ನಾಗರಹೊಳೆ ಹಾಡಿಯ ಮಹಿಳೆಯರು ಕೆರೆಯಲ್ಲಿ ನೀರು ಸಂಗ್ರಹಿಸುತ್ತಿರುವ ಚಿತ್ರ.
ಮಹದೇಶ್ವರ ಬೆಟ್ಟದ ಹಣೆಹೊಲ ಹಾಡಿಗೆ ಹೋಗುವ ರಸ್ತೆ ಈ ಸ್ಥಿತಿಯಲ್ಲಿದೆ
ಇಂಡಿಗನತ್ತ ಪಡಸಲನತ್ತ ಹಾಗೂ ಸುತ್ತಮುತ್ತಲ ಪ್ರದೇಶಗಳ ಜನರು ಈಚೆಗೆ ಅನಾರೋಗ್ಯಪೀಡಿತರನ್ನು ಈಚೆಗೆ ಡೋಲಿಯಲ್ಲಿ ಹೊತ್ತೊಯ್ದರು
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಎಂ.ಸಿ.ಹಳ್ಳಿಯ ಪ್ರಸ್ತುತ ಚಿತ್ರಣ
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಎಂ.ಸಿ.ಹಳ್ಳಿಯಲ್ಲಿ ಪುನರ್ವಸತಿ ಕಲ್ಪಿಸುವ ಸಂದರ್ಭದಲ್ಲಿ ನಿರ್ಮಿಸಿದ್ದ ಮನೆಗಳು. (ಸಂಗ್ರಹ ಚಿತ್ರ)

ಅರಣ್ಯ ಒತ್ತುವರಿ ಮಾಡಿದ ಕುಟುಂಬಗಳಿಗೆ ಪರಿಹಾರ ನೀಡಿ, ಸ್ಥಳಾಂತರ ಮಾಡುವ ಮೂಲಕ ಕಾಯ್ದೆ ಉಲ್ಲಂಘನೆಗೆ ಪ್ರಚೋದಿಸಲಾಗಿದೆ. ಅರ್ಜಿಗಳ ಇತ್ಯರ್ಥ ಆಗುವ ಮುನ್ನವೇ ಸ್ಥಳಾಂತರಿಸಲಾಗಿದೆ. ಇಷ್ಟಾದರೂ ಕಾಳಿ ಹುಲಿ ಮೀಸಲಿನ ಪುನರ್ವಸತಿ ಯೋಜನೆಯನ್ನು ‘ಮಾದರಿ ಯೋಜನೆ’ ಎಂದು ಬಿಂಬಿಸಲಾಗುತ್ತಿದೆ.
– ರೇಷ್ಮಾ, ಮಾನವ ಹಕ್ಕು ಹೋರಾಟಗಾರ್ತಿ, ದಕ್ಷಿಣಕನ್ನಡ ಜಿಲ್ಲೆ
ಸರ್ಕಾರ ಗಿರಿಜನರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ವಿಫಲವಾಗಿದೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಾಗೂ ಮೂಲಭೂತ ಸವಲತ್ತು ಇಲ್ಲ. ವಾಲ್ಮೀಕಿ ಆಶ್ರಮ ವಸತಿ ಶಾಲೆಯಲ್ಲಿ ಅಲ್ಪ ಮಟ್ಟದ ಸುಧಾರಣೆ ಕಂಡಿದ್ದು ಭವಿಷ್ಯದ ಕುಡಿಗಳಿಗೆ ಧ್ವನಿ ಸಿಗುವ ವಿಶ್ವಾಸವಿದೆ.
– ಹರ್ಷ, ಆದಿವಾಸಿ ಗಿರಿಜನ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ, ಹೆಮ್ಮಿಗೆ ಹಾಡಿ, ಹುಣಸೂರು ತಾ.
ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಾಡಿಗಳು ಮತ್ತು ಕಾಡಂಚಿನ ಕೋಮಲಾಪುರ ಹಾಡಿ, ಹರಳಹಳ್ಳಿಹಾಡಿ, ಅತ್ತಿಗೆಹಾಡಿ ಜನರು ವಿದ್ಯುತ್, ನೀರು, ರಸ್ತೆ, ಮನೆ ಇಲ್ಲದೆ ಕಾಡಿನ ಪ್ರಾಣಿಗಳಂತೆ ವಾಸ ಮಾಡುತ್ತಿದ್ದಾರೆ.
–ವಡ್ಡರಗುಡಿ ಪುಟ್ಟಬಸವ, ಲ್ಯಾಂಪ್ಸ್ ಮಾಜಿ ಅಧ್ಯಕ್ಷ, ಎಚ್.ಡಿ.ಕೋಟೆ ತಾಲ್ಲೂಕು.ಪರಿಕಲ್ಪನೆ: ಜಿ.ಡಿ.ಯತೀಶ್‌ಕುಮಾರ್
ಪೂರಕ ಮಾಹಿತಿ: ಎಸ್.ರವಿಪ್ರಕಾಶ್, ಮಲ್ಲಿಕಾರ್ಜುನ ನಾಲವಾರ, ಎಚ್.ಎಸ್.ಸಚ್ಚಿತ್, ಮೋಹನ್‌ಕುಮಾರ್ ಸಿ., ಬಿ.ಜೆ.ಧನ್ಯಪ್ರಸಾದ್, ಸಂತೋಷ್ ಚಿನಗುಡಿ, ಎಸ್.ಕೆ.ವಿಜಯಕುಮಾರ್.