ಗುರುವಾರ , ಮಾರ್ಚ್ 30, 2023
24 °C

Fact Check| BBC ಸಾಕ್ಷ್ಯಚಿತ್ರಕ್ಕೂ ರಾಹುಲ್ ಜೊತೆಗಿರುವ ವ್ಯಕ್ತಿಗೂ ಸಂಬಂಧವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬ್ರಿಟನ್‌ನ ಬಿಬಿಸಿ ನಿರ್ಮಿಸಿರುವ ‘ಇಂಡಿಯಾ: ದಿ ಮೋದಿ ಕ್ವಶ್ಚನ್’ ಸಾಕ್ಷ್ಯಚಿತ್ರವು ಭಾರತದಲ್ಲಿ ವಿವಾದ ಸೃಷ್ಟಿಸಿದೆ. ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ನಡೆದ ಗೋಧ್ರೋತ್ತರ ಹತ್ಯಾಕಾಂಡದ ವಿಷಯವನ್ನು ಒಳಗೊಂಡಿರುವ ಈ ಸಾಕ್ಷ್ಯಚಿತ್ರವನ್ನು ಭಾರತ ನಿಷೇಧಿಸಿದೆ. ಸಾಕ್ಷ್ಯಚಿತ್ರ ನಿರ್ಮಾಪಕರ ಜೊತೆ ಕಾಂಗ್ರೆಸ್ ನಾಯಕ ರಾಹುಲ್ ಕಾಣಿಸಿಕೊಂಡಿದ್ದಾರೆ’ ಎಂಬ ವಿವರ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾಕ್ಷ್ಯಚಿತ್ರ ನಿರ್ಮಾಣದ ಹಿಂದೆ ರಾಹುಲ್ ಕೈವಾಡವಿದೆ ಎಂಬುದಾಗಿ ಚರ್ಚೆಯಾಗುತ್ತಿದೆ. ಆದರೆ ಇದು ಸುಳ್ಳು.

ಚಿತ್ರದಲ್ಲಿ ರಾಹುಲ್ ಗಾಂಧಿ ಹಾಗೂ ಉದ್ಯಮಿ ಸ್ಯಾಮ್ ಪಿತ್ರೊಡಾ ಜೊತೆ ಕಾಣಿಸಿಕೊಂಡಿರುವ ವ್ಯಕ್ತಿ ಬ್ರಿಟನ್‌ನ ಲೇಬರ್ ಪಾರ್ಟಿಯ ಮಾಜಿ ನಾಯಕ ಜೆರೆಮಿ ಕಾರ್ಬೈನ್. 2022ರ ಮೇನಲ್ಲಿ ಲಂಡನ್‌ನಲ್ಲಿ ಜೆರೆಮಿ ಅವರನ್ನು ರಾಹುಲ್ ಭೇಟಿಯಾಗಿದ್ದ ಚಿತ್ರವನ್ನೇ, ಬಿಬಿಸಿ ಸಾಕ್ಷ್ಯಚಿತ್ರ ನಿರ್ಮಾಪಕರ ಜತೆಗಿನ ಚಿತ್ರ ಎಂಬುದಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ‘ಇಂಡಿಯಾಟುಡೇ’ ವರದಿ ಮಾಡಿದೆ. ರಿಚರ್ಡ್ ಕುಕ್ಸನ್‌ ಹಾಗೂ ಮೈಕ್ ರ್‍ಯಾಡ್‌ಫೋರ್ಡ್ ಅವರು ಬಿಬಿಸಿ ಸಾಕ್ಷ್ಯಚಿತ್ರ ನಿರ್ಮಿಸಿದ ಮಾಹಿತಿ ಬಿಬಿಸಿ ಅಧಿಕೃತ ತಾಣದಲ್ಲಿ ಇದೆ. ಜೆರೆಮಿ ಅವರಿಗೂ, ಬಿಬಿಸಿಗೂ ಯಾವುದೇ ನಂಟಿಲ್ಲ ಎಂದು ಇಂಡಿಯಾಟುಡೇ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು