ಶನಿವಾರ, ಡಿಸೆಂಬರ್ 5, 2020
21 °C

FactCheck| ಕೇಂದ್ರದ ನೌಕರಿಗೆ ಗರಿಷ್ಠ ವಯಸ್ಸಿನ ಮಿತಿ 32 ರಿಂದ 26ಕ್ಕೆ ಇಳಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರಿ ನೌಕರಿಗೆ ಸೇರಿ, ದೊಡ್ಡ ಹುದ್ದೆ ಪಡೆದುಕೊಳ್ಳುವ ಕನಸು ಬಹಳ ಜನರಿಗೆ ಇದೆ. ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ)  ಪ್ರತೀ ವರ್ಷ ಪರೀಕ್ಷೆಗಳನ್ನು ನಡೆಸಿ, ಅರ್ಹ ಹಾಗೂ ಪ್ರತಿಭಾವಂತರನ್ನು ಆಯ್ಕೆ ಮಾಡುತ್ತದೆ. ಆದರೆ ಪರೀಕ್ಷೆ ತೆಗೆದುಕೊಳ್ಳಲು ಇರುವ ವಯಸ್ಸಿನ ಮಿತಿಯನ್ನು ಗರಿಷ್ಠ 32 ವರ್ಷದಿಂದ 26 ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಹೀಗೆಂದು ಹಿಂದಿ ಪತ್ರಿಕೆಯೊಂದು ಲೇಖನ ಪ್ರಕಟಿಸಿದೆ. ಈ ಸುದ್ದಿಯ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. 

ಪರೀಕ್ಷೆ ಬರೆಯುವ ವಯಸ್ಸಿನ ಮಿತಿಯನ್ನು ಇಳಿಕೆ ಮಾಡಿದ ಸುದ್ದಿಯನ್ನು ಪಿಐಪಿ ಫ್ಯಾಕ್ಟ್‌ಚೆಕ್ ವೇದಿಕೆ ಪರಿಶೀಲನೆ ನಡೆಸಿದ್ದು, ಸತ್ಯಾಂಶ ಕಂಡುಬಂದಿಲ್ಲ. ಇದು ದಾರಿ ತಪ್ಪಿಸುವ ವರದಿಯಾಗಿದ್ದು, ಯುಪಿಎಸ್‌ಸಿ ಇಂತಹ ಯಾವುದೇ ಪ್ರಕಟಣೆ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು