ಚಿಂಚೋಳಿ: ತಾಲ್ಲೂಕಿನ ರಾಣಾಪುರ ಕ್ರಾಸ್ ಬಳಿ ಯುವಕರು ಸಾರಿಗೆ ಸಂಸ್ಥೆ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿ ಪುಂಡಾಟಿಕೆ ನಡೆಸಿರುವುದು ಸೋಮವಾರ ನಡೆದಿದೆ.

ಪ್ರಯಾಣಿಕರಿದ್ದ ಬಸ್ ಹೊರಡುವ ಮಾರ್ಗದಲ್ಲಿ ರಸ್ತೆ ಮೇಲೆ ಬೊಲೆರೊ ವಾಹನ ನಿಲ್ಲಿಸಿದ್ದರಿಂದ ಬಸ್ ಚಾಲಕ ಪೃಥ್ವಿರಾಜ ಘೀರಾಸಿಂಗ್ ವಾಹನವನ್ನು ಬದಿಗೆ ನಿಲ್ಲಿಸುವಂತೆ ವಾಹನದ ಯುವಕರಿಗೆ ಕೋರಿದ್ದಾರೆ. ಪಾನಿ ಪುರಿ ತಿನ್ನುತ್ತಿದ್ದ ಯುವಕರು ಚಾಲಕನ ಮಾತಿಗೆ ಸ್ಪಂದಿಸಿಲ್ಲ. ಆಗ ಮತ್ತೆ ಚಾಲಕ ಮನವಿ ಮಾಡಿದ್ದಾರೆ. ಆದರೂ ವಾಹನ ತೆಗೆಯದೇ ಬೊಲೆರೊದಲ್ಲಿದ್ದ ಯುವಕರು, ನಮಗೆ ವಾಹನ ತೆಗೆಯಲು ಹೇಳುವ ನೀನ್ಯಾರು ಎಂದು ಚಾಲಕನನ್ನು ಎಳೆದಾಡಿ ಒದ್ದು ಪುಂಡಾಟಿಕೆ ಮೆರೆದಿದ್ದಾರೆ.

ಹಲ್ಲೆಗೊಳಗಾದ ಚಾಲಕ ಪೃಥ್ವಿರಾಜ ಅವರನ್ನು ಚಿಂಚೋಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಟಕಲ್ ಠಾಣೆಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.