ಮಂಗಳವಾರ, ಜೂನ್ 28, 2022
26 °C

ಫ್ಯಾಕ್ಟ್ ಚೆಕ್: ಅಸ್ಸಾಂನಲ್ಲೇ ಪ್ರತ್ಯೇಕ ಬಾಂಗ್ಲಾದೇಶಕ್ಕೆ ಆಗ್ರಹಿಸಿ ಪ್ರತಿಭಟನೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಸ್ಸಾಂನಲ್ಲಿ ಪ್ರತಿಭಟನೆ–ವಿಡಿಯೊ ಒಂದರ ಸ್ಕ್ರೀನ್‌ ಶಾಟ್‌

‘ಅಸ್ಸಾಂನಲ್ಲೇ ಪ್ರತ್ಯೇಕ ಬಾಂಗ್ಲಾದೇಶಕ್ಕೆ ಆಗ್ರಹಿಸಿ ಅಲ್ಲಿನ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಲುವಾಗಿ ಪೊಲೀಸರ ಜತೆ ಘರ್ಷಣೆಗೆ ಇಳಿದಿದ್ದಾರೆ. ಮತ್ತೆ ಭಾರತವನ್ನು ವಿಭಜನೆ ಮಾಡಲು ಯತ್ನಿಸುತ್ತಿದ್ದಾರೆ’ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಸ್ಲಿಮರು ಪ್ರತಿಭಟನೆ ನಡೆಸುತ್ತಿರುವ ಮತ್ತು ಪೊಲೀಸರ ಜತೆ ಘರ್ಷಣೆಗೆ ಇಳಿದಿರುವ ಹತ್ತಾರು ವಿಡಿಯೊಗಳನ್ನು ಈ ಪೋಸ್ಟ್‌ಗಳ ಜತೆ ಹಂಚಿಕೊಳ್ಳಲಾಗಿದೆ. ಮುಸ್ಲಿಮರು ಮತ್ತೆ ದೇಶ ವಿಭಜನೆ ಮಾಡಲು ಬಿಡಬಾರದು ಎಂದು ಈ ಪೋಸ್ಟ್‌ಗಳಲ್ಲಿ ಆಗ್ರಹಿಸಲಾಗಿದೆ.

ಆದರೆ ಈ ವಿಡಿಯೊಗಳ ಜತೆ ಹಂಚಿಕೊಳ್ಳಲಾಗಿರುವ ಸುದ್ದಿ ಮತ್ತು ವಿವರ ಸುಳ್ಳು ಎಂದು ಆಲ್ಟ್‌ ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಈ ವಿಡಿಯೊಗಳಲ್ಲಿ ಇರುವ ಪ್ರತಿಭಟನಕಾರರು ಮತ್ತು ಪೊಲೀಸರಲ್ಲಿ ಒಬ್ಬರೂ ಮಾಸ್ಕ್ ಧರಿಸಿಲ್ಲ. ಹೀಗಾಗಿ ಇದು ಕೋವಿಡ್‌ ಪೂರ್ವದಲ್ಲಿ ನಡೆದಿದ್ದ ಪ್ರತಿಭಟನೆಯ ಚಿತ್ರ ಎಂಬುದು ಸಾಬೀತಾಗಿದೆ. ಮೂಲ ವಿಡಿಯೊಗಳನ್ನು ಹುಡುಕಿದಾಗ ಅದು 2017ರ ಜುಲೈನಲ್ಲಿ ನಡೆದ ಪ್ರತಿಭಟನೆ ಎಂಬುದು ಪತ್ತೆಯಾಯಿತು. ಪೌರತ್ವ ನೋಂದಣಿಯ ಅಂಗವಾಗಿ ‘ಅನುಮಾನಾಸ್ಪದ ಪೌರರು’ ಎಂಬ ಪಟ್ಟಿಯನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆಯ ವಿಡಿಯೊಗಳು ಇವು ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು