ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ಮೋದಿ: ಆರ್‌ಎಸ್‌ಎಸ್‌ನಿಂದ ಪ್ರಧಾನಿ ಹುದ್ದೆ ವರೆಗೆ

Last Updated 16 ಸೆಪ್ಟೆಂಬರ್ 2021, 20:37 IST
ಅಕ್ಷರ ಗಾತ್ರ

1972-75: ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದ ನರೇಂದ್ರ ಮೋದಿ. ಅಹಮದಾಬಾದ್‌ನಲ್ಲಿ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಘಟಕ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಘಟಕ ಆರಂಭ. ತುರ್ತುಪರಿಸ್ಥಿತಿ ವಿರುದ್ಧ ಹೋರಾಟ

1987: ಬಿಜೆಪಿ ಸೇರ್ಪಡೆ. ನಂತರದ ಒಂದೇ ವರ್ಷದಲ್ಲಿ ಗುಜರಾತ್ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ. ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಭಾಗಿ. 1988ರಲ್ಲಿ ಎಲ್‌.ಕೆ.ಅಡ್ವಾಣಿ ಅವರ ಸೋಮನಾಥ-ಅಯೋಧ್ಯಾ ರಥಯಾತ್ರೆಯಲ್ಲಿ ಭಾಗಿ

1995: ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ನಂತರ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಡ್ತಿ

2001: ಭುಜ್ ಭೂಕಂಪ ನಿರ್ವಹಣೆಯಲ್ಲಿನ ವೈಫಲ್ಯದ ಸಂಬಂಧ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ವಿರುದ್ಧ ಆಕ್ರೋಶ. ಕೇಶುಭಾಯ್ ರಾಜೀನಾಮೆ. 2001ರ ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಆಯ್ಕೆ. 2002ರ ಫೆಬ್ರುವರಿಯಲ್ಲಿ ಮೊದಲ ಬಾರಿ ಚುನಾವಣೆಗೆ ಸ್ಪರ್ಧೆ, ವಿಧಾನಸಭೆಗೆ ಆಯ್ಕೆ

2002: ಗೋಧ್ರಾ ಗಲಭೆ ಮತ್ತು ಗೋಧ್ರೋತ್ತರ ಹತ್ಯಾಕಾಂಡ. ಹತ್ಯಾಕಾಂಡಕ್ಕೆ ಕುಮ್ಮಕ್ಕು ನೀಡಿದ ಆರೋಪ. ದೇಶದಾದ್ಯಂತ ಮೋದಿ ಅವರ ಕ್ರಮಗಳ ಬಗ್ಗೆ ತೀವ್ರ ಆಕ್ಷೇಪ. ಮೋದಿ ವಿರುದ್ಧ ದೂರು ದಾಖಲು. ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆ. ಸಾಕ್ಷ್ಯ ಲಭ್ಯವಿಲ್ಲದ ಕಾರಣ ಮೋದಿ ಖುಲಾಸೆ. ಮೋದಿ ಅವರ ನಡವಳಿಕೆಯನ್ನು ಖಂಡಿಸಿದ ಬ್ರಿಟನ್

2002ರ ಡಿಸೆಂಬರ್: ಗುಜರಾತ್‌ ವಿಧಾನಸಭೆ ಚುನಾವಣೆ: ಮೋದಿ ನೇತೃತ್ವದಲ್ಲಿ ಬಿಜೆಪಿ ಜಯಭೇರಿ. 182ರಲ್ಲಿ 127 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿದ ಬಿಜೆಪಿ. ಮೋದಿ ಮತ್ತೆ ಮುಖ್ಯಮಂತ್ರಿ

2005: ಗೋಧ್ರೋತ್ತರ ಹತ್ಯಾಕಾಂಡದಲ್ಲಿನ ಆರೋಪದ ಆಧಾರದಲ್ಲಿ ಮೋದಿಗೆ ವೀಸಾ ನೀಡಲು ನಿರಾಕರಿಸಿದ ಅಮೆರಿಕ

2007: ಮೋದಿ ನೇತೃತ್ವದಲ್ಲಿ ಮತ್ತೆ ಚುನಾವಣೆ ಗೆದ್ದು ಸರ್ಕಾರ ರಚಿಸಿದ ಬಿಜೆಪಿ. ಮೋದಿ ಮತ್ತೆ ಮುಖ್ಯಮಂತ್ರಿ

2012:ಮೋದಿ ನೇತೃತ್ವದಲ್ಲಿ ಮತ್ತೆ ಚುನಾವಣೆ ಗೆದ್ದು ಸರ್ಕಾರ ರಚಿಸಿದ ಬಿಜೆಪಿ. ಮೋದಿ ಮತ್ತೆ ಮುಖ್ಯಮಂತ್ರಿ. ಮೋದಿ ಮಾದರಿ, ಗುಜರಾತ್ ಮಾದರಿ ಅಭಿವೃದ್ಧಿ ಎಂಬ ಪರಿಕಲ್ಪನೆ ಪ್ರಚಾರಕ್ಕೆ. ಹೆಚ್ಚಿದ ಮೋದಿ ಜನಪ್ರಿಯತೆ

2013: ಮೋದಿ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ನಡೆಸುವುದಾಗಿ ಘೋಷಿಸಿದ ಬಿಜೆಪಿ

2014: ಭಾರಿ ಬಹುಮತದೊಂದಿಗೆ ಲೋಕಸಭಾ ಚುನಾವಣೆ ಗೆದ್ದ ಬಿಜೆಪಿ. ಪ್ರಧಾನಿಯಾಗಿ ಮೋದಿ ಆಯ್ಕೆ

2016ರ ನವೆಂಬರ್: ₹500 ಮತ್ತು ₹1,000 ಮುಖಬೆಲೆಯ ನೋಟುಗಳ ರದ್ದತಿ. ಮೋದಿಯ ಈ ಕ್ರಮಕ್ಕೆ ಒಂದೆಡೆ ಶ್ಲಾಘನೆ, ಮತ್ತೊಂದೆಡೆ ಭಾರಿ ಟೀಕೆ. ಭ್ರಷ್ಟಚಾರ, ಭಯೋತ್ಪಾದನೆ ನಿಯಂತ್ರಣಕ್ಕಾಗಿ ಈ ಕ್ರಮ ಎಂದು ಮೋದಿ ಹೇಳಿಕೆ. ಅಮಾನ್ಯೀಕರಣದಿಂದ ನೋಟು ವಿನಿಮಯಕ್ಕೆ ಬ್ಯಾಂಕ್‌ಗಳ ಎದುರು ಮುಗಿಬಿದ್ದ ಜನ. ಸರತಿಯಲ್ಲಿ ನಿಂತೇ ನೂರಾರು ಮಂದಿ ಸಾವು. ಚಲಾವಣೆಯಲ್ಲಿದ್ದ ಶೇ 99.83ರಷ್ಟು ನಗದು ಆರ್‌ಬಿಐಗೆ ವಾಪಸ್

2017ರ ಜುಲೈ 1: ಒಂದು ದೇಶ, ಒಂದು ತೆರಿಗೆ ಪರಿಕಲ್ಪನೆಯ ಸರಕು ಮತ್ತು ಸೇವಾ ತೆರಿಗೆ ಜಾರಿ. ಹಲವು ಉದ್ಯಮಗಳಿಗೆ ನೆರವು. ಕೆಲವು ಉದ್ಯಮಗಳಿಗೆ ತೊಡಕು. ಕೇಂದ್ರ ಸರ್ಕಾರದ ತೆರಿಗೆ ಮೂಲದ ಆದಾಯ ಏರಿಕೆ. ಉದ್ಯಮಗಳಿಗೆ ಹೊಡೆತ

2019ರ ಮೇ: ‘ಮತ್ತೊಮ್ಮೆ ಮೋದಿ ಸರ್ಕಾರ’ ಘೋಷಣೆ ಅಡಿ ಲೋಕಸಭಾ ಚುನಾವಣೆ ಎದುರಿಸಿದ ಬಿಜೆಪಿ. ಭಾರಿ ಬಹುಮತದೊಂದಿಗೆ ಮತ್ತೆ ಅಧಕಾರಕ್ಕೆ. ಮೋದಿ ಮತ್ತೆ ಪ್ರಧಾನಿ

2019ರ ಆಗಸ್ಟ್ 5: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು. ಜಮ್ಮು-ಕಾಶ್ಮೀರವನ್ನು ವಿಭಜಿಸಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಸ್ಥಾಪನೆ. ಅಲ್ಲಿನ ಜನರಿಂದ ತೀವ್ರ ಪ್ರತಿರೋಧ. ರಾಜಕೀಯ ನಾಯಕರ ಗೃಹ ಬಂಧನ. ಎರಡು ವರ್ಷ ಇಂಟರ್ನೆಟ್ ಸ್ಥಗಿತ. ಸೇನಾ ಕಾರ್ಯಾಚರಣೆ

2019ರ ಅಕ್ಟೋಬರ್: ನೆರೆಯ ದೇಶಗಳ ಮುಸ್ಲಿಮೇತರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ. ದೇಶದಾದ್ಯಂತ ಪ್ರತಿಭಟನೆ. ದೆಹಲಿಯಲ್ಲಿ ಗಲಭೆ. ಹಲವರ ಸಾವು

2020ರ ಮಾರ್ಚ್‌: ಕೋವಿಡ್ ಲಾಕ್‌ಡೌನ್ ಘೋಷಣೆ. ಕಾರ್ಮಿಕರ ಮರುವಲಸೆ. ಹಸಿವು, ಅಪಘಾತಗಳಿಂದ ಸಾವಿರಾರು ಕಾರ್ಮಿಕರ ಸಾವು. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ವಿಫಲ ಎಂದು ವಿಪಕ್ಷಗಳ ಟೀಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT