'ಕೊಟ್ಟ ಆಹಾರ ಮಕ್ಕಳಿಗೆ ತಿನಿಸಲಿ’

ಅಂಗನವಾಡಿ ಶಾಲೆಗೆ ಬರುವ ಮಕ್ಕಳಲ್ಲಿ ಅಪೌಷ್ಠಿಕತೆ ಕಡಿಮೆ ಮಾಡಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ತೊಗರಿ ಬೇಳೆ, ಹೆಸರು ಬೇಳೆ, ಅಕ್ಕಿ ಸೇರಿದಂತೆ ವಿವಿಧ ಬೇಳೆಗಳ ಮಿಶ್ರಣದ ಹಿಟ್ಟು ಕೊಡಲಾಗುತ್ತಿದೆ. ಮೊಟ್ಟೆ, ಹಾಲು ಹಾಗೂ ಬಾಳೆಹಣ್ಣು ಕೂಡ ನೀಡಲಾಗುತ್ತಿದೆ. ಪೋಷಕರು ತಪ್ಪದೆ ಇವುಗಳನ್ನು ಮಕ್ಕಳಿಗೆ ತಿನ್ನಿಸಬೇಕು. ಮಗುವಿಗೆ ಸರಿಯಾಗಿ ಎದೆ ಹಾಲು ಉಣಿಸಿ ಸರ್ಕಾರ ನೀಡುವ ಆಹಾರವನ್ನು ನಿಯಮಿತವಾಗಿ ನೀಡಿದರೆ ಮಕ್ಕಳಲ್ಲಿ ಪೌಷ್ಠಿಕಾಂಶ ಪ್ರಮಾಣ ಹೆಚ್ಚಾಗುತ್ತದೆ.

ಲತಾ ಘೋಡಕೆ, ಅಂಗನವಾಡಿ ಕಾರ್ಯಕರ್ತೆ, ಹುಬ್ಬಳ್ಳಿ

‘ಹಿಟ್ಟಿನ ರೂಪದ ಆಹಾರ ಉತ್ತಮ’

ನನ್ನಿಬ್ಬರು ಮಕ್ಕಳು ಅಂಗನವಾಡಿಗೆ ಹೋಗುತ್ತಿದ್ದಾರೆ. ಅಲ್ಲಿ ಕೊಡುತ್ತಿರುವ ಆಹಾರ ಉತ್ತಮವಾಗಿದೆ. ಬಹಳಷ್ಟು ಮಕ್ಕಳು ಕಾಳು, ಬೇಳೆ ನೇರವಾಗಿ ತಿನ್ನುವುದಿಲ್ಲ. ಆದ್ದರಿಂದ ಈಗ ಸರ್ಕಾರ ಹಿಟ್ಟಿನ ರೂಪದಲ್ಲಿ ಕೊಡುತ್ತಿರುವುದರಿಂದ ಅದನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಕೊಡಲಾಗುತ್ತಿದೆ. ಅಂಗನವಾಡಿಯಲ್ಲಿ ನೀಡುವ ಹಿಟ್ಟಿನ ಜೊತೆಗೆ ನಾವೂ ಕೂಡ ಮನೆಯಲ್ಲಿ ಸಾಧ್ಯವಾದಷ್ಟು ಪೌಷ್ಠಿಕ ಆಹಾರ ಕೊಡಬೇಕು. ಮನೆ ಹಾಗೂ ಶಾಲೆ ಎರಡೂ ಕಡೆ ಪೌಷ್ಠಿಕ ಆಹಾರ ಕೊಟ್ಟರೆ ಮಕ್ಕಳ ಬೆಳವಣಿಗೆ ಚೆನ್ನಾಗಿ ಇರುತ್ತದೆ.

ರಾಜಶೇಖರ ಪೂಜಾರ, ಪೋಷಕರು ಕೊಪ್ಪಳ

‘ತಾಯಿ ಹಾಲು ಅತ್ಯುತ್ತಮ’

ಮಗು ಹುಟ್ಟಿದ ಮೊದಲ ಅರ್ಧಗಂಟೆಯಿಂದಲೇ ತಾಯಿ ಹಾಲುಣಿಸಬೇಕು. ಆರರಿಂದ ಮೊದಲ ಒಂದು ವರ್ಷದ ಅವಧಿಯಲ್ಲಿ ಮಗು ಎಷ್ಟು ಹಾಲು ಕುಡಿಯುತ್ತದೆಯೋ; ಅಷ್ಟು ಚೆನ್ನಾಗಿ ಬೆಳೆಯುತ್ತದೆ. ಬಹುತೇಕ ತಾಯಂದಿರು ಮಗು ಹುಟ್ಟಿದ ಕೆಲ ದಿನಗಳಲ್ಲಿಯೇ ಬಾಟಲಿ ಹಾಲು ಅಥವಾ ಪೌಡರ್ನಿಂದ ಮಾಡಿದ ಹಾಲು ಕುಡಿಸುವ ರೂಢಿ ಆರಂಭಿಸುತ್ತಾರೆ. ಇದರಿಂದಾಗಿ ಮಗುವಿನಲ್ಲಿ ಪೌಷ್ಠಿಕಾಂಶ, ಕಬ್ಬಿಣದ ಅಂಶ ಸೇರಿದಂತೆ ಹಲವು ತೊಂದರೆಗಳು ಕಾಡುತ್ತವೆ. ವಯಸ್ಸಿಗೆ ಅನುಗುಣವಾಗಿ ಎತ್ತರ ಮತ್ತು ತೂಕದ ಬೆಳವಣಿಗೆ ಆಗುವುದಿಲ್ಲ. ಈ ಕೊರತೆ ಕಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ

ಶಿಲ್ಪಾ ಮಾಕಳಿ, ಕಿಮ್ಸ್ ಮಕ್ಕಳ ವಿಭಾಗದ ವೈದ್ಯೆ, ಹುಬ್ಬಳ್ಳಿ

‘ಹಿಟ್ಟು ಬೇಡ, ಬೇಳೆ ಕೊಡಲಿ’

ಆರು ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ ಮೊದಲು ತೊಗರಿಬೇಳೆ, ಹೆಸರು ಬೇಳೆ, ಅಕ್ಕಿ ಹೀಗೆ ಹಲವು ಕಾಳು, ಬೇಳೆಗಳನ್ನು ಕೊಡಲಾಗುತ್ತಿತ್ತು. ಅದನ್ನು ಪ್ರತ್ಯೇಕವಾಗಿ ಹಿಟ್ಟು ಮಾಡಿಸಿ ಅವರಿಗೆ ಬೇಕಾದ್ದನ್ನು ತಿನ್ನಿಸುತ್ತಿದ್ದೆವು. ಈಗ ಎಲ್ಲವೂ ಸೇರಿ ಹಿಟ್ಟಿನ ಪ್ಯಾಕೇಟ್ ನೀಡಲಾಗುತ್ತಿದೆ. ಹಿಟ್ಟು ಗುಣಮಟ್ಟದ್ದಾಗಿರುವುದಿಲ್ಲ. ಎಲ್ಲಾ ಬೇಳೆಗಳನ್ನು ಮಿಶ್ರಣ ಮಾಡಿರುವುದರಿಂದ ಕೆಲಬಾರಿ ವಾಸನೆಯಿಂದ ಕೂಡಿರುತ್ತದೆ. ಬೇಳೆಗಳು ಹಸಿಯಾಗಿದ್ದಾಗಲೇ ಹಿಟ್ಟು ಮಾಡುವುದರಿಂದ ಹೀಗಾಗುತ್ತದೆ. ಆದ್ದರಿಂದ ಹಿಟ್ಟಿನ ಬದಲು ಕಾಳುಗಳು ಹಾಗೂ ಹಣ್ಣುಗಳನ್ನು ಕೊಟ್ಟರೆ ಉತ್ತಮ.

ಸ್ವಾತಿ ಶಿವನಗೌಡರ, ಪೋಷಕರು, ಹುಬ್ಬಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.