ಅಹಮದಾಬಾದ್ನಲ್ಲಿ ಗುರುವಾರ ನಡೆದ ಏರ್ ಇಂಡಿಯಾ ವಿಮಾನ ಅಪಘಾತವು ಇತ್ತೀಚೆಗೆ ನಡೆದ ಘೋರ ವಿಮಾನ ದುರಂತವಾಗಿದ್ದು, ಘಟನೆಯಲ್ಲಿ 241 ಪ್ರಯಾಣಿಕರು ಸೇರಿದಂತೆ ಕನಿಷ್ಠ 265 ಜನರು ಮೃತಪಟ್ಟಿದ್ದಾರೆ.

ಅಹಮದಾಬಾದ್ ವಿಮಾನ ದುರಂತವು ಈ ವರ್ಷದಲ್ಲಿ ನಡೆದ ಪ್ರಮುಖ ದುರಂತಗಳಲ್ಲಿ ಒಂದಾಗಿದ್ದು, 2025ರಲ್ಲಿ ಭಾರತದಲ್ಲಿ ನಡೆದ ದುರಂತಗಳ ಕುರಿತ ಮಾಹಿತಿ ಇಲ್ಲಿದೆ..
.ಅಹಮದಾಬಾದ್ | ದೇಶದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ: ಕನಿಷ್ಠ 265 ಸಾವು.
ಕುಂಭಮೇಳಕ್ಕೆ ಹೋದವರು ಕಾಲ್ತುಳಿತಕ್ಕೆ ಬಲಿಯಾದರು:

ವರ್ಷದ ಆರಂಭದಲ್ಲಿ ಉತ್ತರಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದ ಕುಂಭಮೇಳವು ಅತಿಹೆಚ್ಚು ಜನರು ಸೇರಿದ ಧಾರ್ಮಿಕ ಕಾರ್ಯಕ್ರಮವಾಗಿತ್ತು. ಭಾರತದ ಹಲವು ಭಾಗಗಳಿಂದಷ್ಟೇ ಅಲ್ಲದೇ ಜಗತ್ತಿನ ವಿವಿಧೆಡೆಯಿಂದ ಕೋಟಿಗೂ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ 40ಕ್ಕೂ ಅಧಿಕ ಜನರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದರು. ಆದರೆ, ಅಧಿಕೃತ ಮಾಹಿತಿಗಾಗಿ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು.

ಸುರಂಗದೊಳಗೆ ಜೀವಂತ ಸಮಾಧಿಯಾದ ಕಾರ್ಮಿಕರು:

2025ರ ಫೆಬ್ರುವರಿಯಲ್ಲಿ ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆ(ಎಸ್ಎಲ್ಬಿಸಿ) ಸುರಂಗದ ಕಾಮಗಾರಿ ವೇಳೆ ನಡೆದ ಅವಘಡದಲ್ಲಿ ಇಂಜಿನಿಯರ್ ಹಾಗೂ ಕಾರ್ಮಿಕರು ಸೇರಿ ಒಟ್ಟು ಏಳು ಜನರು ಸುರಂಗದೊಳಗೆ ಸಿಲುಕಿದ್ದರು. ಸತತ ಒಂದು ತಿಂಗಳುಗಳ ಕಾಲ ರಕ್ಷಣಾ ಕಾರ್ಯಾಚರಣೆ ಮುಂದುವರೆದಿತ್ತು. ಹೈಡ್ರಾಲಿಕ್ ಚಾಲಿತ ರೋಬಾಟ್ಗಳನ್ನು ಕೂಡ ಶೋಧ ಕಾರ್ಯಚರಣೆಗೆ ಬಳಸಿಕೊಳ್ಳಲಾಗಿತ್ತು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು.

ಕಪ್ ನಮ್ದೆ ಎನ್ನುವಾಗ ‘ತಪ್ಪು ನಮ್ದೆ’ ಆಗೋಯ್ತು:

ಸತತ 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆದ್ದು ತವರಿನಲ್ಲಿ ಸಂಭ್ರಮಾಚರಣೆ ಮಾಡಲು ಸಿದ್ದವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಅಭಿಮಾನಿಗಳ ಸಂಭ್ರಮ ಕೆಲವೇ ಗಂಟೆಗಳಲ್ಲಿ ನಿರಾಸೆಯಾಗಿ ಬದಲಾಗಿತ್ತು. ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಎದುರು ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದರು. ಹಲವು ಅಭಿಮಾನಿಗಳು ಗಂಭೀರ ಗಾಯಗೊಂಡಿದ್ದರು. ಐಪಿಎಲ್ ಸಂಭ್ರಮಾಚರಣೆ ವೇಳೆ ನಡೆದ ಅತಿದೊಡ್ಡ ಕಾಲ್ತುಳಿತ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.