Fact check| ಪಶ್ಚಿಮ ಬಂಗಾಳದ ಸ್ಥಿತಿ ಪಾಕಿಸ್ತಾನದಂತಾಗಿದೆಯೇ, ಆ ವಿಡಿಯೊ ಅಸಲಿಯೇ?

ದುಷ್ಕರ್ಮಿಗಳ ಗುಂಪೊಂದು ರಸ್ತೆಯಲ್ಲಿ ಸಾಗುವ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೊ ವೈರಲ್ ಆಗಿದೆ. ‘ಈ ಘಟನೆಯು ಕೋಲ್ಕತ್ತದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಪರಿಸ್ಥಿತಿಯು ಪಾಕಿಸ್ತಾನದಂತೆ ಆಗಿದೆ. ಮುಸ್ಲಿಮರ ಗುಂಪೊಂದು ವಾಹನಗಳಿಗೆ ಕಲ್ಲು ಹೊಡೆದು ಹಿಂಸಾಚಾರ ನಡೆಸುತ್ತಿದೆ. ರಸ್ತೆಯಲ್ಲಿ ಕುಳಿತು ತಮ್ಮ ಉಪವಾಸ ಮುರಿಯುವ ಸಲುವಾಗಿ ಅವರು ಈ ರೀತಿ ನಡೆದುಕೊಂಡಿದ್ದಾರೆ. ಸದ್ಯದಲ್ಲೇ ಈ ರೀತಿಯ ಘಟನೆಗಳು ದೇಶದಾದ್ಯಂತ ನಡೆಯುತ್ತವೆ’ ಎಂದು ಅಡಿಬರಹ ನೀಡಲಾಗಿದೆ.
ಈ ವಿಡಿಯೊ ಜೊತೆ ಹಂಚಲಾಗಿರುವ ಮಾಹಿತಿ ಸಂಪೂರ್ಣ ಸುಳ್ಳು ಎಂದು ದಿ ಲಾಜಿಕಲ್ ಇಂಡಿಯನ್ ವೇದಿಕೆಯು ವರದಿ ಮಾಡಿದೆ. ಈ ಘಟನೆಯು ನಾಲ್ಕು ವರ್ಷಗಳ ಕೆಳಗೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದಿತ್ತು. ಸ್ವಿಟ್ಜರ್‌ಲ್ಯಾಂಡ್‌ನ ಸೇಂಟ್ ಜಾಕೊಬ್ ಕ್ರೀಡಾಂಗಣದಲ್ಲಿ ಬಾಸೆಲ್ ಮತ್ತು ಲ್ಯೂಸೆರ್ನ್ ತಂಡಗಳ ನಡುವೆ ಫುಟ್‌ಬಾಲ್ ಚಾಂಪಿಯನ್‌ಶಿಪ್ ನಡೆದ ಬಳಿಕ ಉಭಯ ತಂಡದ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು. ಹಲವಾರು ಮಾಧ್ಯಮಗಳು ಈ ಘಟನೆ ಕುರಿತು 2018ರ ಮೇ 21 ರಂದು ವರದಿ ಮಾಡಿದ್ದವು ಎಂದು ದಿ ಲಾಜಿಕಲ್ ಇಂಡಿಯನ್ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.