಿ ಪ್ರಸಾರವಾಗುತ್ತಿವೆ. ಇದರಿಂದ ಮಕ್ಕಳು ತಮಗೆ ಸೂಕ್ತವಲ್ಲದ ವಿಚಾರ/ದೃಶ್ಯಗಳನ್ನು ಯಾವುದೇ ನಿಯಂತ್ರಣವಿಲ್ಲದೆ ನೋಡುತ್ತಿದ್ದಾರೆ. ಅಂಥ ಸಿನಿಮಾ, ವೆಬ್ಸರಣಿ ರೂಪಿಸುವ ನಿರ್ಮಾಪಕರು, ನಿರ್ದೇಶಕರ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ (ಸೆಕ್ಷನ್ 19 (2)) ಹಕ್ಕನ್ನು ಚಲಾಯಿಸುವ ಜತೆಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ನೈತಿಕ ಮೌಲ್ಯಗಳನ್ನೂ ಪರಿಗಣಿಸಬೇಕು; ಸ್ವಯಂ ನಿಯಂತ್ರಣ ಪಾಲಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ಅಶ್ಲೀಲ ವೆಬ್ಸೈಟ್ಗಳ ಭರಾಟೆ:

ಸಾಮಾಜಿಕ ಜಾಲತಾಣ, ವೆಬ್ಸೈಟ್ಗಳಲ್ಲಿಯೂ ನೀಲಿ ಚಿತ್ರಗಳು, ಆಕ್ಷೇಪಾರ್ಹ ವಿಡಿಯೊಗಳನ್ನು ಎಗ್ಗಿಲ್ಲದೇ ಪ್ರಸಾರ ಮಾಡಲಾಗುತ್ತಿದೆ. ಅಶ್ಲೀಲ ವಿಡಿಯೊಗಳ ಪ್ರಸಾರಕ್ಕಾಗಿಯೇ ಅನೇಕ ವೆಬ್ಸೈಟ್ಗಳು ಹುಟ್ಟಿಕೊಂಡಿವೆ. ನೀಲಿ ಚಿತ್ರಗಳ ನಿರ್ಮಾಣ, ಪ್ರದರ್ಶನ, ಹಂಚಿಕೆ ಲಕ್ಷಾಂತರ ರೂಪಾಯಿಯ ವ್ಯವಹಾರವಾಗಿದೆ. ಪೋರ್ನೋಗ್ರಫಿ ಅಪರಾಧವಲ್ಲದಿದ್ದರೂ, ಇವು ಮಕ್ಕಳು ಸೇರಿದಂತೆ ಯುವಜನರ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿದ್ದು, ಸಮಾಜದಲ್ಲಿ ಹಲವು ರೀತಿಯ ಅಪರಾಧಗಳು, ವಿಕೃತಿಗಳಿಗೆ ಕಾರಣವಾಗಿದೆ ಎನ್ನುವ ದೂರುಗಳು ವ್ಯಾಪಕವಾಗಿವೆ. ಇದರ ಜತೆಗೆ, ಮಕ್ಕಳನ್ನು ಬಳಸಿಕೊಂಡು ಪೋರ್ನ್ ವಿಡಿಯೊಗಳನ್ನು ಚಿತ್ರೀಕರಿಸುವುದು, ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ಹಂಚಿಕೊಳ್ಳುವುದು ನಡೆಯುತ್ತಿದ್ದು, ಇದೊಂದು ಗಂಭೀರ ಸಮಸ್ಯೆಯಾಗಿದೆ.

ದೇಶದ ಜನ, ಸಾಂವಿಧಾನಿಕ ಸಂಸ್ಥೆಗಳು ಮತ್ತು ಸಂಸದರಿಂದ ವ್ಯಾಪಕ ದೂರುಗಳು ಬಂದಿದ್ದರಿಂದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಅಶ್ಲೀಲತೆಗೆ ಸಂಬಂಧಿಸಿದಂತೆ 2025ರ ಫೆ.25ರಂದು ಒಟಿಟಿ ವೇದಿಕೆಗಳಿಗೆ ಎಚ್ಚರಿಕೆ ನೀಡಿತ್ತು. ನಿಷೇಧಿತವಾದ ಯಾವುದೇ ವಿಷಯದ ಬಗ್ಗೆ ಪ್ರಸಾರ ಮಾಡಬಾರದೆಂದು ಸೂಚಿಸಿತ್ತು. ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ಸಂಸ್ಥೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು– 2021ರ ಅನ್ವಯ ಒಟಿಟಿ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗುವ ವಸ್ತುವನ್ನು ವಯಸ್ಸು ಆಧರಿತವಾಗಿ ವರ್ಗೀಕರಣ ಮಾಡುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಹೇಳಿತ್ತು. ನಾಯಕ ಪಾತ್ರ ಮತ್ತು ಇತರ ಪಾತ್ರಗಳ ಮೂಲಕ ಮಾದಕ ವಸ್ತುಗಳು ಬಳಕೆಯನ್ನು ಉತ್ತೇಜಿಸುವ, ವೈಭವೀಕರಿಸುವ ಬಗ್ಗೆಯೂ ಎಚ್ಚರಿಕೆ ನೀಡಿತ್ತು.

ಮೂರು ಹಂತದ ವ್ಯವಸ್ಥೆ:

ಒಟಿಟಿ ವೇದಿಕೆಗಳು ಗ್ರಾಹಕರ ದೂರು ಪರಿಹಾರ ವ್ಯವಸ್ಥೆ ರೂಪಿಸಬೇಕು. ಅದು ಮೂರು ಹಂತದ ವ್ಯವಸ್ಥೆಯಾಗಿದ್ದು, ಮೊದಲು ಆಕ್ಷೇಪಾರ್ಹ ಎನ್ನಬಹುದಾದ ವಿಡಿಯೊ/ವಿಷಯಗಳ ಬಗ್ಗೆ ಗ್ರಾಹಕರು ಒಟಿಟಿ ವೇದಿಕೆಯನ್ನು ಸಂಪರ್ಕಿಸಬಹುದು. ನಂತರ ಅದು ಸ್ವಯಂ ನಿಯಂತ್ರಣಾ ವ್ಯವಸ್ಥೆ, ಅದರ ನಂತರ ಕೇಂದ್ರ ಸರ್ಕಾರದ ಅಂತರ್ ಇಲಾಖಾ ಸಮಿತಿಯಲ್ಲಿ ಇತ್ಯರ್ಥವಾಗಬೇಕು ಎಂದು ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಹೇಳಲಾಗಿದೆ. ಆದರೆ, ಹೆಚ್ಚಿನ ವೇದಿಕೆಗಳು ಕಾನೂನು ಪಾಲನೆ ಮಾಡುತ್ತಿಲ್ಲ ಎನ್ನುವ ಆರೋಪಗಳಿವೆ. ಈ ದಿಸೆಯಲ್ಲಿ ಮತ್ತಷ್ಟು ನಿಯಮಗಳನ್ನು ತರುವ ಸಲುವಾಗಿ ಕೇಂದ್ರ ಸರ್ಕಾರವು ಪ್ರಸಾರ ಸೇವೆಗಳು (ನಿಯಂತ್ರಣ) ಮಸೂದೆ ರೂಪಿಸುವ ಪ್ರಯತ್ನದಲ್ಲಿದೆ.

ಕಾನೂನು ಏನು ಹೇಳುತ್ತದೆ?

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 294: ಡಿಜಿಟಲ್ ರೂಪದಲ್ಲಿರುವ ಅಶ್ಲೀಲ ಚಿತ್ರ/ವಿಡಿಯೊದ (ಪುಸ್ತಕ, ಭಿತ್ತಿಪತ್ರಗಳೂ ಸೇರಿ) ಹಂಚಿಕೆ, ಮಾರಾಟ ಮತ್ತು ಸಾರ್ವಜನಿಕವಾಗಿ ಪ್ರದರ್ಶನ ಅಪರಾಧ ಎಂದು ಇದು ಹೇಳುತ್ತದೆ. ಇಂತಹ ಕೃತ್ಯ ಎಸಗಿದವರ ವಿರುದ್ಧ ದಂಡ ವಿಧಿಸುವುದಕ್ಕೆ ಅವಕಾಶ ಇದೆ

ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ–2020ರ ಸೆಕ್ಷನ್ 67: ಇದರ ಪ್ರಕಾರ, ಕಾಮಪ್ರಚೋದಕ ಮತ್ತು ಲೈಂಗಿಕ ಆಸಕ್ತಿಯ ವಿಷಯಗಳನ್ನೂ ಸೇರಿದಂತೆ ಯಾವುದೇ ಅಶ್ಲೀಲ ವಿಷಯಗಳನ್ನು (ವಿಡಿಯೊ, ಚಿತ್ರ ಇತ್ಯಾದಿ) ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಕಟಿಸುವುದು ಅಥವಾ ಹಂಚಿಕೆ ಮಾಡುವುದು ಅಥವಾ ಅದಕ್ಕೆ ಕಾರಣವಾಗುವುದು ಕ್ರಿಮಿನಲ್ ಅಪರಾಧ. ಮೊದಲ ಬಾರಿ ಆರೋಪ ಸಾಬೀತಾದರೆ ಗರಿಷ್ಠ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸುವುದಕ್ಕೆ ಅವಕಾಶ ಇದೆ. ಒಂದು ವೇಳೆ ಎರಡನೇ ಬಾರಿ ಅಥವಾ ನಂತರವೂ ಪುನರಾವರ್ತನೆಯಾದರೆ ಗರಿಷ್ಠ 10 ವರ್ಷಗಳವರೆಗೆ ಮತ್ತು ₹2 ಲಕ್ಷದವರೆಗೂ ದಂಡ ವಿಧಿಸುವುದಕ್ಕೆ ಈ ಸೆಕ್ಷನ್ ಅವಕಾಶ ನೀಡುತ್ತದೆ

ಇದೇ ಕಾಯ್ದೆಯ ಸೆಕ್ಷನ್ 67ಎಯು ಲೈಂಗಿಕ ಚಟುವಟಿಕೆ ಅಥವಾ ವರ್ತನೆಯನ್ನು ಹೊಂದಿರುವ ವಿಷಯ/ವಸ್ತುಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಕಟಿಸುವುದು, ಹಂಚುವುದು ಅಥವಾ ಪ್ರಕಟ/ಹಂಚಿಕೆಗೆ ಕಾರಣವಾಗುವುದನ್ನು ನಿಷೇಧಿಸುತ್ತದೆ.

ಸೆಕ್ಷನ್ 67ಬಿಯು ಮಕ್ಕಳನ್ನೊಳಗೊಂಡ ಅಶ್ಲೀಲ ಚಿತ್ರ/ವಿಡಿಯೊ ಅಥವಾ ಇನ್ನಿತರ ವಿಷಯಗಳನ್ನು ಪ್ರಕಟಿಸುವುದು, ಹಂಚಿಕೆ ಮಾಡುವುದನ್ನು ಕ್ರಿಮಿನಲ್ ಅಪರಾಧ ಎಂದು ಹೇಳುತ್ತದೆ

ಮಹಿಳೆಯರ ಅಸಭ್ಯ ಪ್ರದರ್ಶನ (ನಿಷೇಧ) ಕಾಯ್ದೆ–1986: ಜಾಹೀರಾತು ಅಥವಾ ಪ್ರಕರಣೆಗಳು, ಲೇಖನಗಳು, ಕಲಾಕೃತಿಗಳು, ಚಿತ್ರಗಳಲ್ಲಿ ಅಥವಾ ಬೇರೆ ಯಾವುದೇ ರೂಪದಲ್ಲಿ ಮಹಿಳೆಯರನ್ನು ಅಸಭ್ಯವಾಗಿ ತೋರಿಸುವುದನ್ನು ಈ ಕಾನೂನು ನಿಷೇಧಿಸುತ್ತದೆ

ಪೋಕ್ಸೊ ಕಾಯ್ದೆ–2012: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯು ಲೈಂಗಿಕ ಹಲ್ಲೆ, ಲೈಂಗಿಕ ಕಿರುಕುಳಗಳಿಂದ ಮಾತ್ರವಲ್ಲದೆ, ಮಕ್ಕಳನ್ನು ಅಶ್ಲೀಲತೆಯ ಕೃತ್ಯಗಳಿಗೆ ಬಳಸುವುದರಿಂದಲೂ ಮಕ್ಕಳಿಗೆ ರಕ್ಷಣೆ ನೀಡುತ್ತದೆ.

ಕಾಯ್ದೆಯ ಸೆಕ್ಷನ್ 13 ಮತ್ತು 14 ಪ್ರಕಾರ, ಅಶ್ಲೀಲತೆಯ ವಿಡಿಯೊ, ಚಿತ್ರ ಹಾಗೂ ಇನ್ನಿತರ ಉದ್ದೇಶಗಳಿಗೆ ಮಕ್ಕಳನ್ನು ಬಳಸಿದರೆ ಐದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಅಪರಾಧ ಪುನರಾವರ್ತನೆಯಾದರೆ ಗರಿಷ್ಠ ಏಳು ವರ್ಷದವರೆಗೆ ಕಾರಾಗೃಹ ಶಿಕ್ಷೆ ಮತ್ತು ದಂಡವನ್ನು ವಿಧಿಸುವುದಕ್ಕೆ ಅವಕಾಶ ಇದೆ

ಇದೇ ಕಾಯ್ದೆಯ ಸೆಕ್ಷನ್ 15 (1, 2, 3 ಉಪ ಸೆಕ್ಷನ್ಗಳೂ ಇವೆ) ಮಕ್ಕಳನ್ನೊಳಗೊಂಡ ಅಶ್ಲೀಲ ಚಿತ್ರ, ವಿಡಿಯೊ, ಇತರ ವಿಷಯಗಳನ್ನು ಸಂಗ್ರಹಿಸುವುದೂ ಅಪರಾಧ ಎಂದು ಹೇಳುತ್ತದೆ. ಒಂದು ವೇಳೆ ಇಂತಹ ಚಿತ್ರ ವಿಡಿಯೊ ಅಥವಾ ಇತರೆ ವಸ್ತು/ವಿಷಯಗಳನ್ನು ಸಂಗ್ರಹಿಸಿಟ್ಟಿದ್ದರೆ ಮೊದಲ ಬಾರಿ ಕನಿಷ್ಠ 3 ವರ್ಷದಿಂದ ಗರಿಷ್ಠ ಐದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸುವುದಕ್ಕೆ ಅವಕಾಶ ನೀಡುತ್ತದೆ. ಅಪರಾಧ ಪುನರಾವರ್ತನೆಯಾದರೆ ಕನಿಷ್ಠ ಐದು ವರ್ಷಗಳಿಂದ ಗರಿಷ್ಠ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು

ನಿಯಮ ಹೇಳುವುದೇನು?

‘ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ಸಂಸ್ಥೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು– 2021’, ಬಳಕೆದಾರರಿಗೆ ಮುಕ್ತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಮತ್ತು ಉತ್ತರದಾಯಿತ್ವದ ಇಂಟರ್ನೆಟ್ ಸೌಲಭ್ಯವನ್ನು ಖಾತರಿಪಡಿಸುವ ಉದ್ದೇಶ ಹೊಂದಿವೆ. ಇವುಗಳ ಅಡಿಯಲ್ಲಿ, ಸಾಮಾಜಿಕ ಜಾಲತಾಣಗಳು ಸೇರಿದಂತೆ ಡಿಜಿಟಲ್ ಸಂಸ್ಥೆಗಳು ಕೆಲವು ಮಾರ್ಗಸೂಚಿಗಳನ್ನು ಪಾಲಿಸಲೇಬೇಕು.

ಅತ್ಯಾಚಾರ, ಲೈಂಗಿಕ ಪ್ರಚೋದನೆ ಮಾಡುವಂತಹ ವಿಷಯ/ವಸ್ತುಗಳು ಅಥವಾ ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವ ವಿಷಯಗಳ ಬಗೆಗಿನ ಅಪರಾಧಗಳ ಪತ್ತೆ, ತಡೆ, ತನಿಖೆ, ವಿಚಾರಣೆ ಅಥವಾ ಶಿಕ್ಷೆಗೆ ಒಳಪಡಿಸುವುದಕ್ಕಾಗಿ ಆ ವಿಷಯಗಳನ್ನು ಮೊದಲು ಅಪ್ಲೋಡ್/ ಹಂಚಿಕೆ ಮಾಡಿದವರನ್ನು ಗುರುತಿಸುವುದಕ್ಕೆ ಸಾಮಾಜಿಕ ಮಾಧ್ಯಮ ಸಂಸ್ಥೆ ನೆರವಾಗಬೇಕು

ಯಾವುದೇ ವ್ಯಕ್ತಿಯ ಖಾಸಗಿ ಅಂಗಗಳನ್ನು ಪ್ರದರ್ಶಿಸುವ, ಪೂರ್ತಿ ನಗ್ನ ಅಥವಾ ಅರೆನಗ್ನ ಸ್ಥಿತಿಯಲ್ಲಿರುವ ಅಥವಾ ಯಾವುದೇ ಲೈಂಗಿಕ ಚಟುವಟಿಕೆ ಅಥವಾ ನಡವಳಿಕೆಯನ್ನು ತೋರಿಸುವಂತಹ ವಸ್ತು/ವಿಷಯಗಳನ್ನು 24 ಗಂಟೆಗಳ ಒಳಗಾಗಿ ಆನ್ಲೈನ್ನಿಂದ ತೆಗೆಯಬೇಕು‘ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ಸಂಸ್ಥೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು– 2021’, ಬಳಕೆದಾರರಿಗೆ ಮುಕ್ತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಮತ್ತು ಉತ್ತರದಾಯಿತ್ವದ ಇಂಟರ್ನೆಟ್ ಸೌಲಭ್ಯವನ್ನು ಖಾತರಿಪಡಿಸುವ ಉದ್ದೇಶ ಹೊಂದಿವೆ. ಇವುಗಳ ಅಡಿಯಲ್ಲಿ, ಸಾಮಾಜಿಕ ಜಾಲತಾಣಗಳು ಸೇರಿದಂತೆ ಡಿಜಿಟಲ್ ಸಂಸ್ಥೆಗಳು ಕೆಲವು ಮಾರ್ಗಸೂಚಿಗಳನ್ನು ಪಾಲಿಸಲೇಬೇಕು.

ಯಾವುದೇ ವ್ಯಕ್ತಿಯ ಖಾಸಗಿ ಅಂಗಗಳನ್ನು ಪ್ರದರ್ಶಿಸುವ, ಪೂರ್ತಿ ನಗ್ನ ಅಥವಾ ಅರೆನಗ್ನ ಸ್ಥಿತಿಯಲ್ಲಿರುವ ಅಥವಾ ಯಾವುದೇ ಲೈಂಗಿಕ ಚಟುವಟಿಕೆ ಅಥವಾ ನಡವಳಿಕೆಯನ್ನು ತೋರಿಸುವಂತಹ ವಸ್ತು/ವಿಷಯಗಳನ್ನು 24 ಗಂಟೆಗಳ ಒಳಗಾಗಿ ಆನ್ಲೈನ್ನಿಂದ ತೆಗೆಯಬೇಕು

ಭಾರತದಲ್ಲಿ ಅಶ್ಲೀಲ ವಿಡಿಯೊ, ಚಿತ್ರಗಳನ್ನು (ಪೋರ್ನೋಗ್ರಫಿ) ಖಾಸಗಿಯಾಗಿ ವೀಕ್ಷಿಸುವುದು ಅಪರಾಧ ಅಲ್ಲ. ಆದರೆ, ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು, ಪ್ರಕಟಿಸುವುದು, ಮಾರಾಟ ಮಾಡುವುದು, ಹಂಚುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ.

ಆಧಾರ: ಪಿಟಿಐ, ಪಿಐಬಿ ಪ್ರಕಟಣೆ, ಸಂಸತ್ತಿನಲ್ಲಿ ಸಚಿವರ ಉತ್ತರ, ವಿವಿಧ ಕಾಯ್ದೆಗಳು, ಎನ್ಸಿಆರ್ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.