ಮಂಗಳವಾರ, ಆಗಸ್ಟ್ 4, 2020
22 °C

ಕೋವಿಡ್ ರೋಗಿ ಆರೈಕೆಗೆ ಕೇಂದ್ರದಿಂದ ಪುರಸಭೆಗಳಿಗೆ ₹1.5 ಲಕ್ಷ : ನಿಜ ಸಂಗತಿ ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

factcheck

‘ದೇಶದೆಲ್ಲೆಡೆ ಕೋವಿಡ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾ ವೈರಸ್ ದೃಢಪಟ್ಟ ಪ್ರತಿಯೊಬ್ಬ ರೋಗಿಯ ಆರೈಕೆಗೆ ಕೇಂದ್ರ ಸರ್ಕಾರವು ₹1.5 ಲಕ್ಷವನ್ನು ದೇಶದ ಪುರಸಭೆಗಳಿಗೆ ಪಾವತಿ ಮಾಡುತ್ತಿದೆ’ ಎಂಬ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ಮೂಲ ಮರಾಠಿ. ಬಳಿಕ ಹಿಂದಿಯಲ್ಲೂ ಈ ಸಂದೇಶ ಪ್ರಸರಣ ಆಗುತ್ತಿದೆ. ‘ಕೇಂದ್ರದ ಹಣವನ್ನು ಪಡೆಯುವ ಉದ್ದೇಶದಿಂದ, ಸಾಮಾನ್ಯ ನೆಗಡಿ ಹಾಗೂ ಸಣ್ಣ ಜ್ವರದಿಂದ ಬಳಲುವ ಜನರನ್ನೂ ಕೋವಿಡ್ ರೋಗಿಗಳು ಎಂದು ಘೋಷಿಸಲಾಗುತ್ತಿದೆ’ ಎಂಬ ಅಂಶವೂ ಒಂದು ಸಂದೇಶದಲ್ಲಿ ಇದೆ. ಇದು ನಿಜವೇ ಎಂದು ಹಲವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಎಲ್ಲ ರಾಜ್ಯಗಳ ಜೊತೆ ಕೇಂದ್ರ ಸರ್ಕಾರ ಕೈಜೋಡಿಸಿರುವುದು ನಿಜ. ಆದರೆ ಪ್ರತಿ ರೋಗಿಯ ಆರೈಕೆಗೆ ಪುರಸಭೆಗಳಿಗೆ ಒಂದೂವರೆ ಲಕ್ಷ ರೂಪಾಯಿ ಹಣ ಜಮೆ ಮಾಡುವ ಯಾವ ಯೋಜನೆಯನ್ನೂ ಕೇಂದ್ರ ಸರ್ಕಾರ ಘೋಷಿಸಿಲ್ಲ. ಈ ಕುರಿತ ಸುತ್ತೋಲೆ ಅಥವಾ ಪತ್ರಿಕಾ ವರದಿಗಳು ಕಂಡುಬಂದಿಲ್ಲ ಎಂದು ಲಾಜಿಕಲ್ ಇಂಡಿಯನ್ಸ್ ಫ್ಯಾಕ್ಟ್‌ ಚೆಕ್ ವೇದಿಕೆ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು